Advertisement

ಉನ್ನತ ಸಾಧನೆಗೆ ಶ್ರದ್ಧೆ ಮುಖ್ಯ

06:55 AM Jan 07, 2019 | Team Udayavani |

ಬೆಂಗಳೂರು: ಜೀವನದಲ್ಲಿ ಉನ್ನತ ಸಾಧನೆ ಮಾಡಲು ಶ್ರದ್ಧೆ, ಪ್ರಯತ್ನ, ತಾಳ್ಮೆ ಅತ್ಯಗತ್ಯ. ಜತೆಗೆ ಗುರು ಹಿರಿಯರ ಬಗ್ಗೆ ಗೌರವ ಹೊಂದಿರಬೇಕು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

Advertisement

ನಗರದ ಬಂಟ್ಸ್‌ ಸಂಘದಲ್ಲಿ ಬಡೆದ ಸೇಂಟ್‌ ಪೌಲ್ಸ್‌ ಶಾಲೆಯ ಬೆಳ್ಳಿ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಜತೆಗೆ ತಮ್ಮಲ್ಲಿ ಅಡಗಿರುವ ಪ್ರತಿಭೆ ಹೊರಹಾಕುವ ಮೂಲಕ ಸಮಾಜ ಹಾಗೂ ರಾಷ್ಟ್ರಕ್ಕೆ ಕೊಡುಗೆ ನೀಡಬೇಕು ಎಂದರು.

ಸಂಸ್ಥಾಪಕ ಕಾರ್ಯದರ್ಶಿಗಳಾದ ಎಚ್‌.ಎಸ್‌.ಪಾಲಾಕ್ಷ ಮೂರ್ತಿ 25 ವರ್ಷಗಳ ಸಾರ್ಥಕ ಸೇವೆಯ ಸಂಭ್ರಮದ ಹೆಜ್ಜೆಗಳನ್ನು ವಿವರಿಸಿದರು. ಇದೇ ವೇಳೆ 25 ವರ್ಷಗಳ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಶಿವಲಿಂಗೇಗೌಡ, ನಿವೃತ್ತ ಐಎಎಸ್‌ ಅಧಿಕಾರಿ ದಯಾಶಂಕರ್‌, ನ್ಯಾಯವಾದಿ ವೇದಮೂರ್ತಿ, ಬಿಡಿಎ ಅಧಿಕಾರಿ ಬಾಲಸುಬ್ರಮಣ್ಯ, ಪ್ರಿನಸಿಪಾಲ್‌ ಡಾ.ಎನ್‌.ಟಿ.ರೂಪಾ ಪಾಲ್ಗೊಂಡಿದ್ದರು. ಇದೇ ವೇಳೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next