Advertisement

ಇನ್ನೂ 300 ಶಿಥಿಲಾವಸ್ಥೆ ಕಟ್ಟಡಗಳ ಪತ್ತೆ

01:43 PM Oct 19, 2021 | Team Udayavani |

ಬೆಂಗಳೂರು: ಬಿಬಿಎಂಪಿ ನಗರದಲ್ಲಿ ಕಳೆದ 15 ದಿನಗಳಿಂದನಡೆಸಿದ ಸಮೀಕ್ಷೆಯಲ್ಲಿ ಹಿಂದಿನ 185 ಕಟ್ಟಡ ಹೊರತುಪಡಿಸಿ ಹೊಸದಾಗಿ ಒಟ್ಟು 300 ಕಟ್ಟಗಳುಶಿಥಿಲಾವಸ್ಥೆಯಲ್ಲಿರುವುದು ಪತ್ತೆಯಾಗಿದೆ. ಈ ಮೂಲಕರಾಜಧಾನಿಯಲ್ಲಿ ಒಟ್ಟಾರೆ ಶಿಥಿಲಾವಸ್ಥೆಯ ಕಟ್ಟಡಗಳ ಸಂಖ್ಯೆ568ಕ್ಕೆ ಹೆಚ್ಚಳವಾಗಿದೆ.

Advertisement

ಈ ಕುರಿತು ಸೋಮವಾರ ಮಾಹಿತಿ ನೀಡಿದ ಬಿಬಿಎಂಪಿಮುಖ್ಯ ಆಯುಕ್ತ ಗೌರವ ಗುಪ್ತ, ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕಳೆ ಎರಡು ವಾರದಿಂದ ಶೀಥಲಾವಸ್ಥೆಯಲ್ಲಿರುವಕಟ್ಟಡ ಸಮೀಕ್ಷೆ ನಡೆಸಲಾಗಿದೆ. ಹೊಸ ಸಮೀಕ್ಷೆಯಲ್ಲಿ 300ಕಟ್ಟಡಗಳು ಪತ್ತೆಯಾಗಿವೆ. ನೋಟಿಸ್‌ ನೀಡಿದ ತಕ್ಷಣ ಮನೆಅಗತ್ಯವಿರುವ ದುರಸ್ತಿ ಕಾರ್ಯಗಳನ್ನು ಮಾಡಿಸಿಕೊಂಡುಗುಣಮಟ್ಟದ ಬಗ್ಗೆ ತಾಂತ್ರಿಕ ವರದಿಯನ್ನು ಬಿಬಿಎಂಪಿಗೆನೀಡಬೇಕು.

ಒಂದು ವೇಳೆ ನೋಟಿಸ್‌ಗೆ ಯಾವುದೇಪ್ರತಿಕ್ರಿಯೆ ಬರದ ಮತ್ತು ತುರ್ತು ತೆರವುಮಾಡಬೇಕಾದ ಕಟ್ಟಡಗಳನ್ನು ಬಿಬಿಎಂಪಿ ಯಿಂದಲೇಶೀಘ್ರ ನೆಲಸಮ ಮಾಡಲಾಗುವುದು ಎಂದರು.ಅನಧಿಕೃತ ಕಟ್ಟಡಗಳ ತೆರವಗೊಳಿಸಲು ಕಾರ್ಯವನ್ನುಪ್ರತಿ ವಲಯದಲ್ಲಿ ನಿಯೋಜನೆಗೊಂಡಿರುವಗುತ್ತಿಗೆದಾರರು ನಿರ್ವಹಿಸಲಿದ್ದಾರೆ.

ಗುತ್ತಿಗೆದಾರ ನಿಯೋಜನೆಮಾಡದೇ ಇರುವ ವಲಯದಲ್ಲಿ ಸಂಬಂಧಪಟ್ಟ ಕಾರ್ಯಪಾಲಕಅಭಿಯಂತರರು ಮುಂದಿನ 15 ದಿನಗಳಲ್ಲಿ ಅಲ್ಪಾವಧಿಯಲ್ಲಿಟೆಂಡರ್‌ ಪಕ್ರಿಯೇ ಪೂರ್ಣಗೊಳಿಸಿ,ಗುತ್ತಿಗೆದಾರ ತೆರವುಮಾಡಲು ಕ್ರಮಕೈಗೊಳ್ಳಲಾಗುವುದು ಎಂದರು.

ಬಹುಮಹಡಿ ಕಟ್ಟಡಗಳ ಸಮೀಕ್ಷೆ: ನಗರದಲ್ಲಿನಿರ್ಮಾಣವಾಗಿರುವ ಅನಧಿಕೃತ ಕಟ್ಟಡ ಮತ್ತುಬಹುಮಹಡಿ ಕಟ್ಟಡಗಳನ್ನು ನಿರ್ಮಾಣಕ್ಕೆ ಬಿಬಿಎಂಪಿಕಾಯ್ದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ, ಕಳೆದ10 ವರ್ಷದಲ್ಲಿ 1,178 ಕಟ್ಟಡಗಳು ಮಾತ್ರ ಅನುಮತಿಪಡೆದಿವೆ. ಉಳಿದ 5 ಸಾವಿರಕ್ಕೂ ಅಧಿಕ ಎತ್ತರದ ಕಟ್ಟಡಗಳುಪಾಲಿಕೆಯಿಂದ ಅನುಮತಿಯನ್ನು ಪಡೆದುಕೊಂಡಿಲ್ಲ ಎಂಬಬಗ್ಗೆ ಮಾಹಿತಿಯಿದೆ.

Advertisement

ಆದರೆ, ಇದಕ್ಕೆ ಸಂಬಂಧಿಸಿದಂತೆಯಾವುದೇ ಸ್ಪಷ್ಟ ಆಧಾರ ಮತ್ತು ವರದಿಗಳು ಇಲ್ಲ. ಹೀಗಾಗಿ,ಅಕ್ರಮ ಕಟ್ಟಡ ನಿರ್ಮಾಣ, ಬಿಬಿಎಂಪಿಯಿಂದ ಅನುಮತಿಪಡೆದಿರುವುದಕ್ಕಿಂತ ಹೆಚ್ಚಿನ ಮಹಡಿಯನ್ನು ನಿರ್ಮಿಸಿದ ಬಗ್ಗೆಸಮೀಕ್ಷೆ ನಡೆಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದುಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next