Advertisement
ದುರಸ್ತಿಗೆ ಸಾರ್ವಜನಿಕರ ಆಗ್ರಹವಿದ್ಯಾರ್ಥಿಗಳು, ಸಾರ್ವಜನಿಕರು ಆಶ್ರಯಿಸುವ ಪ್ರಯಾಣಿಕರ ಬಸ್ಸು ತಂಗುದಾಣವು ಕುಸಿದು ಬೀಳುವ ಹಂತದಲ್ಲಿದ್ದರೂ ಸಂಬಂಧಪಟ್ಟವರು ಇತ್ತ ಗಮನಹರಿಸುತ್ತಿಲ್ಲ. ತಂಗುದಾಣದ ಛಾವಣಿಯ ಮಚರದ ಪಕ್ಕಾಸು, ರೀಪುಗಳು ಶಿಥಿಲಗೊಂಡು ಮುರಿದು ಹೋಗಿವೆ. ಹೆಂಚುಗಳು ಆಗಲೋ, ಈಗಲೋ ಎನ್ನುವ ಸ್ಥಿತಿಯಲ್ಲಿದೆ. ಮುಂಬರುವ ಮಳೆಗಾಲಕ್ಕೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಸಾರ್ವಜನಿಕರು ಈ ತಂಗುದಾಣವನ್ನೇ ಹೆಚ್ಚಾಗಿ ಉಪಯೋಗಿಸುವುದರಿಂದ ಅಪಾಯ ಸಂಭವಿಸುವ ಮೊದಲು ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಬೆಳಂದೂರಿನ ಪ್ರಯಾಣಿಕರ ತಂಗುದಾಣದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ದಿನಂಪ್ರತಿ ಆಶ್ರಯಿಸುತ್ತಿದ್ದು, ತಂಗುದಾಣದ ಛಾವಣಿ ಶಿಥಿಲಗೊಂಡಿರುವುದರಿಂದ ಯಾವಾಗ ಬೀಳುತ್ತದೆ ಎಂದು ಹೇಳಲಾಗದು. ತಂಗು ದಾಣದ ದುರಸ್ತಿಗೆ ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ಚಂದ್ರಶೇಖರ ಆಚಾರ್ಯ ಬನಾರಿ. ಕ್ರಿಯಾಯೋಜನೆ, ಅನುದಾನ
ಬಸ್ಸು ತಂಗುದಾಣದ ದುರಸ್ತಿಗೆ ಗ್ರಾಮ ಪಂಚಾಯತ್ ಸಭೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುದಾನ ಇಡಲಾಗಿದೆ. ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಕಾಮಗಾರಿ ಬಾಕಿಯಾಗಿದೆ. ಜತೆಗೆ ಬೆಳಂದೂರು ಶಾಲೆ ಎದುರಿನ ರಸ್ತೆ ದುರಸ್ತಿಗೂ ಅನುದಾನ ಇರಿಸಲಾಗಿದೆ.
– ನಝೀರ್ ದೇವಸ್ಯ, ಸದಸ್ಯರು, ಗ್ರಾ.ಪಂ. ಬೆಳಂದೂರು