ಇದರೊಂದಿಗೆ ಕೊರ್ಗಿ-ಹೆಸ್ಕಾತ್ತೂರು ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದಲ್ಲಿ ಕಳೆದ ಹಲವು ದಿನಗಳಿಂದಲೂ ವಿದ್ಯುತ್ ಕಂಬಗಳು ವಾಲಿಕೊಂಡಿದ್ದು, ಇದರಲ್ಲಿರುವ ವಿದ್ಯುತ್ ತಂತಿಗಳೂ ಜೋತಾಡುತ್ತಿವೆ. ನಿತ್ಯ ವಿದ್ಯಾರ್ಥಿಗಳ ಸಹಿತ ಹಲವಾರು ಮಂದಿ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಅವಘಡದ ಭೀತಿ ಕಾಡಿದೆ.
Advertisement
ಬೀಳುವ ಸ್ಥಿತಿಯಲ್ಲಿರುವ ಕಂಬಗಳ ಬಗ್ಗೆ ಸ್ಥಳೀಯರು ಹಿಂದೆ ನಡೆದ ಗ್ರಾಮಸಭೆಯಲ್ಲಿ ಗಮನಕ್ಕೆ ತಂದಿದ್ದರು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲವಾದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರ್ಗಿ ಪ್ರಮುಖ ಜನವಸತಿ ಪ್ರದೇಶದಲ್ಲಿ ಕಳೆದ ಎರಡು ವರ್ಷಗಳಿಂದಲೂ ವಿದ್ಯುತ್ ಕಂಬಗಳು ಶಿಥಿಲಾವಸ್ಥೆಯಲ್ಲಿದ್ದು ಈ ಬಗ್ಗೆ ಹಲವು ಬಾರಿ ಸಂಬಂಧಪಟ್ಟ ಸ್ಥಳೀಯಾಡಳಿತ ಹಾಗೂ ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದರೂ ಕೂಡಾ ಇದು ವರೆಗೆ ಯಾವುದೇ ಪ್ರಯೋಜನವಾಗಲಿಲ್ಲ .
-ಪ್ರಶಾಂತ್ ಆಚಾರ್ಯ ಕೊರ್ಗಿ, ಸ್ಥಳೀಯರು ಗಮನಕ್ಕೆ ತಂದಿದ್ದೇನೆ
ಪ್ರಮುಖ ಭಾಗದಲ್ಲಿರುವ ವಿದ್ಯುತ್ ಕಂಬವೊಂದು ಶಿಥಿಲಗೊಂಡಿರುವ ವಿಷಯದ ಬಗ್ಗೆ ಸಂಬಂಧಪಟ್ಟ ಮೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
-ಸುಧಾಕರ ಶೆಟ್ಟಿ ಪಿಡಿಒ, ಗ್ರಾ.ಪಂ.ಕೊರ್ಗಿ