ಮಂಡ್ಯ: ನಗರ ಹೊರವಲಯದ ಗುತ್ತಲು ಬಡಾ ವಣೆ ಬಳಿ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯದಿಂದ ವಿವಿಧ ಗ್ರಾಮಗಳಿಗೆ ತೆರಳುವ ಸಂಪರ್ಕ ಕಲ್ಪಿಸುವ ಹೆಬ್ಟಾಳ ಸೇತುವೆ ಶಿಥಿಲಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಗ್ರಾಮಾಂತರ ಪ್ರದೇಶದಿಂದ ಮಂಡ್ಯ ನಗರಕ್ಕೆ ಹಾಗೂ ಮಂಡ್ಯ ನಗರದಿಂದ ಮರಕಾಡುದೊಡ್ಡಿ, ಶ್ರೀನಿವಾಸಪುರ, ಎಸ್.ಡಿ.ಜಯರಾಂ ಬಡಾವಣೆ ಸೇರಿ ಬೆಂಗಳೂರು-ಮೈಸೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ.
ಅಲ್ಲದೇ, ಪ್ರಸಿದ್ಧ ಅರ್ಕೇಶ್ವರಸ್ವಾಮಿ ದೇವಾಲ ಯಕ್ಕೆ ಸಾಕಷ್ಟು ಭಕ್ತರು ಆಗಮಿಸುತ್ತಾರೆ. ಆದರೆ, ಮಳೆಯಿಂದ ಶಿಥಿಲಗೊಂಡು ಅಪಾಯದ ಅಂಚಿನಲ್ಲಿದೆ. ಮಳೆ ಬಂದಾಗ ಸೇತುವೆ ಮೇಲೆ ನೀರು: ಮಳೆ ಬಂದಾ ಗಲೆಲ್ಲ ತುಂಬಿ ಹರಿಯುವ ಹೆಬ್ಟಾಳ ಕಾಲುವೆ ನೀರು ಸೇತುವೆ ಮೇಲೆಲ್ಲ ಹರಿಯುತ್ತದೆ. ಇದರಿಂದ ರೈತರು, ವಾಹನ ಸವಾರರು, ದೇವಾಲಯದ ಭಕ್ತರು, ಸಾರ್ವಜ ನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ನೀರು ಕಡಿಮೆ ಯಾಗುವವರೆಗೂ ಕಾಯಬೇಕಾಗಿದೆ. ಅಲ್ಲದೆ, ಹೆಚ್ಚು ಮಳೆಯಾದಾಗ ದಿನವಿಡೀ ಕಾಯುವ ಪರಿಸ್ಥಿತಿ ಇದೆ. ಕೊರಕಲು ಬೀಳುತ್ತಿರುವ ಸೇತುವೆ: ಪ್ರಸ್ತುತ ವರ್ಷ ಸುರಿಯುತ್ತಿರುವ ಮಳೆಗೆ ಸೇತುವೆ ಕೊರಕಲು ಬೀಳುತ್ತಿದೆ. ಈಗಾಗಲೇ ಸೇತುವೆ ಮೇಲಿನ ಡಾಂಬರು ಕಿತ್ತು ಬಂದು ಗುಂಡಿಗಳಾಗಿವೆ. ಅಲ್ಲದೆ, ಸೇತುವೆ ಬಳಿ ಇರುವ ರಸ್ತೆ ಮಳೆ ನೀರಿಗೆ ಕೊರಕಲು ಬೀಳುತ್ತಿದ್ದು, ಕುಸಿಯುವ ಹಂತ ತಲುಪಿದೆ. ಇದರಿಂದ ವಾಹನ ಸವಾರರು, ಸಾರ್ವಜನಿಕರು ಸಂಚರಿಸಲು ಭಯಪಡುವಂಥ ಸ್ಥಿತಿ ನಿರ್ಮಾಣವಾಗಿದೆ.
ತಡೆಗೋಡೆ ಇಲ್ಲದ ಸೇತುವೆ: ಸೇತುವೆಯ 2 ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದ ಪರಿಣಾಮ ವಾಹನ ಸವಾರರಂತೂ ಜೀವ ಭಯದಲ್ಲೇ ಸಂಚರಿಸಬೇಕಾ ಗಿದೆ. ರೈತರು, ಮಹಿಳೆಯರು, ಮಕ್ಕಳಿಗೂ ತೊಂದರೆಯಾಗಿದೆ. ಸ್ವಲ್ಪ ಯಾಮಾರಿದರೂ ಸೇತುವೆಯಿಂದ ಕಾಲುವೆಗೆ ಬೀಳ್ಳೋದು ಕಟ್ಟಿಟ್ಟ ಬುತ್ತಿ ಎಂದು ವಾಹನ ಸವಾರರು ಹೇಳುತ್ತಾರೆ.
ಅಪಘಾತ: ರಸ್ತೆ ಹಾಗೂ ಸೇತುವೆ ಮೇಲ್ಭಾಗದಲ್ಲಿ ಮಳೆ ನೀರಿನಿಂದ ಕೊರಕಲು ಉಂಟಾಗಿ ಗುಂಡಿಗಳು ಸೃಷ್ಟಿಯಾಗಿ ಅಪಘಾತಗಳು ನಡೆಯುತ್ತಿವೆ. ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಸಾಕಷ್ಟು ಉದಾ ಹರಣೆಗಳಿವೆ. ಆದರೂ, ಸಂಬಂಧಪಟ್ಟ ಅ ಧಿಕಾರಿ ಗಳಾಗಲೀ, ಜಿಲ್ಲಾಡಳಿತವಾಗಲೀ ಕ್ರಮ ಕೈಗೊಂಡಿಲ್ಲ. ಇಲ್ಲದ ಸ್ವತ್ಛತೆ: ಸೇತುವೆ ಕೆಳಭಾಗದಲ್ಲಿ ಅನುಪಯುಕ್ತ ವಸ್ತುಗಳು ಬಿದ್ದಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಇದರಿಂದ ಸೇತುವೆಯೇ ಮೇಲೆ 3-4 ಅಡಿಗಳಷ್ಟು ನೀರು ಹರಿಯುತ್ತದೆ.
ಜಿಲ್ಲಾಧಿಕಾರಿ ಭೇಟಿ: ಇತ್ತೀಚೆಗೆ ನಗರ ಸಂಚಾರ ಮಾಡಿದ ಜಿಲ್ಲಾ ಧಿಕಾರಿ ಎಸ್.ಅಶ್ವತಿ, ಇಲ್ಲಿಗೂ ಭೇಟಿ ನೀಡಿ ಸೇತುವೆ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದ್ದರು. ಅಲ್ಲದೇ, ಸೇತುವೆ ಬಗ್ಗೆ ಕ್ರಮ ವಹಿಸುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ, ಇದುವ ರೆಗೂ ಸೇತುವೆ ದುರಸ್ತಿ ಮಾಡುವ ಬಗ್ಗೆ ಯಾವುದೇ ಕ್ರಮ ಆಗಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ಸೇತುವೆ ಶಿಥಿಲಗೊಂಡಿದೆ. ಮಳೆ ಬಂದಾಗ ಜಮೀನುಗಳಿಗೆ ಹೋಗಲು ಸಾಧ್ಯವಾಗಲ್ಲ. ಸೇತುವೆ ಮೇಲೆ ನೀರು ಹರಿಯುತ್ತದೆ. ಇಕ್ಕೆಲಗಳಲ್ಲಿ ತಡೆಗೋಡೆ ಇಲ್ಲದ ಪರಿಣಾಮ ಸಾರ್ವಜನಿಕರು, ಸವಾರರು ಜೀವ ಭಯದಲ್ಲೇ ಸಂಚರಿಸಬೇಕಾಗಿದೆ.
– ದೇವೇಗೌಡ, ರೈತ