Advertisement
ತೀರ್ಥಹಳ್ಳಿ ಹಾಗೂ ಭದ್ರಾವತಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಒಂದೇ ವೇದಿಕೆ ಏರಲು ನಿರಾಕರಿಸಿದ್ದ ಕಾರಣ ಉಪ ಚುನಾವಣೆಯಲ್ಲಿ ಈ ಕ್ಷೇತ್ರಗಳಲ್ಲಿ ನಿರೀಕ್ಷಿತ ಮತ ಗಳಿಕೆ ಸಾಧ್ಯವಾಗಿರಲಿಲ್ಲ. ಇದರಿಂದ ಕಡಿಮೆ ಅಂತರದಲ್ಲಿ ಮಧು ಬಂಗಾರಪ್ಪ ಸೋಲನುಭವಿಸಿದ್ದರು.
Related Articles
Advertisement
ಆದರೆ ಪ್ರತ್ಯೇಕವಾಗಿಯೂ ಪ್ರಚಾರ ಮಾಡಲಿಲ್ಲ. ಇದನ್ನೆಲ್ಲ ಗಮನಿಸುತ್ತಿದ್ದ ಡಿಕೆಶಿ ಶುಕ್ರವಾರ (ಏ.19) ಆಗಮಿಸುತ್ತಿದ್ದಂತೆ ತಡರಾತ್ರಿ ಸಭೆ ನಡೆಸಿ ಹಾಲಿ ಮತ್ತು ಮಾಜಿ ಶಾಸಕರ ಮನವೊಲಿಸಿ ಕೈ ಕುಲುಕಿಸಿದರು. ಇದು ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಭದ್ರಾವತಿ ಜನರಿಗೇ ಶಾಕ್: ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸಿನ ಮೇಲೆ ರಾಜಕಾರಣ ಮಾಡಿಕೊಂಡು ಬಂದಿದ್ದ ಎಂ.ಜೆ. ಅಪ್ಪಾಜಿ ಗೌಡ ಹಾಗೂ ಬಿ.ಕೆ. ಸಂಗಮೇಶ್ 30 ವರ್ಷಗಳಿಂದ ಮುಖಾಮುಖೀಯಾಗುತ್ತಿದ್ದಾರೆ.
ಇಬ್ಬರೂ ಪಕ್ಷೇತರರಾಗಿಯೇ ಖಾತೆ ತೆರೆದವರು. ಇಬ್ಬರ ನಡುವಿನ ಜಗಳಗಳು ತಾಲೂಕಿನ ಜನರನ್ನೇ ಬೆಚ್ಚಿಬೀಳಿಸಿವೆ. ಈ ಇಬ್ಬರೂ ಘಟಾನುಘಟಿ ನಾಯಕರು ಈಗ ಒಂದೇ ವೇದಿಕೆ ಏರಿರುವುದು ಟ್ರಬಲ್ ಶೂಟರ್ ಡಿಕೆಶಿ ಚಾಣಾಕ್ಷತನಕ್ಕೆ ಸಾಕ್ಷಿಯಾಗಿದೆ.
ಶಿವಕುಮಾರ್ ರಾಜ್ಯದ ಬೇರೆ ಕಡೆಯೂ ಪ್ರವಾಸದಲ್ಲಿರುವುದರಿಂದ ಸಹೋದರ ಡಿ.ಕೆ. ಸುರೇಶ್ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಲ್ಲದೇ 15ಕ್ಕೂ ಹೆಚ್ಚು ಸಚಿವರು ಹಾಗೂ ಶಾಸಕರು ಸಹ ಪ್ರತಿ ತಾಲೂಕಿನ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ಭೇದಿಸುತ್ತಾರಾ ಬಿಜೆಪಿ ಕೋಟೆ: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದಲ್ಲಿ ಏಳರಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಯಡಿಯೂರಪ್ಪ ಸಿಎಂ ಆದಾಗ ಮಾಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳು, ಸಂಘಟನೆ ಬಲ ಬಿಜೆಪಿಗೆ ಶ್ರೀರಕ್ಷೆಯಾಗಿವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಎಸ್.ಎಂ. ಕೃಷ್ಣ ಸೇರಿ ಅನೇಕರು ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಕೆಶಿ ಬಿಜೆಪಿ ಭದ್ರಕೋಟೆ ಹೇಗೆ ಭೇದಿಸುತ್ತಾರೆ ಕಾದುನೋಡಬೇಕಿದೆ.
ಯಡಿಯೂರಪ್ಪಗೆ ಟಾಂಗ್: ಡಿಕೆಶಿ ಚುನಾವಣಾ ರಣತಂತ್ರ ರೂಪಿಸಿದಷ್ಟೇ ಅಲ್ಲದೇ ಯಡಿಯೂರಪ್ಪ ವಿರುದ್ಧ ವಾಗ್ಧಾಳಿ ಕೂಡ ನಡೆಸುತ್ತಿದ್ದಾರೆ. ನೀರಾವರಿ ತಂದಿಲ್ಲ, ಅಚ್ಛೇ ದಿನ್ ಬಂದಿಲ್ಲ, ನಿಮ್ಮ ಮುಖಕ್ಕೆ ಏಕೆ ಮತ ಕೇಳುತ್ತಿಲ್ಲ, ಯಡಿಯೂರಪ್ಪ ಡೈರಿ ಹೀಗೆ ಅನೇಕ ವಿಷಯಗಳು ಪ್ರಸ್ತಾಪವಾಗುತ್ತಿವೆ.
* ಶರತ್ ಭದ್ರಾವತಿ