Advertisement

ನ್ಯಾಯ ವ್ಯವಸ್ಥೆಯಲ್ಲಿ ಡಿಜಿಟಲೀಕರಣ; ಏನಿದು ಇ- ಕೋರ್ಟ್‌ ಯೋಜನೆ?

12:22 AM Nov 28, 2022 | Team Udayavani |

ಸಂವಿಧಾನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ, ಸುಪ್ರೀಂಕೋರ್ಟ್‌ ನಲ್ಲಿ ನಾಲ್ಕು ಇ-ಕೋರ್ಟ್‌ ಯೋಜನೆಗಳನ್ನು ಅನಾವರಣಗೊಳಿಸಿದರು. ಇದರ ಪ್ರಮುಖ ಉದ್ದೇಶವೇ ಜನರಿಗೆ ಸುಲಭವಾಗಿ ನ್ಯಾಯ ವ್ಯವಸ್ಥೆಯ ಪರಿಚಯವಾಗಲಿ ಎಂಬುದು. ಹಾಗಾದರೆ ಏನಿದು ಯೋಜನೆ? ಇಲ್ಲಿದೆ ಮಾಹಿತಿ.

Advertisement

ವರ್ಚುವಲ್‌ ಜಸ್ಟಿಸ್‌ ಕ್ಲಾಕ್‌
ಕೋರ್ಟ್‌ಗಳ ಮಟ್ಟದಲ್ಲಿನ ನ್ಯಾಯ ವಿತರಣೆ ವ್ಯವಸ್ಥೆ, ಕೇಸ್‌ ಗಳ ಸ್ಥಾಪನೆ, ಕೇಸ್‌ಗಳ ವಿಲೇವಾರಿ, ಬಾಕಿ ಉಳಿದಿರುವ ಕೇಸ್‌ಗಳ ಮಾಹಿತಿಯನ್ನು ದಿನಂಪ್ರತಿ, ವಾರ ಅಥವಾ ತಿಂಗಳುಗಳ ಆಧಾರದಲ್ಲಿ ನೀಡುವುದು. ಕೋರ್ಟ್‌ಗಳಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯನ್ನು ಜನರಿಗೆ ನೀಡುವ ಮೂಲಕ ನ್ಯಾಯದಾನ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಇದರ ಉದ್ದೇಶ. ಕೋರ್ಟ್‌ ವೆಬ್‌ಸೈಟ್‌ ಮೂಲಕವೇ ಜನ ಈ ಸೌಲಭ್ಯ ಬಳಸಿಕೊಳ್ಳಬಹುದು.

ಜಸ್ಟ್‌ ಐಎಸ್‌ ಮೊಬೈಲ್‌ ಆ್ಯಪ್‌ 2.0
ಈ ಆ್ಯಪ್‌ ಜನರಿಗೆ ಲಭ್ಯವಿರುವುದಿಲ್ಲ. ಆದರೆ ನ್ಯಾಯಾಂಗ ಅಧಿಕಾರಿಗಳಿಗಾಗಿ ಮಾಡಿರುವಂಥ ವ್ಯವಸ್ಥೆ ಇದು. ಇದರಲ್ಲಿ ಯಾವ ನ್ಯಾಯಮೂರ್ತಿ ಅಥವಾ ನ್ಯಾಯಾಧೀಶರ ಅಧೀನದಲ್ಲಿ ಎಷ್ಟು ಕೇಸುಗಳು ಬಾಕಿ ಇವೆ?, ಎಷ್ಟು ವಿಲೇವಾರಿ ಆಗಿವೆ ಎಂಬ ಮಾಹಿತಿ ಸಿಗುತ್ತದೆ. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ ನ್ಯಾಯಮೂರ್ತಿಗಳಿಗೂ ಈ ಆ್ಯಪ್‌ ಲಭ್ಯವಿದ್ದು, ಈ ಮೂಲಕ ಅವರ ವ್ಯಾಪ್ತಿಯ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಎಷ್ಟು ಕೇಸುಗಳಿವೆ ಎಂಬ ಬಗ್ಗೆ ಮಾಹಿತಿ ಸಿಗಲಿದೆ.

ಡಿಜಿಟಲ್‌ಕೋರ್ಟ್‌
ಪೇಪರ್‌ರಹಿತ ನ್ಯಾಯಾಲಯಗಳನ್ನು ಮಾಡುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ.ಕೋರ್ಟ್‌ನ ಎಲ್ಲ ದಾಖಲೆಗಳು ಡಿಜಿಟಲ್‌ ರೂಪದಲ್ಲಿ ನ್ಯಾಯಮೂರ್ತಿಗಳಿಗೆ ಲಭ್ಯವಾಗಲಿವೆ.

ಎಸ್‌3ಡಬ್ಲ್ಯುಎಎಎಸ್‌ ವೆಬ್‌ಸೈಟ್‌ಗಳು
ಎಸ್‌3ಡಬ್ಲ್ಯುಎಎಎಸ್‌ನೊಳಗೆ ಐಸೆಕ್ಯೂರ್‌, ಸ್ಕೇಲಬಲ್‌ ಮತ್ತು ಸುಗಮ್ಯ ವೆಬ್‌ಸೈಟ್‌ಗಳಿವೆ. ಜಿಲ್ಲಾ ಹಂತದ ನ್ಯಾಯ ವ್ಯವಸ್ಥೆಯಲ್ಲಿನ ಮಾಹಿತಿಯನ್ನು ವ್ಯವಸ್ಥಿತವಾಗಿ ರೂಪಿಸಲು ಇದನ್ನು ಮಾಡಲಾಗಿದೆ. ಅಷ್ಟೇ ಅಲ್ಲ ಇದೊಂದು ಕ್ಲೌಡ್ ಬೇಸ್ಡ್ ವೆಬ್‌ಸೈಟ್‌ ಆಗಿದ್ದು, ಸುರಕ್ಷಿತವಾಗಿ ವೆಬ್‌ಸೈಟ್‌ಗಳು ಎಲ್ಲರಿಗೂ ಸಿಗುವಂತೆ ಮಾಡಲಾಗಿದೆ. ಇದು ಬಹುಭಾಷೆಯಲ್ಲಿ ಲಭ್ಯವಾಗಲಿದ್ದು, ನಾಗರಿಕ ಸ್ನೇಹಿ ಮತ್ತು ಅಂಗವಿಕಲ ಸ್ನೇಹಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next