Advertisement

ಉಡುಪಿ ನಗರ ಗ್ರಂಥಾಲಯಕ್ಕೆ ಡಿಜಿಟಲ್‌ ಸ್ಪರ್ಶ!

01:57 AM Jan 31, 2020 | Sriram |

ಉಡುಪಿ: ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಡಿಜಿಟಲ್‌ ಮಾಧ್ಯಮವೂ ಬೆಳೆಯುತ್ತಿದ್ದು, ಮೊಬೈಲ್‌, ಇಂಟರ್‌ನೆಟ್‌ ಯುಗದಲ್ಲಿ ಇ-ಪುಸ್ತಕಗಳಿಗೂ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ನಗರ ಗ್ರಂಥಾಲಯಕ್ಕೆ ಡಿಜಿಟಲ್‌ ಸ್ಪರ್ಶ ನೀಡಲಾಗಿದೆ.

Advertisement

272 ಗ್ರಂಥಾಲಯ ಡಿಜಿಟಲ್‌
ರಾಜ್ಯ ಸರಕಾರದ 272 ಗ್ರಂಥಾಲಯಗಳಿಗೆ ಡಿಜಿಟಲ್‌ ಸ್ಪರ್ಶ ನೀಡಲು ಸಿದ್ಧತೆ ನಡೆಸಿದ್ದು, ಚಾಮರಾಜ ನಗರ, ತಮಕೂರು, ಹಾವೇರಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿತ್ತು. ಓದುಗರಿಂದ ಉತ್ತಮ ಸ್ಪಂದನೆ ವ್ಯಕ್ತವಾದ ಹಿನ್ನೆಲೆ ರಾಜ್ಯದ 30 ಜಿಲ್ಲಾ ಕೇಂದ್ರಗಳು, 66 ನಗರ ಕೇಂದ್ರಗಳು, ಹೊಸ ತಾಲೂಕು ಸೇರಿದಂತೆ 176 ತಾಲೂಕು ಕೇಂದ್ರಗಳಲ್ಲಿ ಇ-ಲೈಬ್ರರಿ ಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಇ- ಗ್ರಂಥಾಲಯದಲ್ಲಿ ಏನಿದೆ?
ಡಿಜಿಟಲ್‌ ಗ್ರಂಥಾಲಯದಲ್ಲಿ 1ರಿಂದ 12ನೇ ತರಗತಿವರೆಗಿನ ಎÇÉ ರೀತಿಯ ಪಠ್ಯ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಇದಲ್ಲದೆ ಕೆಎಎಸ್‌ ಮತ್ತು ಐಎಎಸ್‌ ಸೇರಿದಂತೆ ವಿವಿಧ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಭಂಡಾರ ಹಾಗೂ ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ನಿಯತಕಾಲಿಕೆಗಳನ್ನು ಒಳಗೊಂಡಿದೆ. ಬೆರಳ ತುದಿಯಲ್ಲಿಯೇ ಎÇÉ ರೀತಿಯ ಮಾಹಿತಿಗಳನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಡಿಜಿಟಲ್‌ ಗ್ರಂಥಾಲಯದಲ್ಲಿ ಪಡೆದುಕೊಳ್ಳಬಹುದಾಗಿದೆ.

ಸದಸ್ಯತ್ವ ಪಡೆಯರಿ
ಓದುಗರು ಟಛls.ಞಜಿnಠಿಚಿಟಟk.cಟಞ ಗೆ ಲಾಗ್‌ಇನ್‌ ಆಗಿ ಗ್ರಂಥಾಲಯದ ಸದಸ್ಯತ್ವ ಪಡೆಯಬಹುದು. ಮೊಬೈಲ್‌, ಕಂಪ್ಯೂಟರ್‌ ಇಂಟರ್‌ನೆಟ್‌ ಸೌಲಭ್ಯ ಇರುವ ವರು ಲಾಗಿನ್‌ ಆಗಿ ಮನೆಯಲ್ಲೇ ಈ ಗ್ರಂಥಾಲಯದ ಪುಸ್ತಕ ಓದಬಹುದು.

ಆ ಸೌಕರ್ಯ ಇಲ್ಲದವರು ಉಡುಪಿ ಡಿಜಿಟಲ್‌ ಗ್ರಂಥಾಲಯದಲ್ಲಿ ಉಚಿತವಾಗಿ ಓದಲು ಅವಕಾಶವಿದೆ.ಗ್ರಂಥಾಲಯಕ್ಕೆ ಲಾಗ್‌ಇನ್‌ ಆಗಲು ಕಂಪ್ಯೂಟರ್‌ನಲ್ಲಿ ಹೆಸರು, ಪೋಷಕರ ಹೆಸರು, ಮೊಬೈಲ್‌ ನಂಬರ್‌, ಇ-ಮೇಲ್‌, ಜನ್ಮ ದಿನಾಂಕ, ವಿಳಾಸದ ಕಾಲಂ ಭರ್ತಿಮಾಡಬೇಕು. ಮೊಬೈಲ್‌ ಅಥವಾ ಇ-ಮೇಲ್‌ಗೆ ಒಟಿಪಿ ಬರುತ್ತದೆ. ಅದನ್ನು ದಾಖಲಿಸಿ ಲಾಗ್‌ಇನ್‌ ಮಾಡಿ ಪಾಸ್ವರ್ಡ್‌ ರಚಿಸಿಕೊಳ್ಳಬೇಕು. ಪ್ರತಿ ಬಾರಿ ಲಾಗ್‌ಇನ್‌ ಆಗುವಾಗ ಹೆಸರು ಅಥವಾ ಮೊಬೈಲ್‌ ನಂಬರ್‌ ಹಾಗೂ ಪಾಸ್ವರ್ಡ್‌ ಬಳಸಬೇಕು.

Advertisement

ಫೇಸ್‌ ಬುಕ್‌ ಜಾಲತಾಣ ಬ್ಲಾಕ್‌
ಡಿಜಿಟಲ್‌ ಗ್ರಂಥಾಲಯದಲ್ಲಿ ಯೂಟ್ಯೂಬ್‌, ಫೇಸುಬುಕ್‌ ಸೇರಿದಂತೆ ಮುಂತಾದ ಮನರಂಜನೆಯಂತಹ ಸಾಮಾಜಿಕ ಜಾಲತಾಣಗಳನ್ನು ಬ್ಲಾಕ್‌ ಮಾಡಲಾಗಿದೆ. ಗಂಭೀರ ಅಧ್ಯಯನಕ್ಕಷ್ಟೇ ಅವಕಾಶ ಕಲ್ಪಿಸಲಾಗಿದೆ. ಉದ್ಯೋಗ ಮಾಹಿತಿ, ಐಎಎಸ್‌, ಕೆಎಎಸ್‌ ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.

4 ಕಂಪ್ಯೂಟರ್‌-8 ಟ್ಯಾಬ್‌, ಮಾದರಿ ಪ್ರಶ್ನೆಪತ್ರಿಕೆ
ಉಡುಪಿ ಜಿಲ್ಲಾ ಹಾಗೂ ನಗರ ಗ್ರಂಥಾಲಯದಲ್ಲಿ 4 ಕಂಪ್ಯೂಟರ್‌ ಹಾಗೂ 8 ಟ್ಯಾಬ್‌ ಇವೆೆ. ಕನ್ನಡ, ಇಂಗ್ಲಿಷ್‌, ಹಿಂದಿ ಮತ್ತಿತರ ಭಾಷೆಗಳ ಇ-ನ್ಯೂಸ್‌ ಪೇಪರ್‌, 58 ಸಾವಿರಕ್ಕೂ ಹೆಚ್ಚು ಇ-ಮ್ಯಾಗಜಿನ್ಸ್‌, 17,800 ಪುಸ್ತಕಗಳ ಸಾಫ್ಟ್ ಕಾಪಿ, ಕಥೆ, ಕವನ, ಕಾದಂಬರಿ ಸೇರಿದಂತೆ ಪ್ರಸಿದ್ಧ ಲೇಖಕರ ಕೃತಿಗಳು, ಸಾಮಾನ್ಯ ಜ್ಞಾನ, ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ 200ಕ್ಕೂ ಹೆಚ್ಚು ಮಾದರಿ ಪ್ರಶ್ನೆ ಪತ್ರಿಕೆಗಳು, ಸಂಬಂಧಿಸಿದಂತೆ ಅಧ್ಯಯನದ ಇ-ಪುಸ್ತಕಗಳು ಗ್ರಂಥಾಲಯದಲ್ಲಿ ಓದಲು ಲಭ್ಯ ಇವೆ.

ಪ್ರಯೋಜನ ಪಡೆದುಕೊಳ್ಳಿ
ದೇಶದಲ್ಲಿಯೇ ಕರ್ನಾಟಕ ರಾಜ್ಯ ಅತ್ಯಧಿಕ ಗ್ರಂಥಾಲಯಗಳನ್ನು ಹೊಂದಿದೆ. ಸುಮಾರು 7,000 ಗ್ರಂಥಾಲಯಗಳಿವೆ. ಡಿಜಿಟಲ್‌ ಗ್ರಂಥಾಲಯ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ ಪೂರಕವಾಗಿದೆ. ಸಾರ್ವಜನಿಕರು ಡಿಜಿಟಲ್‌ ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಬೇಕು.
– ಸತೀಶ್‌ ಹೊಸಮನಿ,
ನಿರ್ದೇಶಕ, ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು.

Advertisement

Udayavani is now on Telegram. Click here to join our channel and stay updated with the latest news.

Next