Advertisement
ಹೌದು ಆಶ್ಚರ್ಯ ಎನಿಸಿದರೂ ಇದು ಸತ್ಯ. ವೀರಣ್ಣ ಅವರು ಮೂಲತಃ ಗದಗ ಜಿಲ್ಲೆ ಮುಂಡರಗಿತಾಲೂಕಿನ ಕಲಕೇರಿ ಗ್ರಾಮದವರು. ಕೃಷಿ ಕುಟುಂಬದಲ್ಲಿ ಜನಿಸಿದ ವೀರಣ್ಣ, ಹಾವೇರಿ ಜಿಲ್ಲೆ ಸವಣೂರು ತಾಲೂಕಿನಲ್ಲಿ 3 ವರ್ಷ, ಚಿಕ್ಕೋಡಿ ತಾಲೂಕಿನಲ್ಲಿ 6 ವರ್ಷ ಸೇವೆ ಸಲ್ಲಿಸಿ, ಸದ್ಯ ನಿಡಗುಂದಿ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
Related Articles
Advertisement
“ಶ್ರೀಮಂತರ ಮಕ್ಕಳಿಗೆ ದೊರಕುವ ಶಿಕ್ಷಣ, ಹಳ್ಳಿಯ ಬಡ ಮಕ್ಕಳಿಗೂ ಸಿಗುವಂತೆ ಆಗಬೇಕು.ಕಾನ್ವೆಂಟ್ ಶಾಲೆಗಳು ಶ್ರೇಷ್ಠ, ಸರ್ಕಾರಿ ಶಾಲೆಗಳುಕನಿಷ್ಠ ಎಂಬುದೇ ಸುಳ್ಳು. ಗ್ರಾಮೀಣ ಪ್ರದೇಶದಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು, ಆ ವಾತಾವರಣ ನಿರ್ಮಿಸುವ ಗುರಿ ನನ್ನದು. ನಮ್ಮಶಾಲೆ ಒಂದೇ ಅಲ್ಲ, ರಾಜ್ಯದ ಪ್ರತಿ ಸರ್ಕಾರಿಶಾಲೆಗಳೂ ಈ ದಿಸೆಯಲ್ಲಿ ಬೆಳವಣಿಗೆ ಹೊಂದಬೇಕು ಎಂಬುವುದೇ ನನ್ನ ಸದಾಶಯ’ ಎನ್ನುತ್ತಾರೆ ವೀರಣ್ಣ
ಇಲ್ಲಿ ಎಲ್ಲವೂ ಉಂಟು :
ಈ ಶಾಲೆಯಲ್ಲಿ ಬರೀ ಎರಡು ಕೋಣೆಗಳು ಮಾತ್ರಇವೆ. ಅವೆರಡೂ ಈಗ ಡಿಜಿಟಲ್ ಕ್ಲಾಸ್ ಗಳಾಗಿ ರೂಪಾಂತರ ಹೊಂದಿವೆ. ಗೋಡೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸಿ ಅಂದ ಹೆಚ್ಚಿಸಿರುವ ವೀರಣ್ಣ, ಶಾಲೆಯ ಮುಂದಿರುವ ಸಣ್ಣ ಮೈದಾನದಲ್ಲಿ ಕೈತೋಟವನ್ನೂ ನಿರ್ಮಿಸಿದ್ದಾರೆ. ಮಕ್ಕಳಿಗೆತರಗತಿಯಲ್ಲಿ ಕೂರಲು ಬಣ್ಣ ಬಣ್ಣದ ಕುರ್ಚಿಗಳುಮತ್ತು ಟೇಬಲ್‌ಗಳಿವೆ. ದೊಡ್ಡ ಟೀವಿ ಇದೆ, ಗ್ರೀನ್‌ಬೋರ್ಡ್ ಮೂಲಕ ಬೋಧನೆ ಮಾಡ್ತಾರೆ. ಮಕ್ಕಳಿಗೆಪಾಠ ಕೇಳಲು ಬೋರ್ ಎನಿಸಿದಾಗ ಯೂಟ್ಯೂಬ್‌ನಲ್ಲಿ ಟೀಚಿಂಗ್ ಕೊಡುವ ಸ್ಮಾರ್ಟ್ ಪ್ಲಸ್ ಕ್ಲಾಸ್‌ವ್ಯವಸ್ಥೆ ಇಲ್ಲಿದೆ.ವಾರಕ್ಕೊಮ್ಮೆ ಯೋಗತರಬೇತಿ ನೀಡ್ತಾರೆ. ಕಂಪ್ಯೂಟರ್‌ತರಬೇತಿ, ಜಾನಪದ ಗೀತಗಾಯನ, ಪದ್ಯ ರಚನೆ, ಹಾಡುಭಾಷಣ ಕಲೆ, ಆತ್ಮಸ್ಥೈರ್ಯತುಂಬುವ ಕಥಾವಾಚನ,ಮಕ್ಕಳಿಗೆ 4 ಜೋಡಿ ಕಲರ್ ಕಲರ್ ಸಮವಸ್ತ್ರ, ಮಕ್ಕಳಿಗೆ ಪ್ರತ್ಯೇಕ ಶೌಚಾಲಯ..ಹೀಗೆ ಎಲ್ಲಾ ಸೌಲಭ್ಯಗಳೂ ಇಲ್ಲುಂಟು.ಈ ಹಿಂದೆ 76 ಮಕ್ಕಳನ್ನುಹೊಂದಿದ್ದ ಶಾಲೆಯಲ್ಲಿ ಇಂದು 120 ಮಕ್ಕಳು ಖುಷಿಯಿಂದ ಓದುತ್ತಿದ್ದಾರೆ.
ಸೈನ್ಸ್ ಮ್ಯೂಸಿಯಂ ನಿರ್ಮಿಸುವ ಗುರಿ : “ಮಕ್ಕಳು ಬರೀ ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಕಡೆಗೂ ಹೆಚ್ಚು ಆಸಕ್ತಿ ತೋರ ಬೇಕು, ಶಾಲೆಯ ವಾತಾವರಣ ಬದಲಾವಣೆಮಾಡಿದರೆ, ಮಕ್ಕಳ ಕೌಶಲ್ಯ ತಂತಾನೇ ಬದಲಾ ಗುತ್ತದೆ. ಶಾಲೆಯಲ್ಲಿ ಮೂಲ ಸೌಕ ರ್ಯಗ ಳಿಲ್ಲದೇ ಬರೀಅವಸ್ಥೆ ತುಂಬಿದರೆ ಶಾಲೆಯಲ್ಲಿ ಮಕ್ಕಳು ಹೇಗೆ ತಾನೇ ಓದಲು ಆಸಕ್ತಿ ತೋರುವರು? ಈಗ ನಮ್ಮ ಶಾಲೆಯವಾತಾವರಣ ಬದಲಾ ವಣೆ ಆಗಿದೆ. ಖಾಸಗಿಶಾಲೆಯ ಮಕ್ಕಳು ನಮ್ಮ ಶಾಲೆಗೆ ಬರುತ್ತಿದ್ದಾರೆ. ಪ್ರತಿವರ್ಷ ದಾಖಲಾತಿ ಹೆಚ್ಚುತ್ತಿದೆ.
ಜಾಲತಾಣ ಬಳಕೆ :
ಈ ಶಾಲೆಯು ತನ್ನದೇ ಆದ ವೆಬ್‌ಸೈಟ್ ಹೊಂದಿದೆ. ತಮ್ಮ ಶಾಲೆಗೆ ಸಂಬಂಧಿಸಿದ ಎಲ್ಲಾ ಸಂಗತಿಯನ್ನೂ ವಿಡಿಯೋ, ಪೋಟೋ ರೂಪದಲ್ಲಿ //www.nannashale.in/klpsambe dkarnidagundi ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಾರೆ. ವೆಬ್ ಸೈಟ್ ಹೊಂದಿರುವ ರಾಜ್ಯದ ಮೊದಲ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಗ್ಗಳಿಕೆಗೂ ಈ ಶಾಲೆ ಪಾತ್ರವಾಗಿದೆ. ಶಾಲೆಯಪ್ರಗತಿಯನ್ನು ಸೋಶಿಯಲ್ ಮೀಡಿಯಾದಲ್ಲಿಕಂಡು ಹಲವು ಸ್ನೇಹಿತರು, ಶಿಕ್ಷಣ ತಜ್ಞರು, ವಿದೇಶದ ಸ್ನೇಹಿತರು ಶಾಲೆಗೆ ಅವಶ್ಯವಾಗಿರುವ ಸಾಮಗ್ರಿಗಳನ್ನು ದೇಣಿಗೆ ನೀಡಿದ್ದಾರೆ. ಹಲವರು ಆರ್ಥಿಕ ನೆರವು ನೀಡಿದರೆ, ಮತ್ತೂಬ್ಬರು ಹೊಸ ಕೋಣೆ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.
– ಬಾಲಾಜಿ ಕುಂಬಾರ, ಚಟ್ನಾಳ