Advertisement

ಪಂಚ ರಾಜ್ಯ ಪ್ರಚಾರಕ್ಕೆ ಡಿಜಿಟಲ್‌ ವೇದಿಕೆ; ಜಾಲತಾಣ ಬಳಕೆಗೆ ಇನ್ನಷ್ಟು ಪೈಪೋಟಿ

12:19 AM Jan 10, 2022 | Team Udayavani |

ಹೊಸದಿಲ್ಲಿ: ಉತ್ತರ ಪ್ರದೇಶ ಸಹಿತ ಐದು ರಾಜ್ಯಗಳ ಚುನಾವಣೆಗೆ ವೇಳಾಪಟ್ಟಿ ಬಿಡುಗಡೆಯಾಗಿದೆ. ಸೋಂಕಿನ ಹಿನ್ನೆಲೆಯಲ್ಲಿ ಜ. 15ರ ವರೆಗೆ ಬಹಿರಂಗ ಪ್ರಚಾರ ಮಾಡದಂತೆ ಚುನಾವಣ ಆಯೋಗ ಈಗಾಗಲೇ ತಿಳಿಸಿದೆ. ಆದ್ದರಿಂದ ಬಿಜೆಪಿ, ಕಾಂಗ್ರೆಸ್‌, ಎಸ್‌ಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಆನ್‌ಲೈನ್‌ ಅಥವಾ ವರ್ಚುವಲ್‌ ಪ್ರಚಾರಕ್ಕೆ ಮುಂದಾಗಿವೆ. ಸಾಮಾಜಿಕ ಜಾಲತಾಣವೆಂದರೆ ದೂರವೇ ಇರುತ್ತಿದ್ದ ಮಾಯಾವತಿ ನೇತೃತ್ವದ ಬಿಎಸ್‌ಪಿ ಕೂಡ ಹೊಸ ಪ್ರಚಾರ ತಂತ್ರದ ಮೊರೆ ಹೊಗುವ ಪರಿಸ್ಥಿತಿ ಉಂಟಾಗಿದೆ.

Advertisement

ಬಿಜೆಪಿ
-3ಡಿ ಸ್ಟುಡಿಯೋ ಮಿಕ್ಸ್‌, ಜೂಮ್‌ ಮತ್ತು ವೆಬ್‌ಎಕ್ಸ್‌ ಬಳಸುವಂತೆ ಪಕ್ಷದ ಐಟಿ ಸೆಲ್‌ಗೆ ಸೂಚನೆ
– 3ಡಿ ಸ್ಟುಡಿಯೋ ಮಿಕ್ಸ್‌ನಲ್ಲಿ ಎರಡು ಭಿನ್ನ ಸ್ಥಳ ಗಳಲ್ಲಿ ಇರುವ ನಾಯಕರನ್ನು ಒಂದೇ ವೇದಿಕೆ ಯಲ್ಲಿರುವಂತೆ ಚಿತ್ರಿಸಲಾಗುತ್ತದೆ.
– ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂ, ವಾಟ್ಸ್‌ ಆ್ಯಪ್‌ಗ್ಳನ್ನು ಈಗಾಗಲೇ ಬಳಸುತ್ತಿದ್ದು, ಮತ್ತಷ್ಟು ಪರಿಣಾಮಕಾರಿ ಬಳಕೆಗೆ ಕ್ರಮ.
– 1.8 ಲಕ್ಷ ಪೋಲಿಂಗ್‌ ಬೂತ್‌ ವ್ಯಾಪ್ತಿಯಲ್ಲಿ ಕನಿಷ್ಠ ಎರಡು ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆಗೆ ಕ್ರಮ.
– ಜತೆಗೆ ಸ್ಥಳೀಯವಾಗಿಯೂ ಪಕ್ಷದ ಚುನಾವಣ ತಂತ್ರ ರೂಪಿಸುವ ವಾರ್‌ ರೂಂಗಳೂ ಇವೆ.

ಸಮಾಜವಾದಿ ಪಕ್ಷ
– ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌ನಲ್ಲಿ ಪ್ರಚಾರ.
– ಸಣ್ಣ ವ್ಯಾನ್‌ಗಳಲ್ಲಿ ಡಿಜಿಟಲ್‌ ಸ್ಕ್ರೀನ್‌ ಅಳವಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ.
– ಪಕ್ಷದ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಡಿಜಿಟಲ್‌ ವೇದಿಕೆಗಳ ಬಳಕೆಗೆ ತರಬೇತಿ.
– ಉ.ಪ್ರ.ದ ಪ್ರತೀ ಕ್ಷೇತ್ರಗಳಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿ, ಪ್ರಚಾರಕ್ಕೆ ಆದ್ಯತೆ.

ಬಿಎಸ್‌ಪಿ
– ಜಾಲತಾಣಗಳೆಂದರೆ ಮೂಗು ಮುರಿಯುತ್ತಿದ್ದ ಪಕ್ಷ ಈಗ ಅದನ್ನೂ ಅಪ್ಪಿಕೊಳ್ಳಲು ಸಿದ್ಧವಾಗಿದೆ.
– ಸದ್ಯ ಫೇಸ್‌ಬುಕ್‌ ಅನ್ನು ಮಾತ್ರ ನೇರ ಪ್ರಸಾರಕ್ಕೆ ಬಳಸುತ್ತಿದೆ.
– ಇತರ ಪಕ್ಷಗಳಂತೆ ಟ್ವಿಟರ್‌, ವಾಟ್ಸ್‌ಆ್ಯಪ್‌ ಬಳಕೆ ಯಲ್ಲಿ ಸದ್ಯಕ್ಕೆ ಹಿಂದುಳಿದಿದೆ.

ಕಾಂಗ್ರೆಸ್‌
ಉ.ಪ್ರ.ದಲ್ಲಿ ಪ್ರಿಯಾಂಕಾ ವಾದ್ರಾ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಸೋಂಕಿನ ಹಿನ್ನೆಲೆಯಲ್ಲಿ ಮತ್ತು ಚುನಾವಣಾ ಆಯೋಗದ ಸೂಚನೆ ಹಿನ್ನೆಲೆಯಲ್ಲಿ ಎಲ್ಲ ಸಾರ್ವಜನಿಕ ರ‍್ಯಾಲಿ, ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ. ಹೀಗಾಗಿ ಟ್ವಿಟರ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಹಲವು ಜಾಲತಾಣಗಳಲ್ಲಿ ಪ್ರಚಾರ ಕೈಗೊಳ್ಳಲು ಪಕ್ಷ ಮುಂದಾಗಿದೆ. ಫೇಸ್‌ಬುಕ್‌ನಲ್ಲಿ “ಪ್ರಿಯಾಂಕಾ ಕೇ ಸಾಥ್‌ ಲೈವ್‌’ ಎಂಬ ಕಾರ್ಯಕ್ರಮವನ್ನು ಆಯೋಜಿಸುವ ಬಗ್ಗೆ ಯೋಚನೆಗಳು ನಡೆದಿವೆ.

Advertisement

ಆಮ್‌ ಆದ್ಮಿ ಪಕ್ಷ
ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ ಕೂಡ ಡಿಜಿಟಲ್‌ ಮಾಧ್ಯಮದಲ್ಲಿ ಪ್ರಚಾರಕ್ಕೆ ಹಿಂದುಳಿದಿಲ್ಲ. ಜ. 8ರಂದು ವಾರಾಣಸಿಯಲ್ಲಿ ಯೂ ಟ್ಯೂಬ್‌, ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂಗಳ ಮೂಲಕ ನೇರಪ್ರಸಾರ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next