ಹೊಸದಿಲ್ಲಿ : ಕೊರೊನಾ ಅವಧಿಯಲ್ಲಿ ದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆಯ ಭರಪೂರ ಬಳಕೆಯಾಗಿದೆ.
2020ನೇ ಸಾಲಿಗೆ ಸಂಬಂಧಿಸಿದಂತೆ ಅಮೆರಿಕ, ಚೀನ ಮತ್ತು ಇತರ ರಾಷ್ಟ್ರಗಳನ್ನು ಹಿಂದಿಕ್ಕಿ, ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ.
ಕಳೆದ ವರ್ಷ 25.5 ಬಿಲಿಯನ್ ರಿಯಲ್ ಟೈಮ್ ಆನ್‌ಲೈನ್ ವಹಿವಾಟುಗಳನ್ನು ಭಾರತ್‌ಪೇ, ಪೇಟಿಎಂ, ಫೋನ್‌ಪೇ, ಪೈನ್‌ಲ್ಯಾಬ್ಸ್, ರೇಝರ್‌ಪೇ ಸೇರಿದಂತೆ ಹಲವು ಪಾವತಿ ವ್ಯವಸ್ಥೆಗಳ ಮೂಲಕ ಈ ವಹಿವಾಟು ನಡೆಸಲಾಗಿದೆ.
ಯುನೈಟೆಡ್ ಕಿಂಗ್‌ಡಮ್‌ನ ಎಸಿಐ ವರ್ಲ್ಡ್ ವೈಡ್ ನಡೆಸಿದ ಅಧ್ಯ ಯನದಲ್ಲಿ ಈ ಅಂಶ ಬಹಿರಂಗವಾಗಿದೆ. ಭಾರತದ ಬಳಿಕ ಚೀನ, ದ. ಕೊರಿಯಾ, ಥಾಯ್ಲೆಂಡ್, ಯುಕೆ ಇವೆ. ಅಮೆರಿಕಕ್ಕೆ 9ನೇ ಸ್ಥಾನವಿದೆ.
ಕ್ಷಿಪ್ರಗತಿಯಲ್ಲಿ ಹಣ ಪಾವತಿ ವ್ಯವಸ್ಥೆ ಮತ್ತು ರಿಯಲ್ ಟೈಮ್ ಟ್ರಾನ್ಸಾಕ್ಷನ್ ವ್ಯವಸ್ಥೆಯಲ್ಲಿ ಶೇ. 15.6, ಇತರ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಯಲ್ಲಿ ಶೇ.22.9 ಪಾಲನ್ನು ಹೊಂದಿವೆ. ಇದರ ಹೊರತಾಗಿಯೂ ಕರೆನ್ಸಿ ನೋಟುಗಳ ಮೂಲಕ ದೇಶದಲ್ಲಿ ನಡೆಯುವ ವಹಿವಾಟು ಪ್ರಮಾಣ ಶೇ.61.4 ಆಗಿದೆ.