ಹೊಸದಿಲ್ಲಿ: 2022ರ ವೈಯಕ್ತಿಕ ಡಿಜಿಟಲ್ ಮಾಹಿತಿ ಸಂರಕ್ಷಣೆ ಮಸೂದೆ ಅಡಿಯಲ್ಲಿ ನಿಯಮಗಳನ್ನು ಉಲ್ಲಂ ಸಿದರೆ ವಿಧಿಸಬ ಹುದಾದ ದಂಡದ ಮೊತ್ತವನ್ನು 500 ಕೋಟಿ ರೂ.ಗೆ ಏರಿಸಿ ಕೇಂದ್ರ ಸರಕಾರ ಹೊಸ ಕರಡು ಪ್ರಸ್ತಾವನೆಯನ್ನು ಹೊರಡಿಸಿದೆ.
2019ರಲ್ಲಿ ಹೊರಡಿಸಲಾದ ಕರಡು ಪ್ರಸ್ತಾವನೆಯಲ್ಲಿ ದಂಡದ ಮೊತ್ತವನ್ನು 15 ಕೋಟಿ ರೂ. ಅಥವಾ ಕಂಪೆನಿಯ ಜಾಗತಿಕ ವಹಿವಾಟಿನ ಶೇ.4 ರಷ್ಟು ದಂಡ ವಿಧಿಸಬಹುದಾ ಗಿತ್ತು. ಆದರೆ ಈ ಮಸೂದೆಯನ್ನು ಕೇಂದ್ರ ಸರಕಾರ ಈ ವರ್ಷದ ಆಗಸ್ಟ್ ನಲ್ಲಿ ಹಿಂಪಡೆದಿತ್ತು. ನೂತನ ಕರಡು ಪ್ರಸ್ತಾವನೆ ಕುರಿತು ಸಾರ್ವಜನಿಕರು ಅಭಿಪ್ರಾಯ ಅಥವಾ ಆಕ್ಷೇಪಣೆ ಸಲ್ಲಿಸಲು ಡಿ.17ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
“ಈ ಮಸೂದೆಯ ಉದ್ದೇಶವು ತಮ್ಮ ವೈಯಕ್ತಿಕ ಡಿಜಿಟಲ್ ಮಾಹಿತಿ ರಕ್ಷಿಸುವ ನಿಟ್ಟಿನಲ್ಲಿ ವ್ಯಕ್ತಿಗಳ ಹಕ್ಕುಗಳನ್ನು ಕಾಪಾಡು ವುದಾಗಿದೆ. ಕಾನೂನುಬದ್ಧ ಉದ್ದೇಶಗಳಿ ಗಾಗಿ ಮತ್ತು ಇತರ ಸಂದಭೋìಚಿತ ಉದ್ದೇಶಗಳಿಗಾಗಿ ವೈಯಕ್ತಿಕ ಡಿಜಿಟಲ್ ಮಾಹಿತಿ ರಕ್ಷಿಸುವ ಪ್ರಕ್ರಿಯೆಯ ಆವಶ್ಯಕತೆ ಇದೆ,’ ಎಂದು ವಿವರಿಸಲಾಗಿದೆ.
ಹೊಸ ಮಸೂದೆಯ ಪ್ರಕಾರ, ಡೇಟಾ ಫಿಡ್ನೂಷಿಯರಿ ಅಥವಾ ಡೇಟಾ ಪ್ರೋಸೆಸರ್ ತನ್ನ ಸ್ವಾಧೀನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ವೈಯಕ್ತಿಕ ಮಾಹಿತಿ ಸೋರಿಕೆಯಿಂದ ರಕ್ಷಿಸಲು ವಿಫಲವಾದರೆ 250 ಕೋಟಿ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.
Related Articles
ಇನ್ನೊಂದೆಡೆ ಮಾಹಿತಿ ಸೋರಿಕೆ ಬಗ್ಗೆ ಭಾರತದ ಮಾಹಿತಿ ಸಂರಕ್ಷಣ ಮಂಡಳಿ ಮತ್ತು ಡೇಟಾ ಮಾಲಕರಿಗೆ ತಿಳಿಸಲು ಡೇಟಾ ಫಿಡ್ನೂಶಿಯರಿ ಅಥವಾ ಡೇಟಾ ಪ್ರೊಸೆಸರ್ ವಿಫಲವಾದರೆ 200 ಕೋಟಿ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ.
“ಅವಳು/ಅವಳ’ ಸರ್ವ ನಾಮ ಬಳಕೆ: 2022ರ ವೈಯಕ್ತಿಕ ಡಿಜಿಟಲ್ ಮಾಹಿತಿ ಸಂರಕ್ಷಣೆ ಮಸೂದೆಯು, ಎಲ್ಲ ಲಿಂಗಗಳನ್ನು ಉಲ್ಲೇಖೀಸುವಾಗ “ಅವಳು/ಅವಳ’ ಸರ್ವನಾಮ ಬಳಸಿದ ದೇಶದ ಮೊದಲ ಕಾನೂನಾಗಿದೆ. ಲಿಂಗವನ್ನು ಲೆಕ್ಕಿಸದೇ ವ್ಯಕ್ತಿಯನ್ನು ಉಲ್ಲೇಖಿಸುವಾಗ ಅವಳು ಮತ್ತು ಅವಳ ಎಂಬ ಸರ್ವನಾಮಗಳನ್ನು ಮಸೂದೆಯಲ್ಲಿ ಬಳಸಲಾಗಿದೆ.
“ಮಹಿಳಾ ಸಶಕ್ತೀಕರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಚಿಂತ ನೆಗೆ ಪೂರಕವಾಗಿ ಈ ಕ್ರಮವನ್ನು ಕೈಗೊಳ್ಳ ಲಾಗಿದೆ,’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಇದನ್ನೂ ಓದಿ :ಕಾಂಗ್ರೆಸ್ ಇದ್ದರೆ ಮಂದಿರ ನಿರ್ಮಾಣವಾಗುತ್ತಿತ್ತೇ? ಉ.ಪ್ರ.ಸಿಎಂ ಯೋಗಿ ಆದಿತ್ಯನಾಥ್ ಪ್ರಶ್ನೆ