Advertisement

ಡಿಜಿಟಲ್‌ ಅಂಕಪಟ್ಟಿ ಕೈಬಿಟ್ಟ ಎನ್‌ಇಪಿ! ಭೌತಿಕವಾಗಿಯೇ ಸಿಗಲಿದೆ ಪದವಿ ಅಂಕಪಟ್ಟಿ

12:28 AM Dec 19, 2022 | Team Udayavani |

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಲ್ಲಿ ಡಿಜಿಟಲ್‌ ಅಂಕ ಪಟ್ಟಿ ನೀಡಲಾಗುತ್ತದೆ ಎಂದು ಸರಕಾರ ತಿಳಿಸಿತ್ತು; ಆದರೆ ಇದು “ಸದ್ಯ ಸೂಕ್ತವಲ್ಲ’ ಎಂಬ ಕಾರಣ ನೀಡಿ ಭೌತಿಕ ಅಂಕಪಟ್ಟಿ ಯನ್ನೇ ಮುಂದುವರಿಸಲು ಸರಕಾರ ತೀರ್ಮಾನಿಸಿದೆ. ಇದರಂತೆ ಎನ್‌ಇಪಿ ಬ್ಯಾಚ್‌ನ 1 ಹಾಗೂ 2ನೇ ಸೆಮಿಸ್ಟರ್‌ ಆದ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾದ ಬಳಿಕ ಭೌತಿಕ ಅಂಕಪಟ್ಟಿಯೇ ದೊರೆಯಲಿದೆ. ಸರಕಾರವು ಎನ್‌ಇಪಿಯಡಿ ಡಿಜಿಟಲ್‌ಗೆ ಆದ್ಯತೆ ಎಂದು ಹೇಳಿತ್ತು.

Advertisement

ಇದರಂತೆ ವಿ.ವಿ.ಗಳಲ್ಲಿಯೂ ಸಿದ್ಧತೆ ನಡೆಸಲು ನಿರ್ದೇಶನ ಬಂದಿತ್ತು. ಹೀಗಾಗಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಅವಶ್ಯವಿದ್ದಲ್ಲಿ ಮುದ್ರಿಸಲು ಅವಕಾಶ ಸಿಗಲಿ ಎಂಬ ಆಶಯದಿಂದ ಡಿಜಿಟಲ್‌ ಅಂಕಪಟ್ಟಿಯನ್ನೇ ಅಖೈರುಗೊಳಿಸಲು ತೀರ್ಮಾನವಾಗಿತ್ತು. ಆದರೆ ಎನ್‌ಇಪಿ 2 ಸೆಮಿಸ್ಟರ್‌ ಪರೀಕ್ಷೆ ಮುಗಿಯುವವರೆಗೂ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳದ ಸರಕಾರ ಈಗ ಕೊನೆಯ ಹಂತದಲ್ಲಿ ಭೌತಿಕ ಅಂಕಪಟ್ಟಿ ನೀಡುವ ಬಗ್ಗೆಯೇ ಮನಸ್ಸು ಮಾಡಿದೆ.

ಜತೆಗೆ ವಿ.ವಿ.ಯಿಂದ ಮುದ್ರಿಸಿ ನೀಡುವ ಅಂಕಪಟ್ಟಿಗೂ ವಿದ್ಯಾರ್ಥಿಗಳೇ ಮುದ್ರಿಸಿ ಪಡೆಯುವ ಅಂಕಪಟ್ಟಿಗೂ ವ್ಯತ್ಯಾಸ ವಿರುವುದರಿಂದ ವಿ.ವಿ. ನೀಡುವ ಅಂಕಪಟ್ಟಿಯನ್ನು ಮುಂದುವರಿಸು ವುದು ಸೂಕ್ತ ಎಂದು ತೀರ್ಮಾನಿಸಲಾಗಿದೆ.

ಗೊಂದಲ ತಂದಿದ್ದ 3 ಪತ್ರಗಳು!
ಎನ್‌ಇಪಿ ಅಂಕಪಟ್ಟಿಯನ್ನು ಡಿಜಿ ಟಲ್‌ ಆಗಿ ನೀಡಬೇಕೇ ಅಥವಾ ಭೌತಿಕ ಅಂಕಪಟ್ಟಿ ನೀಡಬೇಕೇ ಎಂಬ ಬಗ್ಗೆ ಯುಜಿಸಿ, ರಾಜ್ಯಪಾಲರು ಹಾಗೂ ಸರಕಾರದಿಂದ ಮೂರು ಬೇರೆಬೇರೆ ಅಭಿಪ್ರಾಯದ ಪತ್ರಗಳು ವಿ.ವಿ.ಗಳಿಗೆ ಬಂದಿದ್ದವು. ಹೀಗಾಗಿ ಎನ್‌ಇಪಿ ಅಂಕಪಟ್ಟಿ ಹೇಗಿರುತ್ತದೆ ಎಂಬ ಬಗ್ಗೆ ವಿ.ವಿ.ಗಳಲ್ಲಿಯೇ ಗೊಂದಲ ಏರ್ಪಟ್ಟಿತ್ತು. ಇದರಿಂದಾಗಿ ವಿ.ವಿ.ಗಳು ಅಂಕಪಟ್ಟಿ ಮುದ್ರಿಸುವ ವಿಶೇಷ ಹಾಳೆಯನ್ನು ಇಲ್ಲಿಯ ವರೆಗೆ ಖರೀದಿಸಿಲ್ಲ. ವಾರದ ಹಿಂದೆ ಯುಜಿಸಿಯಿಂದ ನಿರ್ದೇಶನ ಬಂದಿದ್ದು, ಭೌತಿಕ ಅಂಕಪಟ್ಟಿ ನೀಡು ವಂತೆ ಸೂಚಿಸಲಾಗಿದೆ.

ಮಂಗಳೂರು ವಿ.ವಿ.ಯಲ್ಲಿ ಎಂಯು ಲಿಂಕ್ಸ್‌ನಲ್ಲಿ ನೀಡಿ ದಂತೆ ಅಂಕ ಪಟ್ಟಿಯನ್ನು ಯುಯುಸಿಎಂ ಎಸ್‌ ನಲ್ಲೂ ನೀಡಬೇಕೇ ಎಂಬ ಬಗ್ಗೆ ತೀರ್ಮಾನ ಆಗಿರಲಿಲ್ಲ. ಕೇವಲ ಡಿಜಿಟಲ್‌ ಅಂಕಪಟ್ಟಿ ಮಾತ್ರ ನೀಡ ಬೇಕು, ನ್ಯಾಡ್‌ಗೆ ಅಂಕ ಅಪ್‌ಲೋಡ್‌ ಮಾಡಬೇಕು ಹಾಗೂ ಭೌತಿಕವಾಗಿ ಅಂಕಪಟ್ಟಿ ನೀಡಬಾರದು ಎಂದು ಇಲ್ಲಿಯವರೆಗೆ ವಿ.ವಿ.ಗೆ ಸೂಚನೆ ಇತ್ತು. ಹೀಗಾಗಿ ಹೊಸ ಅಂಕಪಟ್ಟಿ ಪಡೆಯುವ ಪ್ರಕ್ರಿಯೆಯನ್ನು ವಿ.ವಿ. ನಡೆಸಿರಲಿಲ್ಲ. ಈಗ ಭೌತಿಕ ಅಂಕಪಟ್ಟಿ ನೀಡಲು ಸೂಚನೆ ಬಂದ ಕಾರಣ ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ವಿ.ವಿ.ಯ ಪರೀಕ್ಷಾಂಗ ಕುಲಸಚಿವ ಪ್ರೊ| ಪಿ.ಎಲ್‌. ಧರ್ಮ ಹೇಳಿದ್ದಾರೆ.

Advertisement

ಅಂಕಪಟ್ಟಿ ; ಆನ್‌ಲೈನ್‌ ಪರಿಶೀಲನೆ ಸಾಧ್ಯ
ಎನ್‌ಇಪಿಯಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ನ್ಯಾಡ್‌ (ನ್ಯಾಷನಲ್‌ ಅಕಾಡೆಮಿಕ್‌ ಡಿಪೋಸಿಟರಿ)ಗೆ ವಿ.ವಿ. ಅಪ್‌ಡೇಟ್‌ ಮಾಡಬೇಕು. ಇದರಿಂದ ಅಂಕಗಳ ಆನ್‌ಲೈನ್‌ ಪರಿಶೀಲನೆ ಮಾಡಲು ಸಾಧ್ಯ. ಉದ್ಯೋಗ ಸಂದರ್ಶನ ಅಥವಾ ಇತರ ಸಂದರ್ಭ ಅಂಕಗಳನ್ನು ಆನ್‌ಲೈನ್‌ ಮೂಲಕ ಖಚಿತಪಡಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ.

ಎನ್‌ಇಪಿ ಹೊಸ ಬ್ಯಾಚ್‌ಗೆ ಡಿಜಿಟಲ್‌ ಅಂಕಪಟ್ಟಿ ನೀಡುವ ಬಗ್ಗೆ ಈ ಹಿಂದೆ ಸೂಚನೆ ಬಂದಿತ್ತು. ಆದರೆ ಈಗ ಭೌತಿಕ ಅಂಕಪಟ್ಟಿ ನೀಡುವ ಬಗ್ಗೆ ಯುಜಿಸಿ ತಿಳಿಸಿದೆ. ಜತೆಗೆ ನ್ಯಾಡ್‌ನ‌ಲ್ಲಿ ಅಂಕ ನಮೂದು ಮಾಡುವ ಬಗ್ಗೆ ವಿ.ವಿ.ಗೆ ಸೂಚನೆ ಬಂದಿದೆ. ಹೀಗಾಗಿ ಭೌತಿಕ ಅಂಕಪಟ್ಟಿ ಹಾಗೂ ನ್ಯಾಡ್‌ನ‌ಲ್ಲಿ ಅಂಕ ನಮೂದು ಪ್ರಕ್ರಿಯೆ ನಡೆಯಲಿದೆ.
– ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿ.ವಿ.

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next