Advertisement

6 ಕೋಟಿ ಮನೆಗಳಲ್ಲಿ ಡಿಜಿಟಲ್‌ ಸಾಕ್ಷರತೆ ಗುರಿ

06:16 PM Sep 08, 2021 | Team Udayavani |

ಯಾದಗಿರಿ: ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್‌ ಸಾಕ್ಷರತೆ ಅಭಿಯಾನವು ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಈ ಯೋಜನೆ ಮೂಲಕ ಗ್ರಾಮೀಣ ಜನತೆಗೆ ಡಿಜಿಟಲ್‌ ಬಗ್ಗೆ ಅರಿವು ಮೂಡಿಸುವುದರಿಂದಾಗಿ ಈ ಯೋಜನೆಯೂ ಕರ್ನಾಟಕದಲ್ಲಿ ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರದ ಪಿಎಂಜಿ ದಿಶಾ ಮೇಲ್ವಿಚಾರಕ ದೀಪಕ ಕುಮಾರ ಶರ್ಮಾ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್‌ ಸಾಕ್ಷರತೆ ಅಭಿಯಾನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರು ಹೆಚ್ಚಾಗಿ ಅನಕ್ಷರಸ್ಥರು ಇರುವುದರಿಂದಾಗಿ ಸಿಎಸ್‌ಸಿಗಳು ಜನರೊಡನೆ ಬೇರೆತು ಈ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದರ ಜೊತೆಗೆ ಸಿಎಸ್‌ಸಿಗಳು ಈ ಯೋಜನೆ ಲಾಭವನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಪ್ರಮುಖರಾಗುತ್ತಾರೆ ಎಂದರು.

ಈ ಯೋಜನೆ ಪ್ರಚಾರಗೊಳಿಸುವುದರ ಮೂಲಕ ಯೋಜನೆ ಅನುದಾನವನ್ನು ಬಳಕೆಮಾಡಿಕೊಂಡು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ಯೋಜನೆಯಲ್ಲಿ ಶಿಕ್ಷಣ, ವೈವಾಹಿಕಜೀವನಕ್ಕಾಗಿ ಮತ್ತು ಇತರೆ ಕಾರ್ಯಗಳಿಗೆ ಸಹಾಯಧನ ನೀಡಲಾಗುತ್ತದೆ.

ಪಿಎಂಜಿ ದಿಶಾ ಯೋಜನೆಯು ಕನಾಟಕದಲ್ಲಿ 400 ಕೋಟಿ ರೂ. ವೆಚ್ಚದ ಅನುದಾನವಿದ್ದು, ಗ್ರಾಮೀಣ ಪ್ರದೇಶದ 6ಕೋಟಿ ಮನೆಗಳನ್ನು ಡಿಜಿಟಲ್‌ ಸಾಕ್ಷರರನ್ನಾಗಿಸುವುದೇ ಪಿಎಂಜಿದಿಶಾ ಅಭಿಯಾನದ ಉದ್ದೇಶವಾಗಿದೆ. ಈ ಅನುದಾನವನ್ನು ಸಿಎಸ್‌ ಸಿಗಳು ಸದ್ಭಳಕೆ ‌ ಮಾಡಿಕೊಂಡು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ಯೋಜನೆಯೂ ವಿದ್ಯಾರ್ಥಿಗಳಿಗಾಗಿ 10 ದಿನದ ಬೇಸಿಕ್‌ ತರಬೇತಿ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ
500 ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಕ್ಕಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.

ಡಿಜಿಟಲ್‌ ಸಾಕ್ಷರತೆ ಹೊಂದಿದವರು ಕಂಪ್ಯೂಟರ್‌/ ಡಿಜಿಟಲ್‌ ಸಾಧನೆಗಳು(ಟ್ಯಾಬ್‌ಲೆಟ್‌, ಸ್ಮಾರ್ಟ್‌ ಫೋನ್‌ಗಳು) ಉಪಯೋಗಿಸಲು ಇ-ಮೇಲ್‌ ಕಳುಹಿಸಲುಮತ್ತು ಸ್ವೀಕರಿಸಲು,ಇಂಟರ್‌ನೆಟ್‌ ಬ್ರೌಸ್‌ ಮಾಡಲು, ಸರ್ಕಾರದ ಸೇವೆಗಳನ್ನು ತಿಳಿಯಲು, ಮಾಹಿತಿಗಾಗಿ ಹುಡುಕಾಟ ನಡೆಸಲು, ನಗದುರಹಿತ ವಹಿವಾಟು ನಡೆಸುವುದು ಹೇಗೆ ಎಂಬುವುದರ ಬಗ್ಗೆ ತರಬೇತಿ ನೀಡುವುದರ ಜೊತೆಗೆ ಅವರಿಗೆ ಉದ್ಯೋಗ ಕಲ್ಪಿಸಿಕೊಡುವುದರಿಂದಾಗಿ ದೇಶದಲ್ಲಿನ ನಿರುದ್ಯೋಗ ಹೋಗಲಾಡಿಸಬಹುದು ಎಂದು ಹೇಳಿದರು.

Advertisement

ಇ-ಶ್ರಮ ಪೋರ್ಟ್‌ಲ್‌ ಅಥವಾ ಅಸಂಘಟಿತ ವಲಯದ ಕೆಲಸಗಾರರಿಗಾಗಿ ರಾಷ್ಟ್ರೀಯ ಡೇಟಾಬೇಸ್‌, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಮನೆಗೆಲಸಗಾರರು, ಕೃಷಿಕಾರ್ಮಿಕರು, ಇತರೆ ಅಸಂಘಟಿತ ವಲಯದ ಕಾರ್ಮಿಕರು ಇ-ಶ್ರಮ ವೆಬ್‌ಸೈಟ್‌ನಲ್ಲಿ ಅರ್ಜಿಗಳನ್ನು ನೋಂದಾಯಿಸಿಕೊಂಡು ಈ ಯೋಜನೆ ಲಾಭ ಪಡೆಯ ಬಹುದು ಎಂದರು.

ಕಾರ್ಮಿಕ ಇಲಾಖೆ ಉಪನಿರ್ದೇಶಕಿ ಉಮಾ, ಜಿಲ್ಲಾ ವ್ಯವಸ್ಥಾಪಕರು ಸಿದ್ದು ಹರಸೂರ, ಜಿಲ್ಲಾ ವಿಎಲ್‌ಇ ಸೊಸೈಟಿ ಅಧ್ಯಕ್ಷ ಪಂಕಜ ಕುಮಾರ ಜೋಶಿ ಮತ್ತು ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್‌ ಹಾಗೂ ಸಿಎಸ್‌ಸಿ ಸೆಂಟರ್‌ನ ವಿಎಲ್‌ಇಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next