Advertisement

Digital infrastructure; ಯುಪಿಐಗೆ ಜರ್ಮನಿ ತಾರೀಫು

12:12 AM Aug 21, 2023 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಯುಪಿಐ ಪಾವತಿ ವಿಧಾನದ ಸಹಿತ ಡಿಜಿಟಲ್‌ ಮೂಲಸೌಕರ್ಯವು ಒಂದು ಯಶೋಗಾಥೆ ಎಂದು ಜರ್ಮನಿಯ ರಾಯಭಾರ ಕಚೇರಿಯು ಶ್ಲಾಘಿಸಿದ್ದು, ಜರ್ಮನಿಯ ಡಿಜಿಟಲ್‌ ಮತ್ತು ಸಾರಿಗೆ ಸಚಿವ ವೊಕರ್‌ ವಿಸಿಂಗ್‌ ತರಕಾರಿ ಅಂಗಡಿಯೊಂದರಲ್ಲಿ ಯುಪಿಐ ಉಪಯೋಗಿಸಿ ಹಣ ಪಾವ ತಿಸುತ್ತಿರುವ ವೀಡಿಯೋ ಚಿತ್ರಣ ವನ್ನು ಹಂಚಿಕೊಂಡಿದೆ. ಭಾರತದ ಯಶೋಗಾಥೆಗಳಲ್ಲಿ ಡಿಜಿಟಲ್‌ ಮೂಲಸೌಕರ್ಯ ಒಂದಾಗಿದೆ.

Advertisement

ಯುಪಿಐ ಮೂಲಕ ಎಲ್ಲರೂ ಕ್ಷಣ ಮಾತ್ರದಲ್ಲಿ ಹಣ ಪಾವತಿಸಬಹುದು. ಕೋಟ್ಯಂತರ ಭಾರತೀಯರು ಇದನ್ನು ಉಪಯೋಗಿಸುತ್ತಿದ್ದಾರೆ ಎಂದು ಹೊಸ ದಿಲ್ಲಿಯಲ್ಲಿರುವ ಜರ್ಮನ್‌ ರಾಯಭಾರ ಕಚೇರಿಯು ಟ್ವಿಟರ್‌ (ಪ್ರಸ್ತುತ ಎಕ್ಸ್‌)ನಲ್ಲಿ ಹೇಳಿಕೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next