Advertisement
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ 2019 ರಲ್ಲಿ ಹೊಸ ಮಾಪಕ ಅಳವಡಿಕೆಯ ಹೊಣೆಯನ್ನು ಖಾಸಗಿ ಏಜೆನ್ಸಿಗೆ ನೀಡಿದ್ದು, ಇದುವರೆಗೆ 18,89,753 ಮಾಪಕ ಬದಲಾಯಿಸಲಾಗಿದೆ. 5,39,656 ಬಾಕಿಯಿದೆ.
ಗ್ರಾಹಕರಾದ ಸತ್ಯನಾರಾಯಣ ಉಡುಪ ಅವರು, ಹೊಸ ಮಾಪಕದಿಂದ ವಿದ್ಯುತ್ ಸೋರಿಕೆ ತಡೆದು ನಿಖರತೆ ಕಾಯ್ದುಕೊಳ್ಳಲು ಸಾಧ್ಯ. ಆದರೆ ಮೆಸ್ಕಾಂಗೆ ಆಸಕ್ತಿ ಇಲ್ಲ. ಹೀಗಾಗಿ ಹೊಸ ಮಾಪಕ ಅಳವಡಿಕೆಗೆ ವೇಗ ನೀಡುತ್ತಿಲ್ಲ’ ಎಂದು ಉದಯವಾಣಿಗೆ ತಿಳಿಸಿದ್ದಾರೆ.
Related Articles
Advertisement
ಈ ಮಧ್ಯೆ, ಹೊಸ ಮಾಪಕದ ಜತೆ “ಪ್ರೀಪೇಯ್ಡ ಸ್ಮಾರ್ಟ್ ವಿದ್ಯುತ್ ಮೀಟರ್’ ಅಳವಡಿಸುವ ಕಾರ್ಯ ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದೆ. ಇದಕ್ಕೆ ಮತ್ತೆ ಹೊಸ ಮೀಟರ್ ಅಳವಡಿಸಲು ಮತ್ತೂಮ್ಮೆ ಮೆಸ್ಕಾಂ ವ್ಯಾಪ್ತಿಯಲ್ಲಿ ಮೀಟರ್ ಅಳವ ಡಿಸಬೇಕಾ? ಎಂಬ ಬಗ್ಗೆ ಗ್ರಾಹಕರಲ್ಲಿ ಪ್ರಶ್ನೆ ಮೂಡಿದೆ.
ಸೋರಿಕೆ ತಡೆಗೆ ಡಿಜಿಟಲ್ ಪ್ರಯೋಗಎಲೆಕ್ಟ್ರೋ ಮೆಕ್ಯಾನಿಕಲ್ ಮಾಪಕಗಳು ಬಳಸಿದ ಯೂನಿಟ್‌ಗಳನ್ನು ಮಾತ್ರ ಅಳೆಯುತ್ತವೆ. ನಿಖರತೆ, ಸೋರಿಕೆ ಹಾಗೂ ಕಳ್ಳತನ ತಡೆ ಆಗದು. ಹೊಸ ಮಾಪಕದಲ್ಲಿ ನಿಖರತೆ ಖಚಿತ. ನಿರ್ವಹಣೆ ಸುಲಭ. ಬಳಕೆಯ ಜತೆಗೆ ಬೇಡಿಕೆಯನ್ನೂ ದಾಖಲಿಸುತ್ತದೆ. ಕಡಿಮೆ ಲೋ ಡಿಂಗ್‌ನಲ್ಲೂ ನಿಖರತೆ ತಪ್ಪದು. ಮಾಪಕ ಕಾರ್ಯ ನಿರ್ವಹಣೆಗೂ ಕಡಿಮೆ ವಿದ್ಯುತ್ ಸಾಕು ಎಂಬುದು ಮೆಸ್ಕಾಂ ಅಭಿಪ್ರಾಯ. ಬಾಕಿ ಮೀಟರ್ ಶೀಘ್ರ ಅಳವಡಿಕೆ
ಹಳೆಯ ಮೆಕ್ಯಾನಿಕಲ್ ಮೀಟರ್ ಅನ್ನು ಡಿಜಿಟಲ್ ಮೀಟರ್‌ಗೆ ಬಹುತೇಕ ಬದಲಾಯಿಸಲಾಗಿದೆ. ಉಳಿದವುಗಳಿಗೆ ಟೆಂಡರ್ ಕರೆದಿದ್ದು, ಶೀಘ್ರವೇ ಅಳವಡಿಸಲಾಗುವುದು.
-ಮಂಜಪ್ಪ, ವ್ಯವಸ್ಥಾಪಕ ನಿರ್ದೇಶಕರು, ಮೆಸ್ಕಾಂ – ದಿನೇಶ್ ಇರಾ