Advertisement

ಡಿಜಿಟಲ್ ಚುನಾವಣೆ ವ್ಯವಸ್ಥೆ ವಿನ್ಯಾಸ

11:20 PM May 31, 2019 | Team Udayavani |

ಶಿರ್ವ: ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ಚೇತನ್‌ ಪಿ. ವರ್ಣೇಕರ್‌, ಅಲ್ಪಯಾ ಪಾಲ್ಲೊವ್ಕರ್‌, ಆಝಿಝಾ ಮದೀಹಾ ಅವರು ಸಹಾಯಕ ಪ್ರಾಧ್ಯಾಪಕರಾದ ಅನುಜ್ಞಾ ರಾವ್‌ ಮತ್ತು ರಮ್ಯಶ್ರೀ ಅವರ ಮಾರ್ಗದರ್ಶನದಲ್ಲಿ ಡಿಜಿಟಲ್ ಮತದಾನ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದಾರೆ.

Advertisement

ಯಾವುದೇ ದೇಶದಲ್ಲಿ ಚುನಾವಣೆಯು ನಿರ್ಣಾಯಕ ಮತ್ತು ಮಹತ್ವದ ಘಟನೆಯಾಗಿದೆ. ಆದುದರಿಂದ ಪ್ರಜಾಪ್ರಭುತ್ವವು ಕಾನೂನಿನ ನಿಯಮದ ಪ್ರಕಾರ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುತ್ತದೆ. ಪ್ರಸ್ತುತ ನಮ್ಮದೇಶದಲ್ಲಿ ಎವಿಎಂ ಆಧಾರಿತವಾದ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದ್ದು , ಅದನ್ನು ಇನ್ನಷ್ಟು ಸುರಕ್ಷಿತ, ಆದರೆ ಸುಲಭ ಮಾಡುವ ಅವಶ್ಯಕತೆಯಿದೆ. ವಿವಿಧ ಭಧ್ರತೆ ಸಂಬಂಧಿ ದೋಷಗಳ ಕಾರಣದಿಂದ ಪ್ರಸ್ತುತ ಮತದಾನ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶದಿಂದ ಡಿಜಿಟಲ್ಚುನಾವಣಾ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಲಾಗಿದೆ.

ಇದು ಸಂಪೂರ್ಣಗಣಕೀಕೃತ ಚುನಾವಣಾ ವ್ಯವಸ್ಥೆಯಾಗಿದ್ದು, ಪ್ರಸ್ತುತ ವ್ಯವಸ್ಥೆಯಿಂದ ಭಿನ್ನವಾಗಿದೆ.ಮತದಾನ ಮಾಡಲು ಮತದಾನ ಯಂತ್ರಗಳು ಅಥವಾ ಇಂಟರ್ನೆಟ್ ಬ್ರೌಸರ್‌ನಂತಹ ಎಲೆಕ್ಟ್ರಾನಿಕ್‌ ಸಾಧನಗಳ ಬಳಕೆ ಮಾಡಲಾಗಿದೆ. ಇ- ಮತದಾನ ಎಂದು ಕರೆಯಲಾಗುವ ಈ ವ್ಯವಸ್ಥೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ಮತದಾನ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದು ಮತದಾರರ ಅನುಕೂಲ, ಮತಗಳ ಸುರಕ್ಷತೆ, ಸುಗಮ ಚುನಾವಣಾ ವಿಧಾನವನ್ನು ಅನುಲಕ್ಷಿಸಿದೆ.

ಇದರಲ್ಲಿ ಮತದಾರರು, ಅಭ್ಯರ್ಥಿಗಳು ಮತ್ತು ಚುನಾವಣಾ ಆಯೋಗ ಎಲ್ಲರೂ ಸೇರಿ ಕಾರ್ಯ ನಿರ್ವಹಿಸುತ್ತಾರೆ. ಪ್ರಸ್ತಾಪಿತ ವ್ಯವಸ್ಥೆಯು ಮತದಾನ, ಮತದಾರರು, ಅಭ್ಯರ್ಥಿ ಮತ್ತು ಚುನಾವಣೆಯ ವಿವರಗಳನ್ನು ಸಮಗ್ರವಾಗಿ ಸಂಗ್ರಹಿಸಿ ನಿರ್ವಹಿಸುತ್ತದೆ, ಮತಗಣತಿಯ ಅನುಮತಿಯನ್ನು ಚುನಾವಣಾ ಆಯೋಗವಷ್ಟೇ ಹೊಂದಿದ್ದು, ಅದಕ್ಕೆ ಚಲಾವಣೆಯಾದ ಮತಗಳನ್ನು ಮಾರ್ಪಡಿಸುವ ಯಾವುದೇ ಸಾಧ್ಯತೆಗಳಿರುವುದಿಲ್ಲ. ಮತಗಣತಿ ಕೂಡ ಅತ್ಯಂತ ಸುಲಭ ಸಾಧ್ಯವಿದ್ದು ಬೋಗಸ್‌ ಮತದಾನವನ್ನು ಕೂಡ ತಡೆಯುತ್ತದೆ.

ಪ್ರಸ್ತುತ ವಿವಿಪಿಎಟಿಯಲ್ಲಿಸಮಯ, ಹಣವನ್ನು ವ್ಯಯ ಮಾಡಬೇಕಾಗುತ್ತದೆ.ಆದರೆ ಈ ಹೊಸ ವ್ಯವಸ್ಥೆಯು ಈ ನ್ಯೂನತೆಯನ್ನು ಹೋಗಲಾಡಿಸಲು ಸಹಕಾರಿಯಾಗಿದ್ದು, ಮತದಾರನು ಯಾವುದೇ ಸ್ಥಳದಿಂದ ಅಂತರ್ಜಾಲದ ಮೂಲಕ ಮತ ಚಲಾಯಿಸಲು ಸಹಾಯ ಮಾಡುತ್ತದೆ. ಡಿಜಿಟಲ್ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಈ ಪರಿಕ್ರಮವು ಒಂದು ಪೂರಕ ಆಲೋಚನೆಯಾಗಿದೆ.

Advertisement

ದತ್ತಾಂಶವನ್ನು ಭದ್ರಪಡಿಸುವ ಮತ್ತು ಸಂಭಾವ್ಯ ದಾಳಿಯಿಂದ ರಕ್ಷಿಸಿಕೊಳ್ಳಲು ಈ ವ್ಯವಸ್ಥೆಯು ಸಮರ್ಥ ವಾಗಿದ್ದು, ಪ್ರಸ್ತುತ ಲಭ್ಯವಿರುವ ನೂತನ ಸುರಕ್ಷಾ ಕ್ರಮಗಳನ್ನು ಬಳಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next