Advertisement

ಎಲ್ಲ ಶಾಲೆಗಳಿಗೆ ಡಿಜಿಟಲ್‌ ಬೋರ್ಡ್‌

10:00 AM Feb 12, 2018 | Harsha Rao |

ಹೊಸದಿಲ್ಲಿ: ದೇಶದಲ್ಲಿರುವ ಎಲ್ಲ ಶಾಲೆಗಳನ್ನು ಡಿಜಿಟಲ್‌ ಬೋರ್ಡ್‌ ಮೂಲಕ ಸಂಪರ್ಕಿಸುವ ಯೋಜನೆಯನ್ನು ಕೇಂದ್ರ ಸರಕಾರ ಹಾಕಿಕೊಂಡಿದೆ. ಸದ್ಯ ಅದನ್ನು 25 ಕೇಂದ್ರೀಯ ವಿದ್ಯಾಲಯಗಳಲ್ಲಿ “ಆಪರೇಷನ್‌ ಡಿಜಿಟಲ್‌ ಬ್ಲ್ಯಾಕ್‌ಬೋರ್ಡ್‌’ ಎಂಬ ಯೋಜನೆ ಅಡಿಯಲ್ಲಿ  ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಹಾಯಕ ಸಚಿವ ಉಪೇಂದ್ರ ಖುಶ್ವಾಹ ತಿಳಿಸಿದ್ದಾರೆ. ಅದರ ಆರಂಭದಲ್ಲಿ ಶಾಲೆಯಲ್ಲಿ ಸ್ಮಾರ್ಟ್‌ ಬೋರ್ಡ್‌ಗಳನ್ನು ಅಳವಡಿಸಲಾಗುತ್ತದೆ. ಶಿಕ್ಷಣಕ್ಕಾಗಿ ಕೇಂದ್ರ ಸಲಹಾ ಮಂಡಳಿ (ಸಿಎಬಿಇ)ಯ ಇತ್ತೀಚಿನ ಸಭೆಯಲ್ಲಿ ಈ ಬಗ್ಗೆ ಅನುಮೋದನೆ ನೀಡಲಾ ಗಿದೆ. ಇದರಿಂದಾಗಿ ದೇಶದ ಶಾಲೆಗಳಲ್ಲಿರುವ ಕಪ್ಪು ಹಲಗೆ (ಬ್ಲ್ಯಾಕ್‌ಬೋರ್ಡ್‌) ಸ್ಥಾನದಲ್ಲಿ ಉತ್ತಮ ದರ್ಜೆಯ ಡಿಜಿಟಲ್‌ ಬ್ಲ್ಯಾಕ್‌ ಬೋರ್ಡ್‌ ಬರಲಿದೆ ಎಂದಿದ್ದಾರೆ ಖುಶ್ವಾಹ.

Advertisement
Advertisement

Udayavani is now on Telegram. Click here to join our channel and stay updated with the latest news.

Next