Advertisement
ಕರ್ನಾಟಕದ ಎರಡು ಸೇರಿದಂತೆ ದೇಶದ 763 ಗ್ರಾಮಗಳ 1.32 ಲಕ್ಷ ಮಂದಿಗೆ ಡಿಜಿಟಲ್ ಆಸ್ತಿ ಮಾಲಕತ್ವ ದಾಖಲೆಯನ್ನು ನೀಡುವ ವೀಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತ ನಾಡಿದರು. ಇದೊಂದು ಐತಿಹಾಸಿಕ ಕ್ರಮ ಎಂದು ಬಣ್ಣಿಸಿದರು.
Related Articles
ಜಗತ್ತಿನ ಒಟ್ಟು ಜನಸಂಖ್ಯೆ ಪೈಕಿ ಮೂರನೇ ಒಂದಂಶದಷ್ಟು ಜನರು ಮಾತ್ರ ಸೂಕ್ತ ರೀತಿಯಲ್ಲಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ಮುಂದಿನ 3ರಿಂದ 4 ವರ್ಷಗಳ ಅವಧಿಯಲ್ಲಿ ದೇಶದ ಪ್ರತಿಯೊಂದು ಗ್ರಾಮದ ನಿವಾಸಿಗೂ ಇದೇ ಮಾದರಿಯ ಆಸ್ತಿ ಮಾಲಕತ್ವದ ಕಾರ್ಡ್ ಗಳನ್ನು ವಿತರಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ಆಸ್ತಿ ಹಕ್ಕಿನಿಂದಾಗಿ ಗ್ರಾಮೀಣ ಪ್ರದೇಶದಲ್ಲಿರುವ ಯುವ ಜನತೆಗೆ ಆತ್ಮವಿಶ್ವಾಸದಿಂದ ಮುಂದಿನ ಹೆಜ್ಜೆ ಇಡಲು ನೆರವಾಗಲಿದೆ ಎಂದಿದ್ದಾರೆ.
Advertisement
ಆರು ವರ್ಷಗಳ ಅವಧಿಯಲ್ಲಿ ದೇಶದ ಗ್ರಾಮೀಣ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿ ಸಾಧಿಸಲಾಗಿದೆ. ಸ್ವಾಮಿತ್ವ ಯೋಜನೆಯಿಂದಾಗಿ ಗ್ರಾಮೀಣ ಮಟ್ಟದಲ್ಲಿ ಪಂಚಾಯತ್‌ಗಳಿಗೆ ಆಸ್ತಿಯ ನಿರ್ವಹಣೆ ಸುಲಭವಾಗಲಿದೆ ಎಂದು ಹೇಳಿದರು.ಕಾರ್ಯಕ್ರಮದ ಬಳಿಕ ಹೆಚ್ಚಿನ ವಿವರಣೆ ನೀಡಿದ ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ)ಯು, 1.32 ಲಕ್ಷ ಮಂದಿಯ ಮೊಬೈಲ್ ಫೋನ್‌ಗೆ ಎಸ್‌ಎಂಎಸ್ ಲಿಂಕ್ ಕಳುಹಿಸಲಾಗುತ್ತದೆ. ಅದನ್ನು ತೆರೆಯುವ ಮೂಲಕ ಆಧಾರ್ ಮಾದರಿಯ ಆಸ್ತಿಯ ಮಾಲಕತ್ವ ದಾಖಲೆಗಳನ್ನು ಪಡೆದುಕೊಳ್ಳಬಹುದು. ಅನಂತರದ ದಿನಗಳಲ್ಲಿ ರಾಜ್ಯ ಸರಕಾರಗಳೇ ಜಮೀನಿನ ಮಾಲಕತ್ವದ ದಾಖಲೆಗಳನ್ನು ನೀಡಲಿವೆ ಎಂದಿದೆ.