Advertisement

ವಾಟ್ಸ್‌ಆ್ಯಪ್‌ನಲ್ಲೇ ಸಿಗಲಿದೆ ಡಿಜಿಲಾಕರ್‌ ಸೇವೆ!

12:24 AM May 24, 2022 | Team Udayavani |

ಡ್ರೈವಿಂಗ್‌ ಲೈಸೆನ್ಸ್‌, ಪ್ಯಾನ್‌ ಕಾರ್ಡ್‌ ಸೇರಿದಂತೆ ಹಲವು ದಿನವಹಿ ದಾಖಲೆಗಳನ್ನು ಡಿಜಿಟಲ್‌ ಮೂಲಕ ಸಂಗ್ರಹಿಸಿ ಇರಿಸಲು ಈಗಾಗಲೇ ಡಿಜಿಲಾಕರ್‌ ವ್ಯವಸ್ಥೆ ಲಭ್ಯ ಇದೆ.

Advertisement

ಇದೀಗ, ಮೆಟಾ ಮಾಲೀಕತ್ವದ ವಾಟ್ಸ್‌ಆ್ಯಪ್‌ ಮೂಲಕವೂ ಕೂಡ ಡಿಜಿಲಾಕರ್‌ನಲ್ಲಿರುವ ಪ್ಯಾನ್‌ಕಾರ್ಡ್‌, ಆಧಾರ್‌ ಕಾರ್ಡ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಕೇಂದ್ರ ಸರ್ಕಾರದ ಮೈಗವ್‌.ಇನ್‌ (https://www.mygov.in/) ಸೋಮವಾರ ಈ ಬಗ್ಗೆ ಪ್ರಕಟಿಸಿದೆ.

ಹೀಗಾಗಿ, ಮೆಸೇಜ್‌, ಚಾಟ್‌, ವಿಡಿಯೋಕಾಲ್‌ಗಾಗಿ ಬಳಕೆ ಮಾಡುವ ವಾಟ್ಸ್‌ಆ್ಯಪ್‌ ಸರ್ಕಾರಿ ಸೇವೆಗಳನ್ನು ಪಡೆಯಲೂ ಬಳಕೆಯಾಗಲಿದೆ.

ಮೈಗವ್‌.ಇನ್‌ ಹೇಳಿದ್ದೇನು?
ವಾಟ್ಸ್‌ಆ್ಯಪ್‌ ಮೂಲಕ ಡಿಜಿಲಾಕರ್‌ನ ದಾಖಲೆಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಮೂಲಕ “ಸರ್ಕಾರಿ ಸೇವೆಗಳನ್ನು ಸುಲಭವಾಗಿ, ಸರಳವಾಗಿ, ಪಾರದರ್ಶಕವಾಗಿ, ಎಲ್ಲವನ್ನೂ ಒಳಗೊಂಡಂತೆ ಪಡೆದುಕೊಳ್ಳಬಹುದು ಪಡೆದುಕೊಳ್ಳಬಹುದು’

ಕೇಂದ್ರ ಸರ್ಕಾರದ ಪ್ರಕಾರ ವಾಟ್ಸ್‌ಆ್ಯಪ್‌ನಲ್ಲಿ ಡಿಜಿಲಾಕರ್‌ ಸೇವೆ ಪಡೆಯುವುದು ಹೀಗೆ
1. ವಾಟ್ಸ್‌ಆಪ್‌ ಅನ್ನು ತೆರೆಯಬೇಕು.
2. ಡಿಜಿಲಾಕರ್‌ ಎಂದು 9013151515 ಎಂಬ ಮೊಬೈಲ್‌ ಸಂಖ್ಯೆಗೆ ಮೆಸೇಜ್‌ ಕಳುಹಿಸಬೇಕು.
3. ಆಗ ಡಿಜಿಲಾಕರ್‌ನಲ್ಲಿ ಖಾತೆ ತೆರೆಯುವ ಅಥವಾ ಖಾತೆ ದೃಢೀಕರಣಗೊಳಿಸುವ ಆಯ್ಕೆಗಳು ಲಭ್ಯವಾಗುತ್ತವೆ.
4. ಆಧಾರ್‌ ನಂಬರ್‌ ಮೂಲಕ ಲಾಗ್‌ಇನ್‌ ಆಗಿ ದಾಖಲೆಗಳನ್ನು ಡೌನ್‌ಲೋಡ್‌ ಮಾಡಬಹುದು.
5. ಮೆನುವಿಗೆ ಹೋದರೆ, ಪ್ಯಾನ್‌ ಕಾರ್ಡ್‌, ಡ್ರೈವಿಂಗ್‌ ಲೈಸನ್ಸ್‌, ವಾಹನ ನೋಂದಣಿ ವಿವರ, 10, 12ನೇ ತರಗತಿ ಅಂಕಪಟ್ಟಿ ವಿವರಗಳು ಸಿಗುತ್ತವೆ.

Advertisement

ಡಿಜಿಲಾಕರ್‌ ಬಗ್ಗೆ
ಕೇಂದ್ರ ಸರ್ಕಾರದ ಇಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಡಿಜಿಟಲ್‌ ಇಂಡಿಯಾ ಯೋಜನೆಯಡಿ ಡಿಜಿಲಾಕರ್‌ ಅನ್ನು 2015ರಲ್ಲಿ ಜಾರಿಗೊಳಿಸಲಾಗಿತ್ತು. ಜನರು ನಿತ್ಯದ ಉಪಯೋಗಕ್ಕಾಗಿ ಬಳಕೆ ಮಾಡುವ ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸನ್ಸ್‌, ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲ್‌ ಮಾಧ್ಯಮದಲ್ಲಿ ಸಂಗ್ರಹಿಸಿ ಇರಿಸಲು ಇದು ನೆರವಾಗುತ್ತಿದೆ.

10.8 ಕೋಟಿ: ಡಿಜಿಲಾಕರ್‌ ಬಳಕೆದಾರರು
500 ಕೋಟಿ- ಇಷ್ಟು ದಾಖಲೆ ವಿತರಣೆ

ವಾಟ್ಸ್‌ಆ್ಯಪ್‌ ಮೂಲಕ ಡಿಜಿಲಾಕರ್‌ ಸೇವೆಗಳನ್ನು ಒದಗಿಸುವುದು ನಾಗರಿಕರಿಗೆ ಮತ್ತಷ್ಟು ಅನುಕೂಲಗಳನ್ನು ಮಾಡಿಕೊಡುವುದರಲ್ಲಿ ಒಂದು ಹೆಜ್ಜೆ ಮುಂದೆ ಇರಿಸಿದಂತಾಗಿದೆ.
-ಅಭಿಷೇಕ್‌ ಸಿಂಗ್‌, ಮೈ ಗವ್‌.ಇನ್‌ ಸಿಇಒ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next