Advertisement

ಕೂಲ್‌ ದಿಗಂತ್‌ ಸಖತ್‌ ವರ್ಕೌಟ್

03:20 PM Oct 02, 2020 | Team Udayavani |

ಎರಡೆರಡು ಬಾರಿ ಸಿಸಿಬಿ ವಿಚಾರಣೆ ಎದುರಿಸಿರುವ ನಟ ದಿಗಂತ್‌ ಈಗ ಕೂಲ್‌ ಕೂಲ್‌! ಹೀಗೆಂದರೆ ನಿಮಗೆ ಆಶ್ವರ್ಯವಾಗಬಹುದು. ನಾವು ಹೇಳುತ್ತಿರುವುದು ದಿಗಂತ್‌ ಅವರ ವರ್ಕೌಟ್ ಬಗ್ಗೆ. ಸಿಸಿಬಿ ವಿಚಾರಣೆಯಿಂದ ಕೊಂಚಕಸಿವಿಸಿಯಾಗಿದ್ದ ನಟ ದಿಗಂತ್‌ ಈಗ ಮತ್ತೆ ವರ್ಕ್‌ ಮೂಡ್‌ಗೆ ಜಾರಿದ್ದಾರೆ. ವರ್ಕ್‌ ಮೂಡ್‌ಗೆ ಹೋಗುವ ಮುನ್ನ ವರ್ಕೌಟ್ ಕೂಡಾ ಮುಖ್ಯ ಎಂಬುದು ದಿಗಂತ್‌ಗೆ ಚೆನ್ನಾಗಿ ಗೊತ್ತಿದೆ. ಆ ಕಾರಣದಿಂದಲೇ ದಿಗಂತ್‌ ವರ್ಕೌಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ತಾವು ವಕೌìಟ್‌ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ದಿಗಂತ್‌,ಕೂಲ್‌ ಆಗಿ ವರ್ಕೌಟ್ ಮಾಡಿ ಎಂಬಂತಕ್ಯಾಪ್ಶನ್‌ ನೀಡಿದ್ದಾರೆ.

Advertisement

ದಿಗಂತ್‌ “ಗಾಳಿಪಟ-2′, “ಮಾರಿಗೋಲ್ಡ್‌’, “ಹುಟ್ಟುಹಬ್ಬದ ಶುಭಾಶಯಗಳು’, “ವೇರಿ ಇಸ್‌ ಮೈಕನ್ನಡಕ’ ಚಿತ್ರದ ಜೊತೆಗ ತೆಲುಗಿನ “ಎವರು’ ಸಿನಿಮಾದ ರೀಮೇಕ್‌ನಲ್ಲೂ ದಿಗಂತ್‌ ನಟಿಸುತ್ತಿದ್ದಾರೆ. ಈಗ ಅವರ “ಮಾರಿಗೋಲ್ಡ್‌’ ಚಿತ್ರ ಚಿತ್ರೀಕರಣ ಆರಂಭವಾಗಿದ್ದು,, ದಿಗಂತ್‌ ಚಿತ್ರೀಕರಣದಲ್ಲೂ ಭಾಗಿಯಾಗಿದ್ದಾರೆ. ಈಗಾಗಲೇ ಈ ಚಿತ್ರ ಮೊದಲ ಹಂತದ ಚಿತ್ರೀಕರಣ ಪೂರೈಸಿದೆ. ರಾಘವೇಂದ್ರ ಎಂ.ನಾಯಕ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ “ಟಗರು’ ಖ್ಯಾತಿಯ “ಕಾಕ್ರೋಚ್‌’ ಸುಧಿ, ಯಶವಂತ್‌ ಶೆಟ್ಟಿ, ನಾಯಕಿ ಸಂಗೀತಾ ಶೃಂಗೇರಿ ಇತರರು ನಟಿಸುತ್ತಿದ್ದಾರೆ.

ಅಂದಹಾಗೆ, “ಮಾರಿಗೋಲ್ಡ್‌’ ಒಂದು ಕಾಮಿಡಿ ಥ್ರಿಲ್ಲರ್‌ ಜಾನರ್‌ ಆಗಿದ್ದು, ಹಾಸ್ಯದೊಂದಿಗೆ ಗಂಭೀರ ವಿಷಯ ಹೇಳುತ್ತಲೇ ಬೊಗಸೆಯಷ್ಟು ಪ್ರೀತಿ, ಎಮೋಷನಲ್‌ ವಿಷಯಗಳನ್ನು ಹೇಳುವ ಮೂಲಕ ಹೊಸತನದ ನಿರೂಪಣೆಯೊಂದಿಗೆ ಸಿನಿಮಾ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದೆ ಚಿತ್ರತಂಡ. ಈ ನಡುವೆಯೇ ದಿಗಂತ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ “ಗಾಳಿಪಟ-2′ ಚಿತ್ರದ ಚಿತ್ರೀಕರಣ ಆರಂಭಿಸಲು ನಿರ್ದೇಶಕ ಯೋಗರಾಜ್‌ ಭಟ್‌ ತಯಾರಿ ನಡೆಸುತ್ತಿದ್ದಾರೆ. ­

Advertisement

Udayavani is now on Telegram. Click here to join our channel and stay updated with the latest news.

Next