Advertisement
ಹಾಸನ: ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಹಾಸನ ಕ್ಷೇತ್ರದಲ್ಲಿ ದಾಖಲೆ ಮತದಾನವಾಗಿರು ವಂತೆಯೇ ದಿವ್ಯಾಂಗರಿಂದಲೂ ಶೇ.95ರಷ್ಟು ಮತದಾನವಾಗಿದೆ.
Related Articles
Advertisement
ಸಂಜ್ಞಾ ಭಾಷೆ ತರ್ಜುಮೆದಾರರ ನೇಮಕ: ಜಿಲ್ಲೆ ಯಲ್ಲಿ 1,182 ಶ್ರವಣದೊಷವುಳ್ಳ ಮತದಾರರಿದ್ದು, ಮತದಾನದ ದಿನದಂದು ಹೋಬಳಿ ಕೇಂದ್ರಕ್ಕೆ ಒಬ್ಬರಂತೆ 38 ಕಡೆಗಳಲ್ಲಿ ಸಂಜ್ಞಾ ಭಾಷೆ ತರ್ಜುಮೆ ದಾರರನ್ನು ನೇಮಿಸಲಾಗಿತ್ತು. 662 ಮತಗಟ್ಟೆಗಳಲ್ಲಿ ಮತಗಟ್ಟೆ ಹೊರಭಾಗದಲ್ಲಿ ಟೀವಿ ಅಳವಡಿಸಿ ಸಂಜ್ಞೆ ಭಾಷೆಯ ವಿಡಿಯೋ ಪ್ರಸಾರ ಮಾಡುವ ಮೂಲಕ ಮತದಾದ ಬಗ್ಗೆ ಮಾಹಿತಿ ನೀಡಲಾಗಿತ್ತು.
ನಿರಂತರವಾಗಿ ದಿವ್ಯಾಂಗರ ಮತದಾರರಿಗೆ ಮಾಹಿತಿ ನೀಡಿ, ಸಂಪರ್ಕ ಇರಿಸಿಕೊಂಡು ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಲಾಯಿತು. ಎಲ್ಲಾ ಮತಗಟ್ಟೆಗಳಲ್ಲಿ ಛತ್ರಿಯ ನೆರಳಿನ ಸಹಾಯದಿಂದ ಬಿಸಿಲಿನ ತಾಪ ಉಂಟಾಗದಂತೆ ನೆರವು ನೀಡಲಾಗಿತ್ತು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಲಿಂಗ ಅಲ್ಪ ಸಂಖ್ಯಾತರೂ ಸಹ ಮತದಾರರ ಜಾಗೃತಿ ಚಟುವಟಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಲಿಂಗ ಅಲ್ಪ ಸಂಖ್ಯಾತರಾದ ವರ್ಷಾ ಮತ್ತು ಶ್ರಾವಣಿ ಅವರು ಮಾತನಾಡಿ, ಈ ಬಾರಿ ಜಿಲ್ಲಾ ಪಂಚಾಯಿತಿ ಸಭಾಂಗಣದಕ್ಕೆ ಆಹ್ವಾನಿಸಿ ವಿಶೇಷವಾಗಿ ಲಿಂಗ ಅಲ್ಪ ಸಂಖ್ಯಾತರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡು ವಿದ್ಯುನ್ಮಾನ ಮತಯಂತ್ರಗಳ ಬಳಕೆ, ವಿ.ವಿ.ಪ್ಯಾಟ್ ಬಳಕೆ ಮಾಹಿತಿ ನೀಡಿ ಕಡ್ಡಾಯ ಮತ ದಾನದಮಹತ್ವದ ಬಗ್ಗೆ ಪ್ರೇರಣೆ ನೀಡಿದ್ದು ಲಿಂಗ ಅಲ್ಪ ಸಂಖ್ಯಾತರು ಮತಹಾಕಲು ಕಾರಣವಾಗಿದೆ ಎಂದರು.
ಸ್ಪೀಪ್ ಅಧ್ಯಕ್ಷರ ಕೃತಜ್ಞತೆ: ಜಿಲ್ಲಾ ಸ್ಪೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್. ವಿಜಯ ಪ್ರಕಾಶ್ ಅವರು ಈ ಬಗ್ಗೆ ಪ್ರತಿಕಿಯಿಸಿ ಜಿಲ್ಲಾ ಸ್ಪೀಪ್ ಸಮಿತಿ ಹಾಗೂ ಜಿಲ್ಲಾಡಳಿತದ ಪ್ರಯತ್ನ ವಿಫಲ ನೀಡಿದೆ ಎಂದಿದ್ದಾರೆ. ಜಿಲ್ಲೆಯಲ್ಲಿ ಶೇ 95.37ರಷ್ಟು ದಿವ್ಯಾಂಗರು ಮತಚಲಾಯಿಸಿ ಇತರರಿಗೆ ಮಾದರಿ ಎನಿಸಿದ್ದಾರೆ. ಎಂತಹ ದೈಹಿಕ ಕಷ್ಟವಿದ್ದರೂ ಛಲದಿಂದ ಬಂದು ಮತಹಾಕಿದ ದಿವ್ಯಾಂಗ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಅಭಿನಂದನೆ
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರೂ ಪ್ರತಿಕ್ರಿಯಿಸಿ, ದಿವ್ಯಾಂಗರಿಗೆ ಮತದಾನದ ಬಗ್ಗೆ ಇರುವ ಕಾಳಜಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಸ್ಪೀಪ್ ಸಮಿತಿಯಿಂದಾದ ಜಾಗೃತಿ ಮತ್ತು ಜಿಲ್ಲೆಯಾದ್ಯಂತ ಮಾಡಿದ್ದ ಸೌಲಭ್ಯಗಳು ಸಮರ್ಪಕವಾಗಿ ಅನುಷ್ಠಾನ ಗೊಳಿಸಿದ್ದಕ್ಕಾಗಿ ಎಲ್ಲಾ ಅಧಿಕಾರಿ ಸಿಬ್ಬಂದಿಗೆ, ಸ್ವಯಂ ಸೇವಕರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.