Advertisement

ಓಡಂತರ್ಯ: ಬರಿದಾಯಿತು ಗೌರಿ ಹೊಳೆ

01:07 PM Apr 12, 2018 | Team Udayavani |

ಸವಣೂರು: ಬೇಸಗೆ ಬಂತೆಂದರೆ ಎಲ್ಲೆಡೆಯೂ ನೀರಿಗಾಗಿ ಹಾಹಾಕಾರ ಕೇಳಿಬರುವುದು ಸಾಮಾನ್ಯ. ಸವಣೂರು ಗ್ರಾ.ಪಂ. ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದ ಓಡಂತರ್ಯದಲ್ಲಿ ಹರಿಯುತ್ತಿರುವ ಗೌರಿ ಹೊಳೆಯಲ್ಲಿ ಇಲ್ಲಿನ ನಿವಾಸಿಗಳಿಗೆ ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಜಾಕ್‌ವೆಲ್‌ ನಿರ್ಮಾಣ ಮಾಡಲಾಗಿದೆ.

Advertisement

ಆದರೆ ಈಗ ಹೊಳೆಯ ನೀರು ಸಂಪೂರ್ಣವಾಗಿ ಬತ್ತಿಹೋಗಿದ್ದು, ಜಾಕ್‌ವೆಲ್‌ನಲ್ಲೂ ನೀರಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಗುತ್ತಿಗೆದಾರರು ನಿಗದಿತ ಪ್ರಮಾಣದಲ್ಲಿ ಆಳ ಮಾಡದೆ ಜಾಕ್‌ವೆಲ್‌ ನಿರ್ಮಾಣ ಮಾಡಿರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ.

ಎಂಜಿನಿಯರ್‌ ನಿರ್ಲಕ್ಷ್ಯ 
ಗುತ್ತಿಗೆದಾರರು ಜಾಕ್‌ವೆಲ್‌ ನಿರ್ಮಾಣ ಕಾಮಗಾರಿ ಮಾಡುವ ಸಮಯದಲ್ಲಿ ಸರಿಯಾಗಿ ಆಳ ಮಾಡಿಲ್ಲ. ಕಲ್ಲು ಸಿಕ್ಕಿದ್ದು, ಅದನ್ನು ಒಡೆಯದೆ ಹಾಗೇ ಬಿಟ್ಟಿದ್ದಾರೆ. ಇದರಿಂದ ಭವಿಷ್ಯದಲ್ಲಿ ಸಮಸ್ಯೆಯಾಗಲಿದೆ ಎಂಬುದನ್ನು ಇಲಾಖೆ ಎಂಜಿನಿಯರ್‌ ಗಮನಕ್ಕೆ ತಂದಿದ್ದೇವೆ. ಆದರೆ ಅವರು ಕಾಮಗಾರಿಯ ಸ್ಥಳಕ್ಕೆ ಬಾರದೇ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಸಮಸ್ಯೆಯಾಗಿದೆ ಎಂದು ಹೇಳುತ್ತಾರೆ ಗ್ರಾ.ಪಂ. ಸದಸ್ಯ ನಾಗೇಶ್‌ ಓಡಂತರ್ಯ.

ಕೊಳವೆ ಬಾವಿ ಕೊರೆಯಿಸಿ
ಇನ್ನು ಈ ಜಾಕ್‌ವೆಲ್‌ ನಂಬಿದರೆ ಕಷ್ಟ. ಇಲ್ಲಿ ಕೊಳವೆ ಬಾವಿ ಕೊರೆಯಿಸಿದರೆ ಮಾತ್ರ ಪರಿಹಾರ ಸಾಧ್ಯ. ಎಂಜಿನಿಯರ್‌ ನಿರ್ಲಕ್ಷ್ಯದಿಂದ ಈ ಸಮಸ್ಯೆಯಾಗಿದೆ ಎನ್ನುತ್ತಾರೆ ಧನರಾಜ್‌. 

ಜಾಕ್‌ವೆಲ್‌ ನಂಬಿ ಕೆಟ್ಟೆವು
ಹೊಳೆಯಲ್ಲಿ ನಿರ್ಮಿಸಿದ ಜಾಕ್‌ವೆಲ್‌ ನಂಬಿ ನಾವು ಸ್ವತಃ 30 ಸಾವಿರ ರೂ. ಖರ್ಚು ಮಾಡಿ ಪೈಪ್‌ ಇತ್ಯಾದಿಗಳನ್ನು ಅಳವಡಿಸಿದ್ದೇವೆ. ಆದರೆ ಈಗ ನೀರಿಲ್ಲದೆ ಪರಿತಪಿಸುವಂತಾಗಿದೆ ಎನ್ನುತ್ತಾರೆ ಇಲ್ಲಿನ ಬಳಕೆದಾರರು.

Advertisement

ಪ್ರವೀಣ್‌ ಚೆನ್ನಾವರ 

Advertisement

Udayavani is now on Telegram. Click here to join our channel and stay updated with the latest news.

Next