Advertisement
1. ಆಂಗಾಂಗಗಳ ವಿಮೆಸೆಲಬ್ರಿಟಿಗಳು, ಕ್ರೀಡಾಪಟುಗಳಿಗೆ ಅವರ ದೈಹಿಕ ಆರೋಗ್ಯವೇ ಆಸ್ತಿ. ಹೀಗಾಗಿ ಅಂಥವರಿಗೆಂದೇ ಬಾಡಿ ಪಾರ್ಟ್ ಇನ್ಷೊರೆನ್ಸ್ ಪಾಲಿಸಿಗಳಿವೆ. ಇದರಲ್ಲಿ ಪಾಲಿಸಿದಾರರು ತಮ್ಮ ದೇಹದ ಯಾವುದೇ ಭಾಗಗಳಿಗೆ ಇನ್ಷೊರೆನ್ಸ್ ಮಾಡಿಸಬಹುದಾಗಿದೆ. ಯಾವುದೇ ಸಂದರ್ಭದಲ್ಲಿ ಆ ಭಾಗಕ್ಕೆ ಹಾನಿಯುಂಟಾದರೆ ಇನ್ಷೊರೆನ್ಸ್ ಕ್ಲೈಮ್ ಮಾಡಬಹುದು. ಬಾಲಿವುಡ್ ತಾರೆಯರಾದ ಜಾನ್ ಅಬ್ರಾಹಂ, ಮಲ್ಲಿಕಾ ಶೇರಾವತ್, ಮನೀಷಾ ಲಂಬಾ ಈ ವಿಮೆಯ ಪಾಲಿಸಿದಾರರಲ್ಲಿ ಕೆಲವರು. ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ತಮ್ಮ ಕೈಗಳಿಗೆ ಇನ್ಷೊರೆನ್ಸ್ ಮಾಡಿಸಿದ್ದಾರೆ. ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ತಮ್ಮ ಮುಗುಳ್ನಗೆಗೆ ವಿಮೆ ಮಾಡಿಸಿದ್ದಾರೆ.
ಹಾಡುಗಾರರಿಗೆ ಅವರ ಕಂಠಕ್ಕಿಂತ ಮಿಗಿಲಾದ ಸಂಪತ್ತಿಲ್ಲ. ಭಾರತದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ತಮ್ಮ ಇಳಿವಯಸ್ಸಿನಲ್ಲಿಯೂ ಸಂಗೀತಾಭ್ಯಾಸ ಮಾಡುತ್ತಾರೆ. ಇಂದಿಗೂ ಅವರು ಹಾಡಿದರೆ ಶ್ರುತಿಬದ್ಧವಾಗಿಯೇ ಇರುತ್ತದೆ. ಹಾಗಿದ್ದರೂ ಅವರು ದನಿಯ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳಲಿಲ್ಲ. ಅವರು ತಮ್ಮ ದನಿಗೆ ಇನ್ಷೊರೆನ್ಸ್ ಮಾಡಿಸಿದ್ದಾರೆ. ವಾಯ್ಸಗೆ ವಿಮೆ ಮಾಡಿಸಿರುವ ಮತ್ತೂಬ್ಬ ಸೆಲಬ್ರಿಟಿ ರಜಿನಿಕಾಂತ್. ಅವರು ತಮ್ಮ ದನಿಗೆ ಕಾಪಿರೈಟನ್ನೂ ಮಾಡಿಸಿದ್ದಾರೆ. 3. ಪೆಟ್ ಇನ್ಷೊರೆನ್ಸ್
ನಮ್ಮಲ್ಲಿ ಜೀವ ವಿಮೆ ಇರುವಂತೆಯೇ ಸಾಕುಪ್ರಾಣಿಗಳಿಗೂ ಪೆಟ್ ಇನ್ಷೊರೆನ್ಸ್ ಇದೆ. ಮನೆಯ ಸಾಕುಪ್ರಾಣಿಗಳು ಮನೆಯ ಸದಸ್ಯನಂತೆಯೇ ಇರುತ್ತವೆ. ಹೀಗಾಗಿ ಅವುಗಳಿಗೂ ವಿಮೆ ಮಾಡಿಸುತ್ತಿರುವುದು ಸಂತಸದ ಸಂಗತಿಯೇ. ಆದರೆ, ಕೆಲ ಸಂದರ್ಭಗಳಲ್ಲಿ ಯಜಮಾನರು ತಮ್ಮ ನೆಚ್ಚಿನ ನಾಯಿ ಸತ್ತ ನಂತರ ಇನ್ನೊಂದು ನಾಯಿಯನ್ನು ಕೊಳ್ಳಲು ನೆರವಾಗುತ್ತದೆ ಎಂಬ ಕಾರಣಕ್ಕೂ ಈ ವಿಮೆಗೆ ಮೊರೆ ಹೋಗುತ್ತಿದ್ದಾರೆ.
Related Articles
“ಮದುವೆ’ ಅನ್ನೋದು ಜೂಜು ಎಂಬ ಹಿರಿಯರ ಮಾತನ್ನು ನಿಜವಾಗಿಸುವ ವಿಮೆ ಇದು. ಭಾರತೀಯರು ಮಿಕ್ಕ ವಿಷಯಗಳಲ್ಲಿ ಜಿಪುಣತನ ತೋರಿದರೂ ಮದುವೆ ಮುಂತಾದ ಸಮಾರಂಭಗಳಿಗೆ ಮಾತ್ರ ವಿನಾಯಿತಿ ನೀಡುತ್ತಾರೆ. ಹೀಗಾಗಿ ಮದುವೆ ಸಮಾರಂಭಗಳೂ ವಿಮೆಯ ವ್ಯಾಪ್ತಿಯಡಿ ಬಂದಿವೆ. “ಒಂದು ವೇಳೆ’ ಮದುವೆ ಸಮಾರಂಭ ಅರ್ಧಕ್ಕೇ ನಿಂತುಹೋದರೆ ಇದುವರೆಗೂ ಮಾಡಿರುವ ಖರ್ಚು ನೀರಿನಲ್ಲಿ ಹಾಕಿದಂತಾಗುತ್ತದೆ. ಈ ನಷ್ಟವನ್ನು ತಗ್ಗಿಸುವುದೇ ಈ ವಿಮೆಯ ಉದ್ದೇಶ.
Advertisement
5. ಕೌನ್ ಬನೇಗಾ ಕರೋಡ್‌ಪತಿ ವಿಮೆಶ್ರೀ ಸಾಮಾನ್ಯ ಕೂಡಾ ಕೋಟಿ ರೂಪಾಯಿ ಸಂಪಾದಿಸಬಲ್ಲ ಎಂಬ ಭಾರತೀಯರ ಕನಸಿಗೆ ರೆಕ್ಕೆ ಮೂಡಿಸಿದ್ದು “ಕೌನ್ ಬನೇಗಾ ಕರೋಡ್‌ಪತಿ’. ಇದು ಇಂಗ್ಲೆಂಡ್‌ನಲ್ಲಿ ಪ್ರಸಾರವಾಗುತ್ತಿದ್ದ “ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್’ನಿಂದ ಸ್ಫೂರ್ತಿ ಪಡೆದಿದ್ದು. ಕಾರ್ಯಕ್ರಮದಲ್ಲಿ ನೀಡಲಾಗುವ ಬಹುಮಾನದ ಹಣಕ್ಕೆ ಇನ್ಷೊರೆನ್ಸ್ ಮಾಡಿಸಿದ್ದಾರೆ ಎನ್ನುವುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅದರಲ್ಲಿ ಪಾಲ್ಗೊಳ್ಳುವ ಪ್ರತಿಸ್ಪರ್ಧಿ 25 ಲಕ್ಷ ರೂ. ಒಳಗೆ ಎಷ್ಟೇ ಹಣ ಗೆದ್ದರೂ ಕಾರ್ಯಕ್ರಮದ ನಿರ್ಮಾಪಕರು ಕೊಡುತ್ತಾರೆ. 25 ಲಕ್ಷದ ಮೇಲೆ ಎಷ್ಟೇ ಗೆದ್ದರೂ ಇನ್ಷೊರೆನ್ಸ್ ಸಂಸ್ಥೆ ಕೊಡುತ್ತದೆ. ಅಂದರೆ 1 ಕೋಟಿ ಗೆದ್ದ ಪಕ್ಷದಲ್ಲಿ 25 ಲಕ್ಷ ರೂ.ಗಳನ್ನು ಮಾತ್ರ ನಿರ್ಮಾಪಕ ಕೊಡುತ್ತಾನೆ, ಉಳಿದ 75 ಲಕ್ಷ ಹಣವನ್ನು ವಿಮಾ ಕಂಪನಿ ಪಾವತಿಸುತ್ತದೆ. ಏಲಿಯನ್ ಇನ್ಷೊರೆನ್ಸ್
ಈ ಇನ್ಷೊರೆನ್ಸ್ ಮುಂದೆ ಮಿಕ್ಕಾವ ವಿಮೆಗಳೂ ವಿಚಿತ್ರ ಅನ್ನಿಸಲಿಕ್ಕಿಲ್ಲ. ಲಂಡನ್ ಮೂಲದ ವಿಮಾ ಸಂಸ್ಥೆಯೊಂದು ತಂದಿರುವ ಈ ಏಲಿಯನ್ ವಿಮೆಗೆ 20,000 ಮಂದಿ ಪಾಲಿಸಿದಾರರಿದ್ದಾರೆ ಎನ್ನುವುದು ಅಚ್ಚರಿಯ ಸಂಗತಿ. ಹಾರುವ ತಟ್ಟೆಗಳಲ್ಲಿ ಆಕಾಶದಿಂದ ಇಳಿಯುವ ಅನ್ಯಗ್ರಹಜೀವಿಗಳು ಮನುಷ್ಯರನ್ನು ಹೊತ್ತೂಯ್ದು ಪ್ರಯೋಗಗಳನ್ನು ಮಾಡುತ್ತಾರೆ ಎಂಬ ಸಂಗತಿ ಒಂದು ಕಾಲದಲ್ಲಿ ಜಗತ್ತಿನಾದ್ಯಂತ ಭೀತಿ ತಂದಿತ್ತು. ಅನೇಕ ಮಂದಿ ತಮ್ಮನ್ನು ಏಲಿಯನ್ನರು ಹೊತ್ತೂಯ್ದು ವಾಪಸ್ಸು ತಂದು ಬಿಟ್ಟಿದ್ದಾರೆ ಎನ್ನುವ ಅನೇಕರು ಇಂದಿಗೂ ವಿದೇಶಗಳಲ್ಲಿ ಸಿಗುತ್ತಾರೆ. ಅದರ ಆಧಾರದಲ್ಲೇ ಈ ವಿಮೆ ತಂದಿರುವುದು. ಏಲಿಯನ್ ವಿಮೆಯ ಪಾಲಿಸಿದಾರರು ತಮ್ಮನ್ನು ಏಲಿಯನ್ನರು ಹೊತ್ತೂಯ್ದಿದ್ದಾರೆ ಎನ್ನುವುದಕ್ಕೆ ಪುರಾವೆ ಒದಗಿಸಿದರೆ ಮಾತ್ರ ವಿಮೆ ಕ್ಲೈಮ್ ಆಗುತ್ತದೆ. – ಹವನ