ಸೀಬೆ ಹಣ್ಣಿಗೆ, “ಬಡವರ ಸೇಬು’ ಎಂದು ಕರೆಯು ತ್ತಾರೆ. ಹೆಸರಿನಲ್ಲಷ್ಟೇ ಅಲ್ಲ, ಗುಣದಲ್ಲಿಯೂ ಸೀಬೆ ಹಣ್ಣು, ಸೇಬು ಹಣ್ಣಿನಷ್ಟೇ ವಿಟಮಿನ್‌ಗಳನ್ನು ಹೊಂದಿದೆ. ಪೇರಳೆ, ಚೇಪೆ ಎಂದೂ ಕರೆಯಲ್ಪಡುವ ಈ ಹಣ್ಣು ಸಾಮಾನ್ಯವಾಗಿ ಎಲ್ಲರ ಮನೆಯ ಹಿತ್ತಲಿನಲ್ಲಿ ಬೆಳೆಯುತ್ತದೆ. ಹಲವು ಕಾಯಿಲೆಗಳಿಗೆ ಸೀಬೆಹಣ್ಣು ರಾಮ ಬಾಣ ಆಗಿರೋದ್ರಿಂದ, “ಹಿತ್ತಲ ಗಿಡ ಮದ್ದಲ್ಲ’ ಎಂದು ಈ ಹಣ್ಣನ್ನು ನಿರ್ಲಕ್ಷಿಸುವ ಮಾತೇ ಇಲ್ಲ. ಸೀಬೆ ಹಣ್ಣನ್ನು ಉಪ್ಪು-ಖಾರ ಬೆರೆಸಿ ಕೊಂಡು ತಿನ್ನಬಹುದಷ್ಟೇ ಅಲ್ಲ, ಅದರಿಂದ ರುಚಿಯಾದ ತಿನಿಸುಗಳನ್ನೂ ತಯಾರಿಸಬಹುದು.
ಸೀಬೆ ಹಣ್ಣಿನ ಕುಲ್ಫಿ
ಬೇಕಾಗುವ ಸಾಮಗ್ರಿ: ಬೀಜ ತೆಗೆದ ಸೀಬೆ ಹಣ್ಣಿನ ಹೋಳು – 250 ಗ್ರಾಂ, ಕ್ರೀಂ – 4 ಟೇಬಲ… ಚಮಚ, ಹಾಲಿನ ಪುಡಿ – 1/4 ಕಪ್, ಕಂಡೆನ್‌ಸ್ಡ್ ಮಿಲ್ಕ… – 1/2 ಕಪ್.
ಮಾಡುವ ವಿಧಾನ: ಮೇಲೆ ಹೇಳಿದ ಎÇÉಾ ಸಾಮಗ್ರಿಗಳನ್ನು ಮಿಕ್ಸಿಯಲ್ಲಿ ಬ್ಲೆಂಡ್ ಮಾಡಿ, ಕುಲ್ಫಿ ಅಚ್ಚಿಗೆ ಹಾಕಿ 6 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ತಣ್ಣಗಾಗಿಸಿ.