Advertisement
1ಎ ಲೈನ್ ಸ್ಕರ್ಟ್ಸ್ : ಇವುಗಳು ವೇಸ್ಟ್ ಬ್ಯಾಂಡ್‌ನಲ್ಲಿ ಕಡಿಮೆ ಅಗಲವನ್ನು ಹೊಂದಿದ್ದು ಕೆಳಗೆ ಬಂದಂತೆ ಅಗಲ ಹೆಚ್ಚುತ್ತಾ ಹೋಗುತ್ತವೆ. ಇವುಗಳ ಆಕಾರ “A’ಗೆ ಹೋಲುವುದರಿಂದ ಇವುಗಳಿಗೆ “ಎ’ ಲೈನ್ ಸ್ಕರ್ಟುಗಳೆಂದು ಕರೆಯಲಾಗುತ್ತದೆ. ಇವುಗಳು ನೀ-ಲೆನ್ತ್, ಕಾಲ್ಫ್ ಲೆನ್ತ್ ಹಾಗೂ ಆ್ಯಂಕಲ್ ಲೆನ್ತ್ ಎಂಬ ಮೂರು ಬಗೆಗಳಲ್ಲಿ ದೊರೆಯುತ್ತವೆ. ಎಲ್ಲಾ ಬಗೆಯ ಬಟ್ಟೆಗಳಲ್ಲಿ ಮತ್ತು ಹಲವಾರು ಡಿಸೈನುಗಳಲ್ಲಿ ದೊರೆಯುತ್ತವೆ. ಆದ್ದರಿಂದ ಕ್ಯಾಷವಲ… ಮತ್ತು ಪಾರ್ಟಿವೇರ್ ಎರಡೂ ಮಾದರಿಗಳ ಸ್ಕರ್ಟುಗಳು ದೊರೆಯುತ್ತವೆ.1ಮ್ಸ್ಟಿಕ್ ಸ್ಕರ್ಟ್ಸ್: ಇವುಗಳು ಮಡಚಿದಂತಹ ಅಥವಾ ರಿಂಕಲ್ ಮಾದರಿಯಲ್ಲಿರುತ್ತವೆ. ನೀ-ಲೆನ್ತ್ ಮತ್ತು ಆ್ಯಂಕಲ್ ಲೆನ್¤ ಎರಡೂ ಬಗೆಗಳಲ್ಲಿ ದೊರೆಯುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ಮೂರು ಅಥವಾ ಮೂರಕ್ಕಿಂತ ಹೆಚ್ಚಿನ ಸ್ಟ್ರಿಪ್ಸ್ ಒಂದಕ್ಕೊಂದು ಜೋಡಣೆಯಾಗಿರುತ್ತವೆ. ಲೇಯರುಗಳಂತೆ ಕಾಣುತ್ತವೆ ಮತ್ತು ಕ್ಯಾಷುವಲ್ ಸ್ಕರ್ಟುಗಳಾಗಿವೆ.
Related Articles
Advertisement
6ಫಿಶ್ಟ್ರಲ್ ಸ್ಕರ್ಟ್ಸ್ : ಇವುಗಳನ್ನು ಮರ್ಮೈಡ್ (ಜಲ್ ಪರಿ) ಸ್ಕರ್ಟುಗಳೆಂದೂ ಕರೆಯಲಾಗುತ್ತದೆ. ಈ ಬಗೆಯ ಸ್ಕರ್ಟುಗಳು ವೇಸ್ಟಿನಿಂದ ಹಿಪ್‌ವರೆಗೆ ಫಿಟ್ಟಿಂಗ್ ಹೊಂದಿದ್ದು ನಂತರ ಅಗಲಗೊಳ್ಳುತ್ತಾ ಫ್ಲೇರ್ಸ್ ಅನ್ನು ಒಳಗೊಂಡಿರುತ್ತವೆ. ಆದ್ದರಿಂದಲೇ ಇವುಗಳಿಗೆ ಫಿಶ್ಟ್ರಲ್ ಸ್ಕರ್ಟ್ಸ್ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಹೈ-ಲೊ ಮಾದರಿಯೂ ಕೂಡ ದೊರೆಯುತ್ತದೆ. ವಿಧ ವಿಧದ ಬಗೆಯ ಬಟ್ಟೆಗಳಲ್ಲಿ ಮತ್ತು ಬಣ್ಣಗಳಲ್ಲಿ ದೊರೆಯುತ್ತವೆ.7ಫ್ಲೇರ್ಡ್ ಸ್ಕರ್ಟ್ಸ್: ಫ್ಲೇರ್ಡ್ ಸ್ಕರ್ಟುಗಳು ಎ ಲೈನ್ ಸ್ಕರ್ಟುಗಳಿಗೆ ಹೋಲುವಂತಿರುತ್ತವೆ. ಕೆಳಭಾಗ ಅಗಲವಾಗಿರುತ್ತವೆ. ಇವುಗಳು ಮೂರು ಲೆನ್ತ್ ಗಳಲ್ಲಿಯೂ ಲಭಿಸುತ್ತವೆ. ಅಷ್ಟೇ ಅಲ್ಲದೆ ಇವುಗಳ ತಯಾರಿಕೆಗೆ ಬಳಸುವ ಬಟ್ಟೆಗಳ ಆಧಾರದ ಮೇಲೆ ಸೂಕ್ತ ಸಂದರ್ಭಗಳಿಗೆ ಬಳಸಿಕೊಳ್ಳಬಹುದು ಅಥವಾ ಧರಿಸಬಹುದು. 8ಗೋರ್ಡ್ಸ್ ಸ್ಕರ್ಟ್ಸ್: ಹಲವು ತ್ರಿಕೋನೀಯ ಪಟ್ಟಿಗಳನ್ನು ಜೋಡಿಸುವುದರ ಮೂಲಕ ಈ ಸ್ಕರ್ಟುಗಳನ್ನು ತಯಾರಿಸಲಾಗುತ್ತದೆ. ಈ ಬಗೆಯ ಸ್ಕರ್ಟುಗಳು ವೇಸ್ಟಿನಲ್ಲಿ ಫಿಟ್ಟಿಂಗ್ ಅನ್ನು ಹೊಂದಿದ್ದು ನಂತರ ಎ ಲೈನ್ ಶೇಪನ್ನು ಪಡೆದುಕೊಳ್ಳುತ್ತದೆ. ಅಂಬ್ರೆಲ್ಲಾ ಸ್ಕರ್ಟುಗಳಂತೆಯೇ ಲುಕ್ಕನ್ನು ಕೊಡುವ ಇವುಗಳು ನೋಡಲು ಸುಂದರವಾಗಿರುತ್ತವೆ. ಧರಿಸಲು ಕೂಡ ಆರಾಮದಾಯಕವಾಗಿರುತ್ತವೆ.
9ಮಿನಿ ಸ್ಕರ್ಟ್ಸ್: ಇವು ಹೆಸರಿಗೆ ತಕ್ಕಂತೆ ಶಾರ್ಟ್ ಸ್ಕರ್ಟುಗಳು. ಹೆಚ್ಚಾಗಿ ಮುಂದುವರಿದ ನಗರಗಳಲ್ಲಿ ಮಾತ್ರ ಬಳಸುವಂತಹ ಸ್ಕರ್ಟುಗಳಾಗಿದ್ದು, ಮಕ್ಕಳಿಂದ ಎಲ್ಲಾ ಕಡೆಗಳಲ್ಲಿ ಬಳಸಲ್ಪಡುತ್ತವೆ. ಇವುಗಳಲ್ಲಿ ಹಲವು ಮಾದರಿಗಳ ಮಿನಿ ಸ್ಕರ್ಟುಗಳು ದೊರೆಯತ್ತವೆ. ಸರ್ಕಲ್ ಮಿನಿಸ್ಕರ್ಟ್, ಗೋರ್ಡ್ ಸ್ಕರ್ಟ್, ಬಬಲ್ ಸ್ಕರ್ಟ್ ಇತ್ಯಾದಿ ಬಗೆಗಳಲ್ಲಿ ದೊರೆಯುತ್ತವೆ. ಬಹಳ ಮಾಡರ್ನ್ ಬಗೆಯ ದಿರಿಸಾದ್ದರಿಂದ ಇವುಗಳು ಸ್ಟೈಲಿಶ್ ಲುಕ್ಕನ್ನು ನೀಡುತ್ತವೆ. 10ಪೀಸಂಟ್ ಸ್ಕರ್ಟ್ಸ್: ಪೀಸಂಟ್ ಸ್ಕರ್ಟುಗಳು ಬ್ರೂಮ…ಸ್ಟಿಕ್ ಸ್ಕರ್ಟುಗಳಿಗೆ ಹೋಲುತ್ತವೆ. ಆದರೆ ಈ ಬಗೆಗಳಲ್ಲಿ ರಿಂಕಲ್ ಲುಕ್ಕಿರುವುದಿಲ್ಲ, ಮೂರು ಅಥವಾ ನಾಲ್ಕು ಅಡ್ಡ ಲೇಯರುಗಳನ್ನು ಹೊಂದಿರುತ್ತವೆ. ಇವುಗಳು ಕಾಟನ್, ಶಿಫಾನ್, ಜಾರ್ಜೆಟ್, ಪ್ರಿಂಟೆಡ್ ಎಲ್ ಬಗೆಗಳಲ್ಲಿಯೂ ದೊರೆಯುತ್ತವೆ. 11. ಪೆನ್ಸಿಲ್ ಸ್ಕರ್ಟ್ಸ್: ಪೆನ್ಸಿಲ್ ಸ್ಕರ್ಟಗಳು ನೀ ಲೆನ್¤ ಸ್ಕರ್ಟುಗಳಾಗಿದ್ದು ಕೆಳಭಾಗದಲ್ಲಿ ಫಿಟ್ ಇರುತ್ತದೆ. ಇವುಗಳನ್ನು ಧರಿಸಿಡೆಯಲು ಸ್ವಲ್ಪ ಕಠಿಣವೆನಿಸಿದರೂ ಸ್ಟೈಲಿಶ್ ಮತ್ತು ಎಲಿಗ್ಯಾಂಟ್ ಲಕ್ಕನ್ನು ನೀಡುತ್ತವೆ. ಪ್ಲೆ„ನ್ ಅಥವಾ ಪ್ರಿಂಟೆಡ್ ಎರಡೂ ಬಗೆಗಳಲ್ಲಿಯೂ ದೊರೆಯುತ್ತವೆ. ಫಾರ್ಮಲ್ ಮತ್ತು ಪಾರ್ಟಿವೇರ್ ಎರಡೂ ಡಿಸೈನುಗಳಲ್ಲಿ ದೊರೆಯಬಲ್ಲವು. ಫಾರ್ಮಲ್ವೇರಾಗಿ ಬಳಸಲು ಬಹಳ ಸೂಕ್ತವೆನಿಸುತ್ತವೆ. ಪ್ರಭಾ ಭಟ್