Advertisement

ಇಂದಿನಿಂದ ವಿವಿಧ ಕೀಟಗಳ ಪ್ರದರ್ಶನ 

11:30 AM Jan 05, 2018 | |

ಬೆಂಗಳೂರು: ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಆವರಣದಲ್ಲಿ ಶುಕ್ರವಾರದಿಂದ ಮೂರು ದಿನಗಳು ಕೀಟಗಳ ವಿಸ್ಮಯ ಪ್ರಪಂಚ ಅನಾವರಣಗೊಳ್ಳಲಿದೆ.  ಜ. 5ರಿಂದ 7ರವರೆಗೆ ಜಿಕೆವಿಕೆಯ ಡಾ.ಬಾಬು ರಾಜೇಂದ್ರ ಪ್ರಸಾದ್‌ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ವಿವಿಧ ಕೀಟಗಳ ಪ್ರದರ್ಶನ ಹಮ್ಮಿಕೊಂಡಿದೆ.

Advertisement

ನಿತ್ಯ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಅತಿ ಅಪರೂಪದ ಕೀಟಗಳು ಮತ್ತು ಅವುಗಳ ಛಾಯಾಚಿತ್ರಗಳನ್ನು ಕಾಣಬಹುದು. ಬೆಂಗಳೂರು ಕೃಷಿ ವಿವಿ ಕೀಟಶಾಸ್ತ್ರ ವಿಭಾಗ ಮತ್ತು ಎಂಟಮೋಲಜಿ ಕ್ಲಬ್‌ ಸಂಯುಕ್ತವಾಗಿ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇದು ಕೀಟ ಲೋಕದೊಳಗೊಂದು ಪಯಣ.

ಈ ಪಯಣದಲ್ಲಿ 50ಕ್ಕೂ ಹೆಚ್ಚು ಕೀಟಗಳ ಛಾಯಾಚಿತ್ರಗಳು, ಪರೋಪಕಾರಿ ಮತ್ತು ಬಹುಪಯೋಗಿ ಕೀಟಗಳು, ಐದು ಸಾವಿರಕ್ಕೂ ಅಧಿಕ ನೈಜ ಕೀಟಗಳ ನಿದರ್ಶನಗಳು, ಕೀಟಗಳ ವೈವಿಧ್ಯತೆ, ರಕ್ಷಣೆ, ವೇಷಧಾರಿ ಕೀಟಗಳು, ಅನುಕರಣಾ ಕೀಟಗಳು ಸೇರಿದಂತೆ ಹತ್ತು ಹಲವು ವಿಸ್ಮಯಕಾರಿ ಅಂಶಗಳನ್ನು ಕಾಣಬಹುದು ಎಂದು ಎಂಟಮೋಲಜಿ ಕ್ಲಬ್‌ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next