Advertisement
ಮೇ ಮತ್ತು ಜೂನ್‌ನಲ್ಲಿ ಸ್ಲೊವೇಕಿಯಾದಲ್ಲಿ ನಡೆದ ವಿಶ್ವಮಟ್ಟದ ಟೂರ್ನಿಯಲ್ಲಿ ಸ್ಪರ್ಧಿಸಿದ್ದ ಸಮರ್ಥ್ ಎರಡು ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ವೈಯಕ್ತಿಕ 131 ಅಂಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಈ ಹಿಂದೆಯೂ 2015ರಲ್ಲಿ ಸ್ಲೊವೇಕಿಯಾದಲ್ಲಿ ನಡೆದ ವಿಶ್ವಮಟ್ಟದ ಅಂಗವಿಕಲರ ಟೂರ್ನಿಯಲ್ಲಿ ಕಂಚಿನ ಪದಕ, ಕಳೆದ ವರ್ಷ ಸರ್ಬಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಅಂಗವಿಕಲರ ಚೆಸ್ ಪಂದ್ಯಾಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಈ ಬಾರಿ ಮತ್ತೆ ಪದಕ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.
ಹುಟ್ಟಿನಿಂದಲೇ ಸೆರೆಬ್ರಲ್ ಪಾಲ್ಸಿ ಕಾಯಿಲೆಗೆ ತುತ್ತಾದ ಸಮರ್ಥ್ ಕೈಗಳಿಂದ ಚೆಸ್ ಕಾಯಿ ನಡೆಸಲು, ಕಾಲುಗಳಿಂದ ಸರಿಯಾಗಿ ಕುಳಿತುಕೊಳ್ಳಲು ಆಗದಿದ್ದರೂ, ಅದೊಂದು ಸಮಸ್ಯೆ ಅಲ್ಲ ಎನ್ನುವಂತೆ ಚದುರಂಗದಾಟದಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಈಗಲೂ ಒಂದು ಹೆಜ್ಜೆ ನಡೆಯಲೂ ಆಗದ ಸಮರ್ಥ್ನನ್ನು ತಂದೆ-ತಾಯಿಯೇ ಎತ್ತಿಕೊಂಡು ಓಡಾಡುವ ಮೂಲಕ ನೆರವಾಗುತ್ತಿದ್ದಾರೆ. ವಿಶ್ವ, ರಾಷ್ಟ್ರ, ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಲವಾರು ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆಲ್ಲುವುದರೊಂದಿಗೆ ಮನಸ್ಸಿ ದ್ದರೆ ಏನೂ ಬೇಕಾದರೂ ಸಾಧಿಸಬಹುದು ಎನ್ನುವುದನ್ನು ನಿರೂಪಿಸಿದ್ದಾರೆ. ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಸ್ಪರ್ಧಿಸಿ ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದ ಹೆಗ್ಗಳಿಕೆ ಸಮರ್ಥ್ ಅವರದು.
Related Articles
Advertisement
ಸಮರ್ಥ್ ಯಾರು?ಜಗದೀಶ್ ರಾವ್ ಮತ್ತು ವಿನುತಾ ದಂಪತಿ ಪುತ್ರನಾಗಿರುವ ಸಮರ್ಥ್ ಹುಟ್ಟಿದ್ದು ಕುಂದಾಪುರ ತಾಲೂಕಿನ ಬಸೂÅರಿನಲ್ಲಿ. ಸದ್ಯ ತಂದೆ ಜಗದೀಶ್ ಹೊನ್ನಾವರದಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಹೀಗಾಗಿ ಅಲ್ಲಿಯೇ ನೆಲೆಸಿರುವ ಸಮರ್ಥ್ ಹೊನ್ನಾವರದ ಎಸ್‌ಡಿಎಂ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ತಾಯಿ ವಿನುತಾ ಕಾಲೇಜು ಉಪನ್ಯಾಸಕಿ. ತಂಗಿ ಸಾನ್ವಿ ರಾವ್ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
2017 ಸ್ಲೊವೇಕಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಟೂರ್ನಿಯ ಜ್ಯೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಸೀನಿಯರ್ ವಿಭಾಗದಲ್ಲಿ ಕಂಚಿನ ಪದಕ 2016 ಸೆರ್ಬಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಚೆಸ್ ಪಂದ್ಯದಲ್ಲಿ ಕಂಚಿನ ಪದಕ 2015ಸ್ಲೊವೇಕಿಯಾದಲ್ಲಿ ನಡೆದ ಟೂರ್ನಿಯಲ್ಲಿ ಕಂಚಿನ ಪದಕ ಪ್ರಶಾಂತ್ ಪಾದೆ