Advertisement

ರಫೇಲ್‌ ಘೋಷಣೆಗೆ ಅನುಮತಿ ಬೇಕಿರಲಿಲ್ಲ

06:00 AM Oct 11, 2018 | |

ನವದೆಹಲಿ: ಬಹುಕೋಟಿ ಮೌಲ್ಯದ ರಫೇಲ್‌ ಯುದ್ಧ ವಿಮಾನ ಖರೀದಿ ಘೋಷಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವ್ಯವಹಾರಗಳಿಗಾಗಿನ ಕೇಂದ್ರ ಸಂಪುಟ ಸಮಿತಿ (ಸಿಸಿಎಸ್‌)ಯಿಂದ ಅನುಮತಿ ಪಡೆದಿರಲಿಲ್ಲ. ಖರೀದಿ ಮಾಡುತ್ತೇವೆ ಎಂದು ಆಸಕ್ತಿ ಪ್ರಕಟಿಸುವ ಸಂದರ್ಭದಲ್ಲಿ ಸಿಸಿಎಸ್‌ ಅನುಮತಿ ಅಗತ್ಯವಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

 “ಸಿಎನ್‌ಎನ್‌-ನ್ಯೂಸ್‌ 18′ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಖರೀದಿ ಒಪ್ಪಂದಕ್ಕೆ ಸಹಿ ಮಾಡುವುದಾದರೆ ಮಾತ್ರ ಸಿಸಿಎಸ್‌ ಅನುಮತಿ ಬೇಕು ಎಂದು ಹೇಳಿದ್ದಾರೆ. 16 ತಿಂಗಳ ಕಾಲ ಮಾತುಕತೆ ನಡೆದ ಬಳಿಕ ಟಿಪ್ಪಣಿ ಸಿದ್ಧಪಡಿಸಲಾಯಿತು. ಅದಕ್ಕೆ ಭದ್ರತಾ ಸಮಿತಿ ಅನುಮೋದನೆ ನೀಡಿತ್ತು. ಬಳಿಕವೇ ಒಪ್ಪಂದಕ್ಕೆ ಸಹಿ ಹಾಕಲಾಯಿತು. 2016ರ ಸೆಪ್ಟೆಂಬರ್‌ನಲ್ಲಿ ನಡೆದದ್ದೂ ಅದೇ ಎಂದು ನಿರ್ಮಲಾ ವಿವರಿಸಿದ್ದಾರೆ. ಈ ಬೆಳವಣಿಗೆ ನಡುವೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ತಡರಾತ್ರಿಯಿಂದ ಫ್ರಾನ್ಸ್‌ ಪ್ರವಾಸ ಆರಂಭಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next