ಮಣಿಪಾಲ: ಆ್ಯಪಲ್ ನ ಹೊಸ ಐ ಫೋನ್ ಸೀರಿಸ್ ಈಗಾಗಲೇ ಬಿಡುಗಡೆಯಾಗಿದ್ದು ಟೆಕ್ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಸರಣಿಯು ಐ ಫೋನ್ 11, ಐ ಫೋನ್ 11 ಪ್ರೊ, ಐ ಫೋನ್ ಪ್ರೋ ಮ್ಯಾಕ್ಸ್ ಗಳನ್ನು ಒಳಗೊಂಡಿದೆ. ಇದರಲ್ಲಿ ಐಫೋನ್ 11 ಪ್ರೊ, ಆ್ಯಪಲ್ ನ ಐಫೋನ್ ಎಕ್ಸ್ಎಸ್ ನ ಮುಂದುವರಿದ ಅವತರಣಿಕೆಯಾಗಿದೆ. ಇವೆರೆಡೂ ಮೇಲ್ನೋಟಕ್ಕೆ ಒಂದೇ ಎನಿಸಿದರೂ ಇದರ ನಡುವೆ ಹಲವು ಸಾಮ್ಯತೆಗಳಿವೆ.
ಆ್ಯಪಲ್ ಸಂಸ್ಥೆಯ ಪ್ರಸಿದ್ದ ಐಫೋನ್ ಎಕ್ಸ್ಎಸ್ ಫೋನಿನ ಅಪ್ ಗ್ರೇಡ್ ವರ್ಷನ್ ಐಫೋನ್ 11 ಪ್ರೋ ಆಗಿದೆ. ಇದರ ಕೆಲವು ಭಿನ್ನತೆಗಳು ಈ ಕೆಳಗಿನಂತಿವೆ.
ಡಿಸ್ ಪ್ಲೇ ಮತ್ತು ಡಿಸೈನ್: ಐಫೋನ್ 11 ಪ್ರೋ ಮತ್ತು ಐಫೋನ್ ಎಕ್ಸ್‌ಎಸ್ ಗಳಲ್ಲಿ ಕೆಲವು ಸೂಕ್ಷ್ಮವಾದ ಮತ್ತು ಪ್ರಮುಖವಾದ ವ್ಯತ್ಯಾಸಗಳಿವೆ. ಐಫೋನ್ 11 ಪ್ರೊದಲ್ಲಿ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ ಪ್ಲೇಯಿದ್ದರೆ, ಐಫೋನ್ ಎಕ್ಸ್ಎಸ್ ನಲ್ಲಿ ಸೂಪರ್ ರೆಟಿನಾ HD ಡಿಸ್ ಪ್ಲೇ ಇದೆ. ಐಫೋನ್ 11 ಪ್ರೊ ಫೋನ್ 5.8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಐಫೋನ್ ಎಕ್ಸ್‌ಎಸ್ ಸಹ 5.8 OLED ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ ಮತ್ತು ಡಿಸ್‌ಪ್ಲೇಯ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವು 1,125×2,436 ಆಗಿದೆ. ಈ ಅಂಶಗಳನ್ನು ಗಮನಿಸಿದರೇ ಐಫೋನ್ 11 ಪ್ರೊ ಡಿಸ್‌ಪ್ಲೇಯಲ್ಲಿ ಸೂಪರ್ ರೇಟಿನಾ XDR ಹೊಸತನ ಕಂಡುಬಂದಿದೆ.
ಐಫೋನ್ 11 ಪ್ರೊ, ಐಫೋನ್ ಎಕ್ಸ್‌ಆರ್ ತರಹದ ಹ್ಯಾಪ್ಟಿಕ್ ಟಚ್ ಡಿಸ್ ಪ್ಲೇಯನ್ನು ಹೊಂದಿದ್ದರೆ, ಐಫೋನ್ ಎಕ್ಸ್‌ಎಸ್ 3ಡಿ ಟಚ್ ಡಿಸ್ ಪ್ಲೇಯೊಂದಿಗೆ ಬರುತ್ತದೆ. ಸರಳವಾಗಿ ಹೇಳುವುದಾದರೆ, ಐಕಾನ್‌ಗಳು ಅಥವಾ ಟಚ್ ಪ್ಯಾಡ್ ಮೇಲೆ ದೀರ್ಘಕಾಲ ಒತ್ತುವ ಶ್ರಮ ತಪ್ಪಿ ವೇಗವಾಗಿ ಕಾರ್ಯನಿರ್ವಹಿಸಲು ಸಹಾಯಕವಾಗುತ್ತದೆ.
ಕ್ಯಾಮರಾ ವೈಶಿಷ್ಟ್ಯ: ಐಫೋನ್ 11 ಪ್ರೊ ಫೋನ್ ನಲ್ಲಿ ಹಿಂಬದಿಯಲ್ಲಿ ಮೂರು ಕ್ಯಾಮರಾಗಳ ಸೆಟ್ಅಪ್ ಆಪ್ಸನ್ ಇದ್ದು 12 ಮೆಗಾಫಿಕ್ಸೆಲ್ ಸೆನ್ಸಾರ್ ಸಾಮಾರ್ಥ್ಯ ಹೊಂದಿದೆ. ಪ್ರಾಥಮಿಕ ಕ್ಯಾಮರಾ ವೈಲ್ಡ್ ಆ್ಯಂಗಲ್, ಸೆಕೆಂಡರಿ ಕ್ಯಾಮಾರ ಅಲ್ಟ್ರಾ ವೈಲ್ಡ್ ಆ್ಯಂಗಲ್ ಮತ್ತು ತೃತೀಯ ಕ್ಯಾಮಾರ ಟೆಲಿಫೋಟೋ ಲೆನ್ಸ್ ಸಾಮಾರ್ಥ್ಯ ಹೊಂದಿದೆ. ಆದರೇ ಐಫೋನ್ ಎಕ್ಸ್ಎಸ್ ನಲ್ಲಿ ಹಿಂಬದಿಯಲ್ಲಿ ಡ್ಯುಯೆಲ್ ಕ್ಯಾಮಾರ ಮಾತ್ರ ಇದ್ದು ಅದು ಕೂಡ 12 ಎಂಪಿ ಸಾಮಾರ್ಥ್ಯದಲ್ಲಿದೆ. ಡ್ಯುಯೆಲ್ ಕ್ಯಾಮಾರ ಪರಿಚಯಿಸಿದ ಕೀರ್ತಿ ಐಫೋನ್ ಎಕ್ಸ್ಎಸ್ ಗೆ ಸಲ್ಲುತ್ತದೆ. ಹೊಸ ಫೋನ್ ಕ್ಯಾಮೆರಾದಲ್ಲಿ ನೈಟ್ ಮೋಡ್ ಕೂಡ ಇದ್ದು ಉತ್ತಮ ಗುಣಮಟ್ಟದಲ್ಲಿ ಫೋಟೋಗಳನ್ನು ತೆಗೆಯಬಹುದು.
ಪ್ರೊಸೆಸರ್ ಬಲ: ಐಫೋನ್ 11 ಪ್ರೊ A13 ಬಯೋನಿಕ್ ಚಿಪ್ ಸೆಟ್ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಪ್ರೊಸೆಸರ್ ಗೆ ಪೂರಕವಾಗಿ ಹೊಸ IOS 13 ಬೆಂಬಲ ನೀಡಲಿದೆ. ಡಾರ್ಕ್ ಮೋಡ್ ಮತ್ತು ಪ್ರೈವಸಿ ಅಯ್ಕೆಗಳು ಹೆಚ್ಚು ಬಲಿಷ್ಟವಾಗಿದೆ. ಹಾಗೆಯೇ ಐಫೋನ್ ಎಕ್ಸ್ ಎಸ್ A12 ಬಯೋನಿಕ್ ಚಿಪ್ ಸೆಟ್ ಪ್ರೊಸೆಸರ್ ಅನ್ನು ಹೊಂದಿದೆ. ಪ್ರೊಸೆಸರ್ ಸಾಮಾರ್ಥ್ಯವನ್ನು ಹೆಚ್ಚು ಅಪ್ ಗ್ರೇಡ್ ಮಾಡಿಕೊಂಡಿದ್ದು, ಐಫೋನ್ 11 ಪ್ರೊಗೆ ಬಲ ನೀಡಲಿದೆ.
ಮೆಮೋರಿ ಸಾಮಾರ್ಥ್ಯ: ಐಫೋನ್ 11 ಪ್ರೊ ಮೂರು ಸ್ಟೋರೆಜ್ ವೇರಿಯಂಟ್ ಮಾದರಿಯನ್ನು ಆಯ್ಕೆ ಹೊಂದಿದೆ. ಅವು 64GB, 128GB ಮತ್ತು 256 GB ಆಂತರಿಕ ಸ್ಟೋರೇಜ್ ಹೊಂದಿದೆ. ಹಾಗೆಯೇ ‘ಐಫೋನ್ ಎಕ್ಸ್‌ಎಸ್’ ಫೋನ್ ಸಹ 64GB, 256GB ಮತ್ತು 512GB ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಆಯ್ಕೆಗಳನ್ನು ಒಳಗೊಂಡಿದೆ. ಆದರೂ ಹೊಸ ಐಫೋನ್ 11 ಪ್ರೋವೇರಿಯಂಟ್‌ಗಳು ಗ್ರಾಹಕರನ್ನು ಮನಸೆಳೆಯುತ್ತದೆ.
ಐಫೋನ್ 11 ಪ್ರೊ ಮತ್ತು ‘ಐಫೋನ್ ಎಕ್ಸ್ಎಸ್ ನಲ್ಲಿ ಕೆಲವು ಸಾಮ್ಯತೆಗಳಿದ್ದರೂ ಇವುಗಳ ಬೆಲೆ ಒಂದೇ ತೆರನಾಗಿದೆ. ಐಫೋನ್ 11 ಪ್ರೋನಲ್ಲಿ ಬ್ಯಾಟರಿ ಬಲ ಹೆಚ್ಚಿದ್ದು ಫಾಸ್ಟ್ ಚಾರ್ಜಿಂಗ್ ವ್ದವಸ್ಥೆಯಿದೆ.