ತೂಕ ಇಳಿಸುವುದು ಎಂದಾಕ್ಷಣ ನೆನಪಾಗುವುದು ಕಟ್ಟುನಿಟ್ಟಾದ ಡಯೆಟ್ ಮತ್ತು ನಿಯಮಿತ ವರ್ಕ್ ಔಟ್. ಆರೋಗ್ಯಕರ, ಸಂತೋಷಕರ ಜೀವನಕ್ಕೆ ಡಯೆಟ್ ಮತ್ತು ವ್ಯಾಯಾಮ ಪ್ರಮುಖ ಅಂಶಗಳು. ಸುಂದರವಾದ ಮೈಕಟ್ಟು ಹೊಂದಲು ನಾವು ಸೋಲಬೇಕಾದ ಆವಶ್ಯಕತೆ ಇಲ್ಲ. ತೂಕ ನಷ್ಟವು ಹಲವು ಅಂಶಗಳಿಂದ ನಿರ್ಧರಿಸಲ್ಪಡುತ್ತವೆ. ಆರೋಗ್ಯಕರ ಡಯೆಟ್ ಮತ್ತು ವ್ಯಾಯಾಮ ಆ ಹಲವುಗಳಲ್ಲಿ ಎರಡು ಅಷ್ಟೇ. ನೆಚ್ಚಿನ ಆಹಾರವನ್ನು ಸೇವಿಸುವಾಗ ತೂಕ ಇಳಿಸಿಕೊಳ್ಳುವುದು ದೂರದ ಮಾತು ಎಂದು ಅಂದುಕೊಂಡಿದ್ದರೇ ಅದು ನಿಜವಲ್ಲ. ಬೇಕಾದುದನ್ನು ತಿನ್ನುತ್ತಲೇ ದೇಹದ ತೂಕವನ್ನು ಕಳೆದುಕೊಳ್ಳಬಹುದು. ನೆಚ್ಚಿನ ಆಹಾರವನ್ನು ಸೇವಿಸುತ್ತಾ ದೇಹದ ತೂಕವನ್ನು ಕಳೆದುಕೊಳ್ಳಲು ಇಲ್ಲಿದೆ 5 ಸಲಹೆಗಳು.
ಅಡುಗೆ ಎಣ್ಣೆ ಬಗ್ಗೆ ಎಚ್ಚರವಿರಲಿ
ಆರೋಗ್ಯಕರ ಎಣ್ಣೆಗಳಲ್ಲಿ ಕೂಡ ಹೆಚ್ಚು ಕ್ಯಾಲೋರಿಗಳಿರುತ್ತವೆ. ಆಹಾರ ತಯಾರಿಸುವ ವೇಳೆ ಎಣ್ಣೆಯನ್ನು ಬೇಕಾಬಿಟ್ಟಿ ಸುರಿದು ನಾವು ತಪ್ಪು ಮಾಡುತ್ತವೆ. ಅಡುಗೆ ಎಣ್ಣೆ ಸೇವನೆಯಿಂದ ಸೇವಿಸುವ ಹೆಚ್ಚುವರಿ ಕ್ಯಾಲೋರಿಗಳನ್ನು ತಪ್ಪಿಸಲು ಉತ್ತಮ ವಿಧಾನವೆಂದರೆ ಅಡುಗೆ ಎಣ್ಣೆ ಬಳಕೆಗೆ ಮಿತಿ ಹಾಕುವುದು. ತೂಕ ಇಳಿಸಿಕೊಳ್ಳ ಬಯಸುವವರು ಅದಷ್ಟು ಕಡಿಮೆ ಎಣ್ಣೆ ಬಳಸುವುದು ಉತ್ತಮ.
ಸರಿಯಾದ ಸೇವನೆ ಇರಲಿ
ಸೇವಿಸುವ ಆಹಾರಗಳ ಗಾತ್ರವನ್ನು ನಿರ್ವಹಿಸುವ ಮೂಲಕ ದೇಹದ ತೂಕವನ್ನು ಕಳೆದು ಕೊಳ್ಳಬಹುದು. ಊಟದ ಆಹಾರ ಸೇವನೆಯ ಗಾತ್ರದಲ್ಲಿ ಸ್ನಾಕ್ಸ್ ತಿಂಡಿಗಳನ್ನು ಸೇವಿಸುವುದು ಉತ್ತಮವಲ್ಲ. ಸಣ್ಣ ಕಾಫಿ ಕಪ್‌ಗ್ಳಲ್ಲಿ ಪಾಪ್‌ಕಾರ್ನ್, ಚಿಕ್ಕ ಗ್ಲಾಸ್‌ಗಳಲ್ಲಿ ನಟ್ಸ್ ಇಂತಹ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದರಿಂದ ಪ್ರೋಟಿನ್ ಅಂಶಗಳನ್ನು ನಿಯಂತ್ರಿಸಬಹುದಾಗಿದೆ. ಇದರಿಂದ ಊಟವನ್ನು ಕಳೆದುಕೊಳ್ಳುವ ಪ್ರಮೇಯ ಅಥವಾ ಹೆಚ್ಚಿನದ್ದನ್ನು ಸೇವಿಸಿ ದೇಹದ ತೂಕ ಹೆಚ್ಚಾಗುವಷ್ಟು ಸೇವಿಸುವ ತೊಂದರೆ ಬರುವುದಿಲ್ಲ.
ಇದೇನಿದು ಅಂತ ಅಚ್ಚರಿ ಪಡಬೇಡಿ. ತಟ್ಟೆ ಮತ್ತು ಗ್ಲಾಸ್ ಬದಲಾಯಿಸಿದರೇ ತೂಕ ಕಳೆದುಕೊಳ್ಳಬಹುದೇ? ಎಂಬ ಪ್ರಶ್ನೆ ಉದ್ಬವಿಸಿದೆಯೇ ಇದಕ್ಕಿಲ್ಲಿದೆ ಉತ್ತರ. ಆಹಾರದ ನಿಯಂತ್ರಣಕ್ಕೆ ಇದು ಕೂಡ ಒಂದು ದಾರಿ. ಭೋಜನದ ತಟ್ಟೆಯನ್ನು ಬದಲಾಯಿಸಿ ಊಟಕ್ಕೆ ಸಣ್ಣ ಸಲಾಡ್ ತಟ್ಟೆಗಳನ್ನು ಬಳಿಸಿ. ಕಡಿಮೆ ಕ್ಯಾಲೋರಿ, ತೂಕ ನಷ್ಟ ವೇಗವರ್ಧಕ ಸಲಾಡ್‌ಗಳನ್ನು ಸೇವಿಸಲು ದೊಡ್ಡ ತಟ್ಟೆಯನ್ನು ಬಳಸಿ. ದೊಡ್ಡ ಗ್ಲಾಸಿನಲ್ಲಿ ನೀರು ಕುಡಿಯಬೇಕು. ಸಣ್ಣ ಕಪ್‌ನಲ್ಲಿ ಸಕ್ಕರೆ ಪಾನೀಯಗಳನ್ನು ಸೇವಿಸಬೇಕು.
ಸಮಯ ಬದಲಾಯಿಸಿ
ಸೂರ್ಯಾಸ್ತದ ಮುನ್ನ ಮತ್ತು ಸೂರ್ಯೋದಯದ ಅನಂತರ ಆಹಾರ ಸೇವಿಸುವುದು ಒಳ್ಳೆಯದು. ಆಹಾರವನ್ನು ಸಂಸ್ಕರಿಸಲು, ಜೀರ್ಣಿಸಿಕೊಳ್ಳಲು ಮತ್ತು ನಿರ್ವಿಷೆಯಲ್ಲಿ ಸಹಾಯ ಮಾಡಲು ಇದು ದೇಹಕ್ಕೆ ಸಾಕಷ್ಟು ಸಮಯವನ್ನು ಒದಗಿಸುತ್ತದೆ. ಬಹುಬೇಗನೇ ರಾತ್ರಿ ಊಟ ಮತ್ತು ತಡವಾದ ಉಪಾಹಾರ ಎರಡೂ ಕೂಡ ಉತ್ತಮವಲ್ಲ.
ಹೈಡ್ರೇಶನ್ ದೇಹದ ತೂಕ ಇಳಿಸಿಕೊಳ್ಳಲು ಮುಖ್ಯವಾಗಿದೆ. ಸರಿಯಾರಿ ಆಹಾರ ಸೇವನೆ ಮತ್ತು ವ್ಯಾಯಾಮಾ ಮಾಡುತ್ತಿದ್ದು ದೇಹವನ್ನು ಹ್ರೈಡ್ರೇಟ್ ಆಗಿರುವಂತೆ ನೋಡಿಕೊಳ್ಳದಿದ್ದರೇ ಮೆಟಾಬಾಲಿಸಮ್ ಮತ್ತು ಜೀರ್ಣಕ್ರಿಯೆಯಂತಹ ದೇಹದ ಕಾರ್ಯಗಳು ಹಾಳಾಗಬಹುದು ಮತ್ತು ದೇಹದ ತೂಕ ಇಳಿಕೆ ನಿಧಾನವಾಗಬಹುದು. ತೂಕ ಇಳಿಕೆಯ ವೇಗ ಹೆಚ್ಚಿಸಿಕೊಳ್ಳಲು ಬಹಳಷ್ಟು ನೀರು ಮತ್ತು ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಒಳ್ಳೆಯದು.
ಸೇವಿಸುವ ಆಹಾರಗಳ ಗಾತ್ರವನ್ನು ನಿರ್ವಹಿಸುವ ಮೂಲಕ ದೇಹದ ತೂಕವನ್ನು ಕಳೆದು ಕೊಳ್ಳಬಹುದು. ಊಟದ ಆಹಾರ ಸೇವನೆಯ ಗಾತ್ರದಲ್ಲಿ ಸ್ನಾಕ್ಸ್ ತಿಂಡಿಗಳನ್ನು ಸೇವಿಸುವುದು ಉತ್ತಮವಲ್ಲ. ಸಣ್ಣ ಕಾಫಿ ಕಪ್‌ಗ್ಳಲ್ಲಿ ಪಾಪ್‌ಕಾರ್ನ್, ಚಿಕ್ಕ ಗ್ಲಾಸ್‌ಗಳಲ್ಲಿ ನಟ್ಸ್ ಇಂತಹ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಇದರಿಂದ ಪ್ರೋಟಿನ್ ಅಂಶಗಳನ್ನು ನಿಯಂತ್ರಿಸಬಹುದಾಗಿದೆ. ಇದರಿಂದ ಊಟವನ್ನು ಕಳೆದುಕೊಳ್ಳುವ ಪ್ರಮೇಯ ಅಥವಾ ಹೆಚ್ಚಿನದ್ದನ್ನು ಸೇವಿಸಿ ದೇಹದ ತೂಕ ಹೆಚ್ಚಾಗುವಷ್ಟು ಸೇವಿಸುವ ತೊಂದರೆ ಬರುವುದಿಲ್ಲ.
Advertisement
ಪ್ಲೇಟ್ ಮತ್ತು ಗ್ಲಾಸ್ ಬದಲಾಯಿಸಿ
Related Articles
Advertisement
ಹ್ರೈಡ್ರೇಟ್!ಹೈಡ್ರೇಶನ್ ದೇಹದ ತೂಕ ಇಳಿಸಿಕೊಳ್ಳಲು ಮುಖ್ಯವಾಗಿದೆ. ಸರಿಯಾರಿ ಆಹಾರ ಸೇವನೆ ಮತ್ತು ವ್ಯಾಯಾಮಾ ಮಾಡುತ್ತಿದ್ದು ದೇಹವನ್ನು ಹ್ರೈಡ್ರೇಟ್ ಆಗಿರುವಂತೆ ನೋಡಿಕೊಳ್ಳದಿದ್ದರೇ ಮೆಟಾಬಾಲಿಸಮ್ ಮತ್ತು ಜೀರ್ಣಕ್ರಿಯೆಯಂತಹ ದೇಹದ ಕಾರ್ಯಗಳು ಹಾಳಾಗಬಹುದು ಮತ್ತು ದೇಹದ ತೂಕ ಇಳಿಕೆ ನಿಧಾನವಾಗಬಹುದು. ತೂಕ ಇಳಿಕೆಯ ವೇಗ ಹೆಚ್ಚಿಸಿಕೊಳ್ಳಲು ಬಹಳಷ್ಟು ನೀರು ಮತ್ತು ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಒಳ್ಳೆಯದು.