Advertisement

ಪ್ರಕೃತಿದತ್ತ ಆಹಾರದಲ್ಲಿ  ರೋಗ ನಿರೋಧಕ ಶಕ್ತಿ ಅಧಿಕ: ಶಾಸಕಿ

06:30 AM Aug 14, 2017 | Harsha Rao |

ಬಡಗನ್ನೂರು:ಆಟಿಯಲ್ಲಿ ಹಿರಿಯರು ಆರೋಗ್ಯದ ಸಮತೋಲನ ಕಾಪಾಡಲು ಪ್ರಕೃತಿದತ್ತವಾದ ಆಹಾರ ಪದಾರ್ಥಗಳ ಸೇವನೆ ಮಾಡುತ್ತಿದ್ದರು. ಅವುಗಳಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಆರೋಗ್ಯವಂತರಾಗಿದ್ದರು ಎಂದು ಶಾಸಕಿ ಶಕುಂತಳಾ ಟಿ.ಶೆಟ್ಟಿ ತಿಳಿಸಿದರು. 

Advertisement

ಶನಿವಾರ ದ.ಕ.ಜಿ.ಪಂ.ಸ.ಹಿ.ಉ.ಪ್ರಾ.ಶಾಲಾ ಸಭಾಭವನದಲ್ಲಿ ನಡೆದ ಆಟಿ ಡೊಂಜಿ ದಿನ ಕಾರ್ಯಕ್ರಮವನ್ನು ತೆಂಗಿನ ಹಿಂಗಾರ ಅರಳಿಸುವ ಮೂಲಕ  ಉದ್ಘಾಟಿಸಿ ಅವರು ಮಾತನಾಡಿ, ಆಟಿ ತಿಂಗಳು ಅಂದರೆ ಕಷ್ಟವನ್ನು ಸವಾಳಾಗಿ ಸ್ವೀಕರಿಸಿ ಗೆದ್ದ ಸಮಯ ಎಂದರು. 

ಈ ತಿಂಗಳಲ್ಲಿ  ಕಾಲ ಕಳೆಯಲು ಚೆನ್ನೆ ಮಣೆ ಆಟ ಹಾಡುತ್ತಿದ್ದರು. ಆಟಿ ಈ ಸಂದರ್ಭ ತಮ್ಮ ಕುಟುಂಬದ ಸದಸ್ಯರನ್ನು ಒಟ್ಟು ಗೊಡಿಸುವ ನೆಪದಲ್ಲಿ  ಹಿರಿಯರಿಗೆ ಅಗೆಲು ಹಾಕುವ ಪದ್ಧತಿ ಆಚರಣೆಗೆ ಬಂತು. ರೂಢಿಯ ಮೂಲಕ ಬಡತನದಲ್ಲೂ ಸಾಮ ರಸ್ಯದ ಸಂಕೇತ ಹಂಚುತ್ತಿದ್ದರು ಎಂದರು.

ದ.ಕ. ಜಿ.ಪಂ. ಉ.ಹಿ.ಪ್ರಾ. ಶಾಲೆ ಬಡಗನ್ನೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವುಗಳ ಆಶ್ರಯ ದಲ್ಲಿ  ಕೋಟಿ-ಚೆನ್ನಯ ಸಾಂಸ್ಕೃತಿಕ ಬಂಧುತ್ವ ವೇದಿಕೆ ಪಡುಮಲೆ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಬಡಗನ್ನೂರು, ಪಡುವನ್ನೂರು, ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬಡಗನ್ನೂರು  ಎ ಒಕ್ಕೂಟ ಹಾಗೂ ಕೋಟಿ- ಚೆನ್ನಯ ಯುವಕ ಮಂಡಲ ಪಡುಮಲೆ ಇವುಗಳ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಮತೋಲನಕ್ಕೆ  ಸಹಕಾರಿ
ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಕ್ಷೇತ್ರ ಮಠಂತಬೆಟ್ಟು ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ತುಳು ಆಕಾಡೆಮಿ ಸದಸ್ಯರು ಆದ ನಿರಂಜನ್‌ ರೈ ಮಠಂತಬೆಟ್ಟು ಮಾತ ನಾಡಿ, ಆಟಿ ತಿಂಗಳಲ್ಲಿ ಸೂರ್ಯ ಹತ್ತಿರ ಬರುವ ಸಮಯ ಇದರಿಂದ ಉಷ್ಣತೆ ಹೆಚ್ಚಾಗಿರುವುದರಿಂದ  ಪ್ರಕೃತಿಯೊಂದಿಗೆ ಒಗ್ಗುಡಲು ಹಿರಿಯರು ಸೊಪ್ಪು ತರಕಾರಿ ಗಳನ್ನು ಸೇವಿಸುತ್ತಿದ್ದರು. ಇದರಿಂದ ಅವರು ದೇಹದ ಸಮತೋಲನ ಕಾಪಾಡುತ್ತಿದ್ದರು ಎಂದರು. ಮಾಜಿ ಮಂಡಲ ಉಪಪ್ರಧಾನ ಬಾಲಕೃಷ್ಣ ರೈ ಕುದಾRಡಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸಂಜೀವ ರೈ ಕೆ.ಪಿ., ಆಟಿ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು.

Advertisement

ಈ ವೇಳೆ ಹಳೆಯ ವಸ್ತುಗಳು, ನಾಣ್ಯ,  ನೋಟುಗಳ ಪ್ರದರ್ಶನ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮಕ್ಕಳ ಹೆತ್ತವರು ತಯಾರಿಸಿ ತಂದ ಸುಮಾರು 40 ಬಗೆಯ ಖಾದ್ಯಗಳ ಸವಿ ಯೋಟ ಮಾಡಲಾಯಿತು. ಮಾಜಿ ತಾ.ಪಂ. ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ಹರೀಣಾಕ್ಷಿ ಎ. ವಂದಿಸಿದರು, ಟಿ.ಜಿ.ಟಿ. ಶಿಕ್ಷಕ ಜನಾರ್ದನ ಡಿ. ನಿರೂಪಿಸಿದರು. ಅಧ್ಯಾಪಕ ವೃಂದದವರು ಸಹಕಾರಿಸಿದರು. 

ಉಮಾನಾಥ ಶೆಟ್ಟಿ ಪೆರ್ನೆ, ಕೃಷ್ಣ ರೈ ಕುದಾRಡಿ, ತುಳು ಆಕಾಡೆಮಿ ಸದಸ್ಯೆ ವಿದ್ಯಾಶ್ರೀ ಸೇನರಮಜಲು, ಗ್ರಾ.ಪಂ.ಸದಸ್ಯ ರಾದ ಗುರುಪ್ರಸಾದ್‌ ರೈ, ವಿಜಯಲಕ್ಷ್ಮೀ ಮೇಗಿನ ಮನೆ, ಗೋಪಾಲಕೃಷ್ಣ ಸುಳ್ಯಪದವು ಶಾಲಾ ಎಸ್‌.ಡಿ.ಎಂ.ಸಿ. ಅಧ್ಯಕ್ಷ ತ್ಯಾಂಪಣ್ಣ ಸಿ.ಎಚ್‌., ಕೊಯಿಲ ಬಡಗನ್ನೂರು ಶಾಲಾ ಮುಖ್ಯ ಶಿಕ್ಷಕ ಉದಯ ಕುಮಾರ್‌ ರಾವ್‌ ಶರವು, ದೇವಿಪ್ರಸಾದ್‌ ಕೆ.ಸಿ. ಶ್ರೀ ಕ್ಷೇ.ಧ.ಗ್ರಾ.ಯೋ. ಬಡಗನ್ನೂರು ಒಕ್ಕೂಟದ ಸೇವಾ ಪ್ರತಿನಿಧಿ ಜಯಲಕ್ಷ್ಮೀ  ಪಟ್ಟೆ, ಜಯರಾಜ ಅಣಿಲೆ, ಮಹಾಲಿಂಗ ಪಾಟಾಳಿ, ಸೀತ ರಾಮ ರೈ ಪಡುಮಲೆ ಶಾಲಾ ಮುಖ್ಯ ಶಿಕ್ಷಕ ದೇವಿಪ್ರಸಾದ್‌ ಕೆ.ಸಿ., ಬೆಟ್ಟಂಪಾಡಿ ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು   ಮತ್ತಿತರರು ಉಪಸ್ಥಿತರಿದ್ದರು.  

ಸಂಸ್ಕೃತಿಯ ಅರಿವು ಮೂಡಿಸಿ
ನೆಟ್ಟಣಿಗೆ ಮುಟ್ನೂರು ಕ್ಷೇತ್ರದ ಜಿ.ಪಂ. ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕೃತಿ ಆಚಾರ, ವಿಚಾರಗಳ ಬಗ್ಗೆ ಅರಿವು ಮೂಡಿಸಿದಾಗ ಅದು ಪೀಳಿಗೆಯಿಂದ ಪೀಳಿಗೆಗೆ ಉಳಿಸಿ ಬೆಳೆಸಲು ಸಾಧ್ಯ ಎಂದು ಹೇಳಿ ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next