ಹೈಪೋಥೈರಾಯ್ಡಿಸಿಮ್ ಅಥವಾ ನಿಷ್ಕ್ರಿಯ ಥೈರಾಯ್ಡ ನ ಸಮಸ್ಯೆ ಹೊಂದಿರುವವರಲ್ಲಿ ಕಂಡುಬರುವ ಸಾಮಾನ್ಯ ಲಕ್ಷಣ ತೂಕ ಹೆಚ್ಚಾಗುವಿಕೆ. ಥೈರಾಯ್ಡ ಹಾರ್ಮೋನುಗಳ ಮಟ್ಟ ಕುಂಠಿತವಾಗುವುದರಿಂದ ಕ್ಯಾಲೋರಿ ಕಡಿಮೆಯಾಗದೇ ತೂಕ ಹೆಚ್ಚಾಗುತ್ತ ಹೋಗುತ್ತದೆ. ಈ ಥೈರಾಯ್ಡ ಸಮಸ್ಯೆಯೂ ದೇಹದಲ್ಲಿ ಕೊಬ್ಬಿ ಉತ್ಪತ್ತಿಗೆ ಕಾರಣವಾಗುತ್ತದೆ.
ಥೈರಾಯ್ಡ ರೋಗಿಗಳಿಗೆ ತೂಕ ಇಳಿಸಿಕೊಳ್ಳುವುದು ಭಾರೀ ಕಷ್ಟದ ಕೆಲಸ. ಆದರೆ ಇದು ಅಸಾಧ್ಯವೇನಲ್ಲ. ಸರಿಯಾದ ಆಹಾರ ಮತ್ತು ವ್ಯಾಯಾಮ ಅನುಸರಿಸುವುದರಿಂದ ತೂಕ ಇಳಿಸಿಕೊಳ್ಳಬಹುದು. ಥೈರಾಯ್ಡ ರೋಗಿಗಳು ಅನುಸರಿಸಬೇಕಾದ ಮತ್ತು ಅನುಸರಿಬಾರದ ಅಂಶಗಳು ಇಲ್ಲಿವೆ.
ಪಾಲಿಸಬೇಕಾದ ಅಂಶಗಳು ಅಯೋಡಿನ್, ಸಲೆನಿಯಮ್ ಉಳ್ಳ ಆಹಾರ: ಸಮತೋಲಿತ ಡಯೆಟ್‌ಅನುರಿಸು ವುದರೊಂದಿಗೆ ಹೈಪೋ ಥೈರಾಯ್ಡಿಸಿಮ್‌ರೋಗಿಗಳಿಗೆ ಬೇಕಾಗಿರುವುದು ಎರಡು ಪೋಷಕಾಂಶಗಳೆಂದರೆ ಅಯೋಡಿನ್, ಸಲೆನಿಯಮ್. ಸೀಫುಡ್, ಬ್ರೆಜಿಲ್ ನಟ್ಸ್, ಮೊಟ್ಟೆ, ಟ್ಯೂನ, ಸಾಲ್ಮನ್ ಮೀನು, ಸೂರ್ಯಕಾಂತಿ ಬೀಜಗಳು ಅಯೋಡಿನ್ ಮತ್ತು ಸೆಲೆನಿಯಮ್‌ಗಳ ನೈಸರ್ಗಿಕ ಮೂಲಗಳಾಗಿವೆ.
ಚಯಾಪಚಯಕ್ಕೆ ಪೂರಕವಾದ ವ್ಯಾಯಾಮ: ಅಂಡರ್‌ಆಕ್ಟಿವ್ ಥೈರಾಯ್ಡ ಚಯಾಪಚಯ ಕ್ರಿಯೆಯನ್ನು ಕಡಿಮೆಗೊಳಿಸುತ್ತದೆ. ತೂಕ ಇಳಿಸಿಕೊಳ್ಳಲು ಚಯಾಪಚಯ ಕ್ರಿಯೆ ಹೆಚ್ಚಿಸಿಕೊಳ್ಳುವುದು ಅಗತ್ಯ. ತೂಕ ಇಳಿಸಿಕೊಳ್ಳುವುದು ಗುರಿಯಾಗಿದ್ದರೇ, ನಿರೀಕ್ಷಿಸಿದಕ್ಕಿಂತಲೂ ಹೆಚ್ಚಿನ ವ್ಯಾಯಾಮ ಅನುಸರಿಸಬೇಕು. ಪ್ರತಿದಿನ ಸಾಮಾನ್ಯ ವ್ಯಕ್ತಿಗಿಂತ ಒಂದು ಗಂಟೆ ಹೆಚ್ಚು ವ್ಯಾಯಾಮ ಮಾಡುವ ಅಗತ್ಯವಿದೆ.
ಇವುಗಳನ್ನು ಅನುಸರಿಸದಿರಿ
ಹೆಚ್ಚು ಗ್ಲೆ„ಸೆಮಿಕ್ ಸೂಚ್ಯಂಕವಿರುವ ಆಹಾರ ಬೇಡ: ಜೋಳ, ಬಿಳಿ ಬ್ರೆಡ್, ಸಂಸ್ಕರಿಸಿದ ಹಿಟ್ಟುಗಳು, ಮಫಿನ್ಸ್, ಕೇಕ್ ಮುಂತಾದ ಹೆಚ್ಚಿನ ಗ್ಲೆ„ಸೆಮಿಕ್ ಸೂಚ್ಯಂಕಗಳಿರುವ ಆಹಾರಗಳಿಗೆ ಕಡಿವಾಣ ಹಾಕಿ. ಇವುಗಳು ದೇಹದಲ್ಲಿ ಗ್ಲುಕೋಸ್ ಅಂಶ ಹೆಚ್ಚಿಸಿ, ಕೊಬ್ಟಾಗಿ ಪರಿವರ್ತನೆಯಾಗುತ್ತದೆ.
ಗೋಟ್ರೋಜನ್ ಸೇವನೆಗೆ ಕತ್ತರಿ ಬೇಡ: ಥೈರಾಯ್ಡ ಗ್ರಂಥಿ ಮತ್ತು ಬ್ಲಾಕ್ ಕಿಣ್ವಗಳ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುವ ಅಂಶವೇ ಗೋಟ್ರೋಜನ್. ಇದು ಥೈರಾಯ್ಡ ಗ್ರಂಥಿಗೆ ಹೆಚ್ಚು ಜೀವಕೋಶಗಳನ್ನು ಉತ್ಪಾದಿಸಲು ಒತ್ತಾಯಿಸುತ್ತದೆ. ಆರೋಗ್ಯಕ್ಕೆ ಪೂರಕವಾದ ಗೋಟ್ರೋಜನ್ ಆಹಾರಗಳನ್ನು ತ್ಯಜಿಸಬೇಡಿ. ಈ ಆಹಾರಗಳು ಹೈಡ್ರೋಜನ್ ಭರಿತವಾಗಿರುವುದಲ್ಲದೆ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದೆ.
ರಮ್ಯಾ. ಎಂ