ಹೊಸದಿಲ್ಲಿ : ಡೀಸೆಲ್ ದರ ಇಂದು ಲೀಟರ್ ಗೆ ದಾಖಲೆಯ 69.46 ರೂ. ತಲುಪಿದೆ. ಪೆಟ್ರೋಲ್ ದರ ಲೀಟರ್‌ಗೆ 78 ರೂ.ಗೆ ಸನ್ನಿಹಿತವಾಗಿದೆ. ಡಾಲರ್ ಎದುರು ರೂಪಾಯಿ ಕುಸಿತವೇ ಈ ದರ ಏರಿಕೆಗೆ ಕಾರಣವಾಗಿದೆ.
ಡೀಸೆಲ್ ದರವನ್ನು ಇಂದು ಲೀಟರ್‌ಗೆ 14 ಪೈಸೆಯಷ್ಟು ಹೆಚ್ಚಿಸಲಾಗಿದೆಯಾದರೆ ಪೆಟ್ರೋಲ್ ದರವನ್ನು 13 ಪೈಸೆಯಷ್ಟು ಏರಿಸಲಾಗಿದೆ ಎಂದು ಸರಕಾರಿ ಒಡೆತನದ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಗಳ ದರ ಪ್ರಕಟನೆ ತಿಳಿಸಿದೆ.
ಇದರ ಪರಿಣಾಮವಾಗಿ ದಿಲ್ಲಿಯಲ್ಲಿ ಡೀಸೆಲ್ ಲೀಟರ್‌ದರ 69.46 ರೂ., ಮುಂಬಯಿಯಲ್ಲಿ 73.74 ರೂ. ಆಗಿದೆ. ದೇಶದ ಎಲ್ಲ ಮಟ್ರೋಗಳ ಪೈಕಿ ಇಂಧನ ದರಗಳು ದಿಲ್ಲಿಯಲ್ಲಿ ಅಗ್ಗ ಇರುವುದು ಗಮನಾರ್ಹವಾಗಿದೆ. ಕಾರಣ ದಿಲ್ಲಿಯಲ್ಲಿ ಮಾರಾಟ ತೆರಿಗೆ ಮತ್ತು ವ್ಯಾಟ್ ಇತರೆಡೆಗಿಂತ ಕಡಿಮೆ ಇದೆ.
ಕಳೆದ ಮೇ 29ರಂದು ಡೀಸೆಲ್‌ದರ ದಿಲ್ಲಿಯಲ್ಲಿ ಲೀಟರ್‌ಗೆ 69.31 ರೂ.ಗೆ ಏರಿದ್ದಾಗ ಅದುವೇ ಗರಿಷ್ಠ ಮಟ್ಟವಾಗಿತ್ತು.
ದಿಲ್ಲಿಯಲ್ಲಿಂದು ಏರಿರುವ ಪೆಟ್ರೋಲ್ ದರ ಲೀಟರ್‌ಗೆ 77.91 ರೂ. ಮತ್ತು ಮುಂಬಯಿಯಲ್ಲಿ ಇದು ಲೀಟರ್‌ಗೆ 85.33 ಆಗಿದೆ.
ಕಳೆದ ಆಗಸ್ಟ್ 16ರಿಂದಲೂ ಡಾಲರ್ ಎದುರು ರೂಪಾಯಿ ದರ ಒಂದೇ ಸಮನೆ ಕುಗುತ್ತಿರುವ ಪರಿಣಾಮವಾಗಿ ಇಂಧನ ಆಮದು ವೆಚ್ಚ ಏರುತ್ತಿದ್ದು ಅದರ ಪ್ರಕಾರ ಪೆಟ್ರೋಲ್, ಡೀಸೆಲ್‌ದರಗಳು ಕೂಡ ಏರುತ್ತಿವೆ.