Advertisement

N H -73ರಲ್ಲಿ ಡೀಸೆಲ್‌ ಸೋರಿಕೆ: ಹಲವು ದ್ವಿಚಕ್ರ ವಾಹನ ಪಲ್ಟಿ, ಗಾಯ

12:07 AM Aug 10, 2023 | Team Udayavani |

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ-73ರಲ್ಲಿ ಮುಂಡಾಜೆಯ ಕೆರೆ ಶ್ರೀ ಪರಶುರಾಮ ದೇವಸ್ಥಾನದ ಸಮೀಪದ ತಿರುವು ರಸ್ತೆಯಲ್ಲಿ ವಾಹನದಿಂದ ಡಿಸೇಲ್‌ ಸೋರಿಕೆಯಾದ ಪರಿಣಾಮ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದ ಘಟನೆ ಆ. 9ರಂದು ಸಂಭವಿಸಿದೆ.

Advertisement

ಡೀಸೆಲ್‌ ಸಾಗಾಟದ ಟ್ಯಾಂಕರ್‌ನಿಂದಲೋ ಅಥವಾ ಇನ್ನಾವುದೋ ವಾಹನದಿಂದಲೋ ತಿರುವು ರಸ್ತೆಯಲ್ಲಿ ಸುಮಾರು 100 ಮೀ. ದೂರದ ವರೆಗೆ ಸೋರಿಕೆಯಾಗಿದೆ. ಜತೆಗೆ ಮಳೆಯೂ ಸುರಿದ ಪರಿಣಾಮ ಸವಾರರಿಗೆ ಅರಿವಿಗೆ ಬಾರದೆ ದ್ವಿಚಕ್ರ ವಾಹನ ಸವಾರರು ಸ್ಕಿಡ್‌ ಆಗಿ ಉರುಳಿ ಬಿದ್ದಿದ್ದಾರೆ. ತ್ರಿಚಕ್ರ, ಜತೆಗೆ ಇತರ ವಾಹನ ಸವಾರರು ಬ್ರೇಕ್‌ ಹಿಡಿತಕ್ಕೆ ಸಿಗದೆ ಅಪಘಾತ ಸಂಭವಿಸುವ ಸಾಧ್ಯತೆ ಎದುರಾಗಿತ್ತು.

ಸ್ಥಳಕ್ಕಾಗಮಿಸಿದ ಗ್ರಾ.ಪಂ. ಸದಸ್ಯರಾದ ಜಗದೀಶ್‌ ನಾಯ್ಕ, ಗಣೇಶ ಬಂಗೇರ, ವಿಶ್ವನಾಥ ಶೆಟ್ಟಿ, ಸ್ಥಳೀಯರಾದ ಸಚಿನ್‌ ಭಿಡೆ, ರಾಘವೇಂದ್ರ ಭಟ್‌, ವರ್ಷಾ ಮರಾಠೆ ಮತ್ತಿತರರು ಡಿಸೇಲ್‌ ಚೆಲ್ಲಿದ್ದ ಜಾಗದಲ್ಲಿ ಸುಮಾರು ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಡೀಸೆಲ್‌ ಚೆಲ್ಲಿದ್ದ ಪ್ರದೇಶದಲ್ಲಿ ಅಡಿಕೆ ಸಿಪ್ಪೆ, ಮಣ್ಣು ಇತ್ಯಾದಿ ಸುರಿದು ಹೆಚ್ಚಿನ ಅಪಾಯ ಉಂಟಾಗದಂತೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next