Advertisement
ಗಮನ ಸೆಳೆಯುವ ಸೂಚನೆ ವೇಳೆ ಮಾತನಾಡಿದ ಅವರು, ಮೀನುಗಾ ರರ ರಕ್ಷಣೆಗಾಗಿ ಪ್ರತ್ಯೇಕ ಸಮುದ್ರ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು. 3ನೇ ಮೀನುಗಾರಿಕ ಜಟ್ಟಿ ವಿಸ್ತರಣೆಗಾಗಿ 49 ಕೋ. ರೂ. ಕಾಮಗಾರಿ ಕೈಗೊಳ್ಳಲಾಗಿತ್ತು. ಅದೀಗ ಹಸಿರು ನ್ಯಾಯಾಧಿಕರಣದ ಮುಂದೆ ಇದ್ದು, ಸರಕಾರ ಮಧ್ಯಪ್ರವೇಶಿಸಿ ಕಾನೂನಾತ್ಮಕವಾಗಿ ಇತ್ಯರ್ಥಪಡಿಸ ಬೇಕು ಎಂದು ಆಗ್ರಹಿಸಿದರು.
2016-17ರಲ್ಲಿ ಸಾಗರಮಾಲಾ ಯೋಜನೆಯಡಿ 1,034 ಕೋಟಿ ರೂ.ಗಳ 26 ಕಾಮಗಾರಿಗಳನ್ನು ಕೈಗೊಂಡಿದ್ದರೂ, 1 ಕಾಮಗಾರಿ ಮಾತ್ರ ಶುರುವಾಗಿದೆ. ಸಿಆರ್‌ಝಡ್ ಕಾರಣ ನೀಡಿ ಎಲ್ಲ ಕಾಮಗಾರಿಗಳು ಹಾಗೆಯೇ ಉಳಿದಿವೆ. ಶೀಘ್ರದಲ್ಲೇ ಈ ಬಗ್ಗೆ ಕ್ರಮ ವಹಿಸುತ್ತೇವೆ. ಇನ್ನು ಕಡಲ್ಕೊರೆತ ತಡೆ ಕಾಮಗಾರಿಯ 55 ಕೋಟಿ ರೂ. ಬಿಡುಗಡೆ ಮಾಡಿಲ್ಲ ಎನ್ನುತ್ತೀರಿ. ಈಗಾಗಲೇ 20 ಕೋಟಿ ರೂ. ಇಟ್ಟಿದ್ದೇವೆ. ಅನುದಾನದ ಲಭ್ಯತೆ ಆಧರಿಸಿ ಉಳಿದ ಹಣ ಬಿಡುಗಡೆ ಮಾಡುತ್ತೇವೆ ಎಂದರು.
Related Articles
ಬಿಜೆಪಿಯ ಸುನಿಲ್‌ಕುಮಾರ್ ಮಧ್ಯಪ್ರವೇಶಿಸಿ, ನಿಮ್ಮ ಅನುದಾನಕ್ಕೆ ನಾವು ಕಾಯಬಹುದು, ಕಡಲ್ಕೊರೆತ ಕಾಯುವುದಿಲ್ಲ ಎನ್ನುತ್ತಿದ್ದಂತೆ, ಸ್ಪೀಕರ್ ಖಾದರ್ ಮಧ್ಯಪ್ರವೇಶಿಸಿ, ಕಡಲ್ಕೊರೆತ ತಡೆ ಸಂಬಂಧ ಸಿಎಂ ಜತೆಗೆ ಶಾಸಕರ ಸಭೆ ಆಯೋಜಿಸಿ ಎಂದು ಸೂಚಿಸಿದರು.
Advertisement