Advertisement

ಫುಟ್ಬಾಲ್ ದಂತಕಥೆ ಡಿಗೋ ಮರಡೋನ ಇನ್ನಿಲ್ಲ

11:40 PM Nov 25, 2020 | mahesh |

ಅರ್ಜೆಂಟೀನಾ: ಅರ್ಜೆಂಟೀನಾದ ಮಾಜಿ ಫುಟ್ಬಾಲ್ ಆಟಗಾರ ಮರಡೋನ (60) ಬುಧವಾರ ತಡರಾತ್ರಿ ಹೃದಾಯಾಘಾತದಿಂದ ನಿಧನ ಹೊಂದಿದ್ದಾರೆ. ಅವರು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮರಡೋನಾ ಶ್ರೇಷ್ಠ ಫುಟ್ಬಾಲ್‌ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 1986ರಲ್ಲಿ ಆರ್ಜೆಂಟೀನಾ ವಿಶ್ವಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Advertisement

1986ರ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಅವರು ಬಾರಿಸಿದ ಒಂದು ಗೋಲು ಪ್ರಶಸ್ತಿಯನ್ನು ಎತ್ತಿ ಹಿಡಿಯುವಂತೆ ಮಾಡಿತ್ತು. ಇವರನ್ನು “ಹ್ಯಾಂಡ್ ಆಫ್ ಗಾಡ್” ಎಂದೇ ಟೀಂನಲ್ಲಿ ಕರೆಯಲಾಗುತ್ತಿತ್ತು.

ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ನವೆಂಬರ್ 11 ರಂದು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿದ್ದರು. ತಮ್ಮ ವೃತ್ತಿಜೀವನದಲ್ಲಿ 91 ಪಂದ್ಯಗಳನ್ನು ಆಡಿದ್ದು, 34 ಗೋಲುಗಳನ್ನು ಬಾರಿಸಿದ್ದಾರೆ. 1986ರ ವಿಶ್ವಕಪ್ ಸೇರಿದಂತೆ 4 ಫಿಫಾ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಆಡಿದ್ದರು. 1986ರ ವಿಶ್ವಕಪ್‌ನಲ್ಲಿ ಆರ್ಜೆಂಟೀನಾ ತಂಡದ ನಾಯಕರಾಗಿದ್ದರು. ಆ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟಗಾರ ಎಂಬ ಪುರಸ್ಕಾರಕ್ಕೆ ಭಾಜನರಾಗಿದ್ದರು.

ಮರಡೋನಾ ಬೊಕಾ ಜೂನಿಯರ್ಸ್, ನಾಪೋಲಿ, ಬಾರ್ಸಿಲೋನಾದ ಕ್ಲಬ್‌ಗಳ ಪರ ಆಡಿದ್ದರು. ಅವರಿಗೆ ಪ್ರಪಂಚದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ.

ಮರಡೋನಾ ಅವರು ಫುಟ್‌ಬಾಲ್‌ನಿಂದ ನಿವೃತ್ತಿಯಾದ ಬಳಿಕ ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. 2005ರಲ್ಲಿ ಅವರು ತೂಕ ಇಳಿಸಲು ಪ್ರಯತ್ನಿಸಿದ್ದರು. 2007ರಲ್ಲಿ ಅತಿಯಾದ ಮದ್ಯಪಾನದಿಂದಾಗಿ ಆರೋಗ್ಯದಲ್ಲಿ ಏರಿಳಿತ ಕಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಫುಟ್ಬಾಲ್ ವಿಶ್ವಕಪ್‌ನಲ್ಲಿ ಅವರ ಆರೋಗ್ಯವೂ ಹದಗೆಟ್ಟಿತು.

Advertisement

 

ದುಶ್ಚಟಗಳಿಗೆ ಬಲಿ
ಮರಡೋನ 1983ರಲ್ಲಿ ಸ್ಪೇನ್‌ಗೆ ತೆರಳಿದ್ದರು. ಅಲ್ಲಿಂದ ದುಶ್ಚಟಗಳಿಗೆ ದಾಸರಾಗಿದ್ದರು. ಮಾದಕ ವ್ಯಸನಿಯಾಗಿ ಬದಲಾದ ಅವರು ಅದರಿಂದ ಹೊರಬರಲು ಸಾಧ್ಯವಾಗದೇ ಬಹಳ ಒದ್ದಾಡಿದರು. ಇದರ ಜೊತೆಗೆ ಕುಡಿತವನ್ನೂ ಕಲಿತರು. ಪರಿಣಾಮ ಅವರ ತೂಕ 130 ಕೆಜಿಯವರೆಗೆ ಏರಿ ವಿಪರೀತ ಅನಾರೋಗ್ಯ ಸಮಸ್ಯೆ ಉಂಟಾಗಿತ್ತು. ಆಗಾಗ ಆಸ್ಪತ್ರೆಗೆ ಸೇರುವುದು ನಡೆದೇ ಇತ್ತು. 2007ರಲ್ಲಿ ಅವರು ಹೆಪಟೈಟಿಸ್‌ಗೆ ಚಿಕಿತ್ಸೆ ಪಡೆದಿದ್ದರು. ಗ್ಯಾಸ್ಟ್ರಿಕ್‌ ಸಮಸ್ಯೆ ಕಾರಣ ಬೈಪಾಸ್‌ ಶಸ್ತ್ರಚಿಕಿತ್ಸೆಯೂ ಆಗಿತ್ತು.

2019 ಜನವರಿಯಲ್ಲಿ ಅವರ ಹೊಟ್ಟೆಯೊಳಗೆ ಸಂಭವಿಸಿದ ರಕ್ತಸ್ರಾವದಿಂದ ಆಸ್ಪತ್ರೆ ಸೇರಿದ್ದರು. ಇತ್ತೀಚೆಗೆ ಮೆದುಳಿಗೆ ಶಸ್ತ್ರಚಿಕಿತ್ಸೆಯಾಗಿತ್ತು. ನ.12ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.

ಭಾರತಕ್ಕೆ ಬಂದಿದ್ದ ಮರಡೋನಾ!
ಕ್ಯಾನ್ಸರ್‌ ರೋಗಿಗಳ ದತ್ತಿ ಕಾರ್ಯಕ್ರಮದ ಅಂಗವಾಗಿ 2008ರಲ್ಲಿ ಕೋಲ್ಕತಾಗೆ ಭೇಟಿ ನೀಡಿದ ವೇಳೆ “ನಾನೇನು ದೇವರಲ್ಲ, ಒಬ್ಬ ಸಾಮಾನ್ಯ ಫ‌ುಟ್‌ಬಾಲ್‌ ಆಟಗಾರ’ ಎಂದಿದ್ದರು. 1986ರ ವಿಶ್ವಕಪ್‌ ಎತ್ತಿ ಹಿಡಿದಿರುವ ತಮ್ಮ ಪ್ರತಿಮೆಯನ್ನು ಕೋಲ್ಕತಾದ ಪಾರ್ಕ್‌ ಒಂದದರಲ್ಲಿ ಅನಾವರಣಗೊಳಿಸಿ, ನನ್ನ ಪ್ರತಿಮೆ ನೋಡಿ ಖುಷಿಯಾಗುತ್ತಿದೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next