Advertisement
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚ ರನ ಕುಟುಂಬ ನಡೆಸಿರುವ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣ ಸಂಬಂಧ ಇ.ಡಿ. ಅಧಿಕಾರಿ ಗಳು ಸುಮಾರು 12 ಗಂಟೆಗಳ ಕಾಲ ಪ್ರಫುಲ್‌ರ ವಿಚಾರಣೆ ನಡೆಸಿದೆ. ಪ್ರಫುಲ್ ಕುಟುಂಬದ ಒಡೆತನದ ಮಿಲೇನಿಯಂ ಡೆವಲ ಪರ್ಸ್ ಮತ್ತು ಮಿರ್ಚಿಯ ಕುಟುಂಬದ ನಡುವಿನ ವ್ಯವಹಾರಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ.
ಇನ್ನು ಮಿರ್ಚಿಯ ಪತ್ನಿಯು ಮಿಲೇನಿಯಂ ಡೆವಲಪರ್ಸ್‌ಗೆ 5 ಕೋಟಿ ರೂ. ವರ್ಗಾವಣೆ ಮಾಡಿರುವ ಕುರಿತ ಪ್ರಶ್ನೆಗೆ ಅವರು, ಅದು ಕಟ್ಟಡದ ನಿರ್ವಹಣೆಗಾಗಿ ಕೊಟ್ಟ ಮೊತ್ತವಿರಬಹುದು ಎಂದಿದ್ದಾರೆ. ಇದೇ ವೇಳೆ ಪಟೇಲ್ ಹಾಗೂ ಮಿರ್ಚಿ ನಡುವಿನ ದೂರವಾಣಿ ಸಂಭಾಷಣೆಯನ್ನೂ ತನಿಖೆಗೊಳಪಡಿಸಲು ಇ.ಡಿ. ನಿರ್ಧರಿಸಿದೆ.