Advertisement
ಅದಕ್ಕೆ ಹೊಸ ಸೇರ್ಪಡೆಯೆಂಬಂತೆ ಸೋಮವಾರ ಸರ್ವಧರ್ಮ ಸಮನ್ವಯ ನಡಿಗೆಯ ವೇಳೆ ಸಿಎಂ ಮಮತಾ ಅವರು ಹೊಸ ಯೋಜನೆ ಯೊಂದನ್ನು ವಿಪಕ್ಷಗಳ ಒಕ್ಕೂಟದ ಮುಂದಿಟ್ಟಿದ್ದಾರೆ. ಲೋಕಸಭೆ ಚುನಾವಣೆ ಯಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಸ್ಪರ್ಧಿಸಲು ಆಯಾ ಪ್ರಾದೇಶಿಕ ಪಕ್ಷಗಳಿಗೆ ಬಿಟ್ಟುಬಿಡಬೇಕು. ಕಾಂಗ್ರೆಸ್ 300 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿ. ಅಂಥ ಕ್ಷೇತ್ರಗಳಲ್ಲಿ ಅಭ್ಯರ್ಥಿ ಕಣಕ್ಕಿಳಿಸದೆ ನಾವು ಅವರನ್ನು ಬೆಂಬಲಿಸೋಣ. ಆದರೆ ಅವರು ನಮ್ಮ ಸಲಹೆಗಳನ್ನು ಪರಿಗಣಿಸದೆ ಮೊಂಡುವಾದ ಮುಂದಿಡುತ್ತಿದ್ದಾರೆ ಎಂದು ದೀದಿ ಹೇಳಿದ್ದಾರೆ.
“ಮಮತಾ ನನಗೆ ಆತ್ಮೀಯರು. ಕೆಲವೊಮ್ಮೆ ಹೇಳಿಕೆಗಳು, ಪ್ರತಿಹೇಳಿಕೆಗಳೆಲ್ಲ ಸಹಜ. ಅದರಿಂದ ಏನೂ ಸಮಸ್ಯೆಯಾಗದು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಮಮತಾ ಅವರ ಸಹಾಯವಿಲ್ಲದೆ ಪ. ಬಂಗಾಲದಲ್ಲಿ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದೆ ಎಂಬ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿಕೆ ಕುರಿತು ಪ್ರಶ್ನಿಸಿದಾಗ ರಾಹುಲ್ ಈ ಹೇಳಿಕೆ ನೀಡಿದ್ದಾರೆ.
Related Articles
ಮತ್ತೊಂದೆಡೆ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಮಿತ್ರಪಕ್ಷ ಆರ್‌ಜೆಡಿ ನಡುವೆ “ಎಲ್ಲವೂ ಸರಿ ಇಲ್ಲ’ ಎಂಬ ಗುಸು ಗುಸುಗಳ ನಡುವೆಯೇ ಮಂಗಳವಾರ ನಿತೀಶ್ ಅನಿರೀಕ್ಷಿತವಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದು, ರಾಜಕೀಯ ಪಡಸಾಲೆಯಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
Advertisement
ಮಂಗಳವಾರ ಸರಕಾರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಿತೀಶ್, ಅಲ್ಲಿಂದ ರಾಜಭವನಕ್ಕೆ ತೆರಳಿ ರಾಜ್ಯಪಾಲ ರಾಜೇಂದ್ರ ಅಲೇìಕರ್‌ರನ್ನು ಭೇಟಿಯಾಗಿದ್ದಾರೆ. ಈ ವೇಳೆ ಸಂಪುಟ ಸಚಿವ ವಿಜಯ್ ಚೌಧರಿ ನಿತೀಶ್‌ಗೆ ಸಾಥ್ ನೀಡಿದ್ದರು. ಈ ದಿಢೀರ್ ಭೇಟಿಯಿಂದಾಗಿ ನಿತೀಶ್ ಮತ್ತೆ ಎನ್‌ಡಿಎ ಸಖ್ಯ ಬೆಳೆಸಲಿದ್ದಾರೆ ಎಂಬ ಸುದ್ದಿಗಳಿಗೆ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ.