ಶಿವಮೊಗ್ಗ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಹೇಳುತ್ತಿದ್ದಂತೆ ”ಏ ತಡಿಯೋ, ಈಗಷ್ಟೇ ಸಿದ್ದೇಶ್ವರ ಶ್ರೀಗಳ ಒಳ್ಳೆ ಹೆಸರು ಹೇಳಿ ಬಂದಿದ್ದೇನೆ.ಅದ್ ಯಾವ್ದೋ ದರಿದ್ರ ಹೆಸರು ಹೇಳಿಸಲು ಹೊರಟ್ಟಿದ್ದಿಯಲ್ಲಾ.ನನ್ನ ಬಾಯಲ್ಲಿ ಈಗ ಬೇಡ.ಒಳ್ಳೆಯದು ಹೇಳ್ತಿನಿ ಬಿಡು…” ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಆಕ್ರೋಶದ ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ, ಸಿದ್ದರಾಮಯ್ಯ, ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಡಿಕೆ ಶಿವಕುಮಾರ್ ಸಾಮಾನ್ಯ ಜನರನ್ನು ಮರಳು ಮಾಡುತ್ತಿದ್ದಾರೆ. ಸುಳ್ಳು ಅಂಕಿ-ಅಂಶ ಮುಂದಿಟ್ಟುಕೊಂಡು ಮಾತನಾಡುತ್ತಾರೆ.ಅವರು ದಲಿತರ ಬಳಿ ಹೋಗಿ ಕೇಳಲಿ ಬಿಜೆಪಿಯಿಂದ ನಿಮಗೆ ಯಾವ ರೀತಿ ಅನುಕೂಲವಾಗಿದೆ ಎಂದು.ಜನರು ಬಾಯಿ ಬಿಟ್ಟು ಹೇಳ್ತಾರೆ ಎನು ಬಂದಿದೇ ಎಂದು.ನೀವು ಅಷ್ಟೇಲ್ಲಾ ಮಾಡಿದ್ರೇ ಸಿಎಂ ಅಗಿದ್ದ ನೀವ್ಯಾಕೇ ಸೋಲುತ್ತಿದ್ರೀ. ಸರ್ಕಾರ ಏಕೆ ಹೋಯ್ತು..? ಎಂದು ಕಿಡಿ ಕಾರಿದರು.
ಚಿತ್ರದುರ್ಗದಲ್ಲಿ ಜನವರಿ 8 ರಂದು ಕಾಂಗ್ರೆಸ್ ನಿಂದ ಎಸ್ಸಿ-ಎಸ್ಟಿ ಸಮಾವೇಶ ಕುರಿತು ಪ್ರಶ್ನಿಸಿದಾಗ ಈ ಪ್ರತಿಕ್ರಿಯೆ ನೀಡಿದರು. ಸಿಎಂ ಬೊಮ್ಮಾಯಿ ಅವರನ್ನು ನಾಯಿ ಮರಿ ಎಂದು ಹೇಳುವುದು ಸರಿಯೇ? ಸಿಎಂ ಆಗಿದ್ದವರ ಬಾಯಲ್ಲಿ ಇದು ಬರೋದು ಸರೀನಾ? ಅವರು ಸಹ 5 ವರ್ಷ ಸಿಎಂ ಆಗಿದ್ದರು. ನಾವು ಆಗ ಹೇಳಬಹುದಿತ್ತು.ನೀವು ನಾಯಿ ಮರಿ, ಹಂದಿ ಮರಿ, ಕತ್ತೆ ಮರಿ ಎಂದು ಕರೆದರೆ, ನಮಗೆ ಕರಿಯೋಕೆ ಬರಲ್ವಾ ಎಂದು ಪ್ರಶ್ನಿಸಿದರು.
ರಾಜ್ಯದ ಜನ ತೀರ್ಮಾನ ಮಾಡ್ತಾರೆ ಎಂದು ನಮಗೆ ಗೊತ್ತಿತ್ತು.ಸಿಎಂ ಸ್ಥಾನಕ್ಕೆ ಒಂದು ಗೌರವವಿದೆ.ಹಿಂದೆ ಸಿದ್ದರಾಮಯ್ಯ ಇದ್ರು.ಇಂದು ಬೊಮ್ಮಾಯಿ ಇದ್ದಾರೆ. ನಾಳೆ ಬೇರೆ ಯಾರೋ ಇರ್ತಾರೆ.ಸಿಎಂ ಸ್ಥಾನಕ್ಕೆ ಅಪಮಾನ ಮಾಡಬಾರದು. ಸಿದ್ದರಾಮಯ್ಯ ರಾಜ್ಯದ ಜನರ ಮುಂದೆ ಕ್ಷಮೆ ಕೇಳಬೇಕು.ಹಳ್ಳಿಯಲ್ಲಿ ಆಡುವ ಮಾತಿನ ರೀತಿ ಮಾತನಾಡಿದ್ದೇನೆ ಎನ್ನುವ ಮೂಲಕ ಸಿದ್ದರಾಮಯ್ಯ ಹಳ್ಳಿ ಜನರಿಗೆ ಅವಮಾನ ಮಾಡಿದ್ದಾರೆ.ನಾನು ಮಾತನಾಡಿದ್ದು ತಪ್ಪು ಎಂದು ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ನಾವು ಹಿಂದೂ ಧರ್ಮ, ದೇಶದ ವಿಷಯ ಮಾತನಾಡುತ್ತೇವೆ.ಅದಕ್ಕಾಗಿ ಬಿಜೆಪಿ ಮತ್ತೆ ಮತ್ತೆ ಎಲ್ಲಾ ಕಡೆ ಅಧಿಕಾರಕ್ಕೆ ಬರುತ್ತದೆ.ಧರ್ಮವೇ ಭಾರತೀಯ ಸಂಸ್ಕೃತಿಯ ರೂಪ. ದೇಶ, ಸಂಸ್ಕೃತಿ ಜೊತೆಗೆ ಅಭಿವೃದ್ಧಿ ಕಡೆಗೂ ಗಮನ ಹರಿಸಿದ್ದೇವೆ. ಹಾಗಾಗಿ ಕಾಂಗ್ರೆಸ್ ಸಮೀಕ್ಷೆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ.ಅವರ ಸಮೀಕ್ಷೆಗೆ ಅರ್ಥವೇ ಇಲ್ಲ. ಜನರ ತೀರ್ಪು, ಸಮೀಕ್ಷೆ ಬಗ್ಗೆ ನಮಗೆ ಗೌರವ ಎಂದರು.
ಸ್ಯಾಂಟ್ರೋ ರವಿ ಪ್ರಕರಣ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ರೀತಿಯ ಕೆಲಸ ಜೆಡಿಎಸ್ ಮತ್ತು ಕಾಂಗ್ರೆಸ್ ನವರಿಗೆ.ಹಿಂದೆ ನಮ್ಮ ಶಾಸಕ ವಸಂತ ಬಂಗೇರ ರನ್ನು ಜೆಡಿಎಸ್ ಕರೆದುಕೊಳ್ಳಲಿಲ್ಲವೇ? ಆಗ ಎಲ್ಲಾ ಸರಿಯಿತ್ತೇ? ರುಚಿಯಾಗಿತ್ತೇ? ಎಂದು ಪ್ರತಿಕ್ರಿಯಿಸಿದರು.