Advertisement
ಮಾ.27ರಂದು ಲಾಡ್ಜ್ ಗೆ ಪತ್ನಿ, ಮಕ್ಕಳೊಂದಿಗೆ ಬಂದಿದ್ದ ದೇವೇಂದ್ರ ಮತ್ತೆ ಎರಡು ದಿನ ಉಳಿದುಕೊಳ್ಳುವುದಾಗಿ ಲಾಡ್ಜ್ ನವರಿಗೆ ತಿಳಿಸಿದ್ದ. ಶುಕ್ರವಾರ ಬೆಳಗ್ಗೆ ಕೂಡ ರೂಮಿನಿಂದ ಯಾರೂ ಹೊರ ಬರದಿದ್ದಾಗ ಲಾಡ್ಜ್ ಸಿಬಂದಿ ಬೇರೊಂದು ಕೀ ಹಾಕಿ ಬಾಗಿಲು ತೆರೆದಾಗ ಘಟನೆ ಬೆಳಕಿಗೆ ಬಂದಿತ್ತು. ದೇವೇಂದ್ರ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತೊಟ್ಟಿದ್ದರೆ ಪತ್ನಿ ಮತ್ತು ಮಕ್ಕಳು ಹಾಸಿಗೆ ಮೇಲೆ ಮಲಗಿದ ಸ್ಥಿತಿಯಲ್ಲೆ ಸಾವನ್ನಪ್ಪಿದ್ದರು.
Related Articles
Advertisement
ಮಂಗಳೂರಿಗೆ ಬಂದ ಬಳಿಕ ನಿರ್ಧಾರ?ದೇವೇಂದ್ರ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೆ ಬಂದಿದ್ದರೆ ಅಥವಾ ಮಂಗಳೂರಿಗೆ ಬಂದ ಮೇಲೆ ಏಕಾಏಕಿ ನಿರ್ದಾರ ಮಾಡಿದರೆ ಗೊತ್ತಾಗಿಲ್ಲ. ಲಾಡ್ಜ್ ನಲ್ಲೊ ಕೃತ್ಯ ಎಸಗುವ ಮೊದಲು ದೇವೇಂದ್ರ ಅವರಿಗೆ ಬಂದಿರುವ ಕರೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪತಿ ಪತ್ನಿ ಅನ್ಯೋನ್ಯವಾಗಿದ್ದರೆಂದು ಕುಟುಂಬ ಮೂಲಗಳು ತಿಳಿಸಿವೆ. ಒಂಭತ್ತು ವರ್ಷ ವಯಸ್ಸಿನ ಇಬ್ಬರು ಹೆಣ್ಮಕ್ಕಳು ಸೇರಿದಂತೆ ನಾಲ್ವರ ಸಾವು ಮನಕಲಕುವಂತಿದೆ. ಇಂತಹ ದುಡುಕಿನ ನಿರ್ಧಾರ ಅಕ್ಷಮ್ಯ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ ಎಂಬ ಸತ್ಯ ಎಲ್ಲರನ್ನು ತಲುಬೇಕಿದೆ.