Advertisement

ಸ್ವಚ್ಚತೆ ಕಾಪಾಡದಿದ್ದರೆ ಪರವಾನಗಿ ರದ್ದು: ತಹಶೀಲ್ದಾರ್‌

10:35 AM Jun 23, 2018 | |

ಕಂಪ್ಲಿ: ಪಟ್ಟಣದ ವಿವಿಧ ಚಲನ ಚಿತ್ರಮಂದಿರಗಳಿಗೆ ಶುಕ್ರವಾರ ದಿಢೀರ್‌ ಭೇಟಿ ನೀಡಿದ ತಹಶೀಲ್ದಾರ್‌ ಶರಣವ್ವ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಚಿತ್ರಮಂದಿರಗಳಲ್ಲಿನ ಸ್ವತ್ಛತೆ ಕಂಡು ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಸ್ವಚ್ಚತೆ ಕಂಡು ಬರದಿದ್ದರೆ ಜಿಲ್ಲಾಧಿಕಾರಿಗಳಿಗೆ ಪರವಾನಗಿ ರದ್ದತಿ ಮಾಡಲು ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ಚಂದ್ರಕಲಾ, ಭಾರತ ಹಾಗೂ ಗಣೇಶ್‌ ಚಿತ್ರಮಂದಿರಗಳಿಗೆ ಭೇಟಿ ನೀಡಿದ ತಹಶೀಲ್ದಾರ್‌ ಶರಣವ್ವ ಅವರಿಗೆ ಸ್ವಾಗತಿಸಿದ್ದು, ಮಂದಿರಗಳಲ್ಲಿನ ಅಸ್ವಚ್ಚತೆ, ಬೀರ್‌ ಬಾಟಲ್‌ಗ‌ಳು, ಹದಗೆಟ್ಟ ಶೌಚಾಲಯಗಳು, ಮುರಿದ ಆಸನಗಳು. ಇವುಗಳನ್ನು ನೋಡಿದ ತಹಶೀಲ್ದಾರ್‌, ಇಂತಹ ಹದಗೆಟ್ಟ ಚಿತ್ರಮಂದಿರಲ್ಲಿ ಸಾರ್ವಜನಿಕರು ಸಿನಿಮಾ ನೋಡುತ್ತಾರೆಯೇ ಎಂದು ಚಿತ್ರಮಂದಿರದ ಮಾಲೀಕರನ್ನು ಖಾರವಾಗಿಯೇ ಪ್ರಶ್ನಿಸಿದರು.

ಮನರಂಜನೆಗಾಗಿ ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರು ಚಿತ್ರಮಂದಿರಗಳಿಗೆ ಬರುತ್ತಾರೆ. ಆದರೆ ಚಿತ್ರಮಂದಿರಗಳಲ್ಲಿ ಸ್ವಚ್ಚತೆ ಇಲ್ಲದಿದ್ದರೆ ಹೇಗೆ. ಚಿತ್ರಮಂದಿರಗಳಲ್ಲಿ ಮದ್ಯ ಸೇವನೆಗೆ ಅವಕಾಶ ಕೊಟ್ಟವರು ಯಾರು?, ಚಿತ್ರಮಂದಿರದಲ್ಲಿ ಆಸನಗಳ ವ್ಯವಸ್ಥೆ ಸರಿ ಇಲ್ಲ. ಶೌಚಾಲಯವೂ ಹದಗಟ್ಟಿದ್ದು, ಸಾರ್ವಜನಿಕರು
ಇವುಗಳನ್ನು ಬಳಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ನಂತರ ಚಂದ್ರಕಲಾ ಚಿತ್ರಮಂದಿರದ ಮಾಲೀಕ ಜಿ.ಚಂದ್ರೇಶಗೌಡ ಅವರನ್ನು ಕರೆಸಿ ಸ್ವಚ್ಚತೆ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಮುಂದಿನ ದಿನಗಳಲ್ಲಿ ಪುನಃ ಭೇಟಿ ನೀಡಲಿದ್ದು, ಅಷ್ಟರಲ್ಲಿ ಚಿತ್ರಮಂದಿರ ಸ್ವಚ್ಚತೆವಾಗಿರಬೇಕು. ಸುಸಜ್ಜಿತ ಆಸನ ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳಿಗೆ ಪರವಾನಗಿ ರದ್ದತಿ ಶಿಫಾರಸು ಮಾಡುವುದಾಗಿ
ಎಚ್ಚರಿಸಿದರು.

ಈ ಸಂದರ್ಭದಲ್ಲಿ ಕಂದಾಯಾಧಿಕಾರಿ ಎಸ್‌. ಎಸ್‌.ತಂಗಡಗಿ, ಪ್ರಥಮ ದರ್ಜೆ ಸಹಾಯಕ ಶ್ರೀಧರ್‌, ಗ್ರಾಮ ಲೆಕ್ಕಾಧಿಕಾರಿಗಳಾದ ಜಿಲಾನ್‌, ಶರೀಫ್‌,ಲಕ್ಷ್ಮಣ ನಾಯ್ಕ, ವಿಜಯಕುಮಾರ್‌ ಸೇರಿದಂತೆ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next