Land Grab: ಖಾಸಗಿ ಸಂಸ್ಥೆಗೆ ಗೋಮಾಳ: ಕಂದಾಯ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು, ಸಂಬಂಧಿಸಿದ ದಾಖಲೆಗಳು ರಾಜಭವನಕ್ಕೆ ರವಾನೆ
Team Udayavani, Jan 16, 2025, 7:35 AM IST
ಬೆಂಗಳೂರು: ಕಂದಾಯ ಇಲಾಖೆ ವಿರುದ್ಧ ಅಕ್ರಮ ಭೂಪರಭಾರೆಯ ಆರೋಪ ಕೇಳಿಬಂದಿದ್ದು, ದೊಡ್ಡಬಳ್ಳಾಪುರ ತಾಲೂಕು ಅಧಿಕಾರಿಗಳು ಹಾಗೂ ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಕ್ರಮ ಜರಗಿಸುವಂತೆ ರಾಜ್ಯಪಾಲರಿಗೆ ದೂರು ಸಲ್ಲಿಕೆಯಾಗಿದೆ.
ದೊಡ್ಡಬಳ್ಳಾಪುರ ತಾಲೂಕು ಹುಲಿಕುಂಟೆ ಗ್ರಾಮದಲ್ಲಿ ರೈತರ ಜಿಪಿಎ ಬಳಸಿ ಕೃಷಿ ಭೂಮಿಯನ್ನು ಖಾಸಗಿ ಕಂಪೆನಿಯೊಂದಕ್ಕೆ ಪರಭಾರೆ ಮಾಡಿದ್ದು, ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಸಚಿವರ ವಿರುದ್ಧ ತನಿಖೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ.
ಈ ಕುರಿತು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದು, ಸಂಬಂಧಿಸಿದ ದಾಖಲೆಗಳನ್ನೂ ರಾಜಭವನಕ್ಕೆ ರವಾನಿಸಿದ್ದಾರೆ.ಸರಕಾರಿ ಜಮೀನು ಮಂಜೂರು ಮಾಡಿರುವುದೂ ಅಲ್ಲದೆ, ಸುತ್ತಮುತ್ತಲ ಗೋಮಾಳವನ್ನೂ ಖಾಸಗಿ ಕಂಪೆನಿ ಬಳಸಿಕೊಂಡಿದ್ದು, ಸಂಸ್ಥೆಯ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಇಲಾಖೆಯಲ್ಲಿ ಇಷ್ಟೆಲ್ಲ ಅಕ್ರಮ ನಡೆದಿದ್ದರೂ ಕ್ರಮ ಕೈಗೊಳ್ಳದ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿರುದ್ಧವೂ ತನಿಖೆಗೆ ಆದೇಶಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಪ್ರಮುಖವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ಹೋಬಳಿ ಹುಲಿಕುಂಟೆ ಗ್ರಾಮದ ಸರ್ವೇ ನಂಬರ್ 150 ರಲ್ಲಿ 6 ಮಂದಿಗೆ 10 ಎಕರೆ ಸರ್ಕಾರಿ ಜಮೀನನ್ನು ಸಾಗುವಳಿ ಮಾಡಿಕೊಳ್ಳಲು ಹಂಗಾಮಿ ಸಾಗುವಳಿ ಚೀಟಿ ಮಂಜೂರು ಮಾಡಲಾಗಿತ್ತು. ಆದರೆ, ಇದಕ್ಕೆ ಪೋಡಿ, ಹದ್ದುಬಸ್ತು, ನಕ್ಷೆ ತಯಾರಾಗಿಲ್ಲ. ಪಹಣಿಯಲ್ಲಿ ಸರ್ವೇ ನಂಬರ್ 150 ‘ಪಿ’ ಎಂದು ನಮೂದಾಗಿರುವುದನ್ನು ತೆಗೆದುಹಾಕಿಲ್ಲ. ಇಂತಹ ಜಾಗವನ್ನು ಮಾರಾಟ ಮಾಡುವಂತಿಲ್ಲ.
ಆದರೆ, ಇವರಿಂದ ಪಲ್ವಿತ್ ಡೆವಲಪರ್ಸ್ ಎಂಬ ಕಂಪನಿಗೆ 2024ರ ಏ.21ರಂದು ನೋಂದಾಯಿತ ಜಿಪಿಎ ಪತ್ರದ ಮೂಲಕ ಮಾರಾಟ ಮಾಡಿದ್ದು, ಖಾತೆ ಬದಲಾವಣೆಗಾಗಿ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮುಂದೆ ಅರ್ಜಿ ಸಲ್ಲಿಕೆಯಾಗಿತ್ತು. ಯಾವ ವಿಚಾರಣೆಯನ್ನೂ ನಡೆಸದೆ, ಜಿಪಿಎ ಆಧಾರದ ಮೇಲೆ ಖಾತೆ ಬದಲಾವಣೆ ಮಾಡಿರುವುದು ಕಾನೂನುಬಾಹಿರವಾಗಿದ್ದು, ಉಪವಿಭಾಗಾಧಿಕಾರಿ ಎನ್. ದುರ್ಗಾ ಹಾಗೂ ತಹಶೀಲ್ದಾರ್ ವಿಭಾ ರಾಥೋಡ್ ಅವರು ಕಾನೂನು ಕ್ರಮ ಆಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uniform Civil Code: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ: ಡಿ.ಕೆ.ಶಿವಕುಮಾರ್
ಗುರಿ ಸಾಧಿಸದಿದ್ರೆ ಅಧಿಕಾರಿಗಳೇ ಹೊಣೆ: ಚಲುವರಾಯಸ್ವಾಮಿ
KAS ಹುದ್ದೆ ಭರ್ತಿಯಲ್ಲಿ ಲೋಪ: ಕೆಪಿಎಸ್‌ಸಿಗೆ ಕೆಎಟಿಯಿಂದ ನೋಟಿಸ್
Mallikarjun Kharge: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ 5 ಸಾವಿರ ನೀಡಿ
SSLC ಪ್ರವೇಶ ಪತ್ರ ತಿದ್ದುಪಡಿಗೆ ಫೆ.10ರವರೆಗೆ ಅವಕಾಶ