Advertisement

2 ಲಕ್ಷ ರೂ. ಮೌಲ್ಯದ ಬ್ಯಾಗ್‌ ಬಚ್ಚಿಟ್ಟ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ !

08:11 PM Aug 02, 2022 | Team Udayavani |

ನವದೆಹಲಿ: ಮಂಗಳವಾರ ಲೋಕಸಭಾ ಕಲಾಪದ ಸಂದರ್ಭದಲ್ಲಿ ತೃಣಮೂಲ ಕಾಂಗ್ರೆಸ್‌ನ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ತಮ್ಮಲ್ಲಿದ್ದ ಬೆಲೆಬಾಳುವ ಬ್ಯಾಗ್‌ ಅನ್ನು ಅಡಗಿಸಿಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ.

Advertisement

ಕಲಾಪದಲ್ಲಿ ಮತ್ತೊಬ್ಬ ಟಿಎಂಸಿ ಸಂಸದೆ ಕಾಕೋಲಿ ಘೋಷ್‌ ದಸ್ತಿದಾರ್‌, ಬೆಲೆಯೇರಿಕೆ ಬಗ್ಗೆ ಪ್ರಸ್ತಾಪಿಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ತಕ್ಷಣವೇ ಅವರ ಪಕ್ಕದಲ್ಲಿ ಕುಳಿತಿದ್ದ ಮಹುವಾ, ದಿಢೀರನೆ ಜಾಗೃತರಾಗಿ ತಮ್ಮ ಪಕ್ಕದಲ್ಲೇ ಇದ್ದ ಅಂದಾಜು 2 ಲಕ್ಷ ರೂ. ಮೌಲ್ಯದ ಲೂಯಿಸ್‌ ವಿಟಾನ್ ಬ್ರಾಂಡ್‌ನ‌ ವ್ಯಾನಿಟಿ ಬ್ಯಾಗನ್ನು ತಮ್ಮ ಆಸನದ ಕೆಳಕ್ಕೆ ಬಚ್ಚಿಟ್ಟಿದ್ದಾರೆ!

ನೆಟ್ಟಿಗರು ಇದರತ್ತ ಬೆರಳು ತೋರಿ ತಮಾಷೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next