ಬೆಂಗಳೂರು: ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಕೊಡುಗೆ ನೀಡುವ ರೈತರನ್ನು ಪ್ರಶಂಸಿಸುವ ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ ಬ್ಯಾಂಕ್ ಆಫ್ ಬರೋಡದಿಂದ ದೇಶವ್ಯಾಪಿ “ರೈತ ದಿವಸ್’ ಆಚರಿಸಲಾಗುತ್ತಿದೆ ಎಂದು ಬ್ಯಾಂಕ್ ಆಫ್ ಬರೋಡದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಯ್ ಖುರಾನಾ ತಿಳಿಸಿದರು.
ಆಲಗೊಂಡನಹಳ್ಳಿಯಲ್ಲಿ ಹಮ್ಮಿಕೊಂ ಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ ಬಂದು 75 ವರ್ಷಗಳಾದ ಹಿನ್ನೆಲೆ ಬರೋಡ ಬ್ಯಾಂಕ್ ದೇಶವ್ಯಾಪ್ತಿ ರೈತ ದಿವಸ ಆಚರಣೆಗೆ ಮುಂದಾಗಿದೆ. ಅ.16ರ ವಿಶ್ವ ಆಹಾರ ದಿನದಂದು ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಹಂತ ಹಂತವಾಗಿ ದೇಶದೆಲ್ಲೆಡೆ ಅ.31ರವರೆಗೆ ಆಚರಿಸಿ ರೈತರಿಗೆ ಗೌರವ ಸಮರ್ಪಣೆ ಮಾಡಲಾಗುತ್ತಿದೆ.
ಕೃಷಿ ಮಾರುಕಟ್ಟೆ ಸಂಸ್ಕರಣ ಕೇಂದ್ರಗಳನ್ನು ಆರಂಭಿಸಿ ರೈತರಿಗೆ ಉತ್ತೇಜನ ನೀಡುವ ಮೂಲಕ ರೈತರ ಅಭಿವೃದ್ಧಿಗೆ ಬ್ಯಾಂಕ್ ಶ್ರಮಿಸುತ್ತಿದೆ ಎಂದರು. ಬೆಂಗಳೂರು ವಲಯ ಪ್ರಬಂಧಕ ಸುಧಾಕರ್ ಡಿ. ಎ. ನಾಯಕ್ ಮಾತ ನಾಡಿ, ರೈತರ ಸರ್ವತೋಮುಖ ಅಭಿ ವೃದ್ಧಿಯನ್ನು ಗಮನದಲ್ಲಿಟ್ಟು ಕೊಂಡು ಬ್ಯಾಂಕ್ ಕೃಷಿ ಕ್ಷೇತ್ರದ ಅಭ್ಯುದಯಕ್ಕೆ ಅದ್ಯತೆ ನೀಡಿದೆ.
ಇದನ್ನೂ ಓದಿ;- ಸಿಂದಗಿ: ತಹಶೀಲ್ದಾರ್ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ
ಕೃಷಿ ಉತ್ಪನ್ನಗಳಿಗೆ ಹಣಕಾಸು ನೆರೆವು ಒದಗಿಸುವುದು, ಕೃಷಿ ಮಾರ್ಕೆಟಿಂಗ್ ಚಟುವಟಿಕೆ ಹೆಚ್ಚಿನ ಗಮನ, ಕ್ರೆಡಿಟ್ ಖಾತೆ ನಿರ್ವಹಿಸುವ ತಿಳಿವಳಿಕೆ ತರಬೇತಿ ಪಡೆದ ಮಾನವ ಶಕ್ತಿಯ ಬೆಳವಣಿಗೆ ಪೂರಕವಾಗಿ ಶಕ್ತಿ ತುಂಬುವುದು, ಸ್ಥಳೀಯ ಸಂಸ್ಥೆಗಳ ಸಹಯೋಗ ಉತ್ತೇಜಿಸುವುದು ಬ್ಯಾಂಕ್ ನ ಉದ್ಧೇಶವಾಗಿದೆ ಎಂದರು. ಇದೇ ವೇಳೆ ರೈತರಿಗೆ ವಿವಿಧ ಯೋಜನೆಗಳ ಸಾಲಸೌಲಭ್ಯ ವಿತರಿಸಲಾಯಿತು. ಕೃಷಿ ರಂಗದಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.
ಕೃಷಿ ಉಪಕರಣಗಳು , ಉತ್ತಮ ತಳಿಯ ಹಸು ಕುರಿ-ಮೇಕೆ, ಸಾವಯವ ಕೃಷಿ ಗೊಬ್ಬರ, ನೈಸರ್ಗಿಕವಾಗಿ ತಯಾರಿಸಲ್ಪಟ್ಟ ಕ್ರಿಮಿನಾಶಕ ಕುರಿತು ಪ್ರಾತ್ಯಕ್ಷಿಕ ಆಯೋ ಜಿಸಲಾಗಿತ್ತು. ಶಿಬಿರದ ಮುಖ್ಯಸ್ಥ ಉದಯ ಹೆಗಡೆ, ದೊಡ್ಡನÇÉಾಳ ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ಇದ್ದರು.