Advertisement

ಶುಚಿತ್ವ ಪಾಲನೆಯಿಂದ ಅತಿಸಾರ ಭೇದಿ ನಿಯಂತ್ರಣ

09:19 PM Jun 12, 2019 | Lakshmi GovindaRaj |

ಪಾತಪಾಳ್ಯ: ಆಹಾರ ಸೇವಿಸುವುದಕ್ಕೂ ಮುನ್ನ ಹಾಗೂ ವೈಯಕ್ತಿಕ ಶುಚಿತ್ವ ಅನುಸರಿಸುವುದರಿಂದ ಅತಿಸಾರ ಭೇದಿಯನ್ನು ತಡೆಗಟ್ಟಬಹುದು ಎಂದು ವೈದ್ಯಾಧಿಕಾರಿ ಡಾ.ಕೆ.ಎನ್‌.ರಾಘವೇಂದ್ರ ತಿಳಿಸಿದರು.

Advertisement

ಚಾಕವೇಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಬಳ್ಳಾಪುರ ಇವರ ವತಿಯಿಂದ ಬುಧವಾರ ಏರ್ಪಡಿಸಿದ್ದ ತೀವ್ರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತಿಸಾರ ಭೇದಿಯು ಹೆಚ್ಚಾಗಿ 0.5 ತಿಂಗಳ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನಿಯೋಜಿತ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಎಎನ್‌ಎಂಗಳು 5 ವರ್ಷದೊಳಗಿನ ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಿ ತಪ್ಪದೇ ಓಆರ್‌ಎಸ್‌ ಪೊಟ್ಟಣ ಹಾಗೂ ಜಿಂಕ್‌ ಮಾತ್ರೆಗಳನ್ನು ವಿತರಿಸಬೇಕು.

ಅತಿಸಾರ ಭೇದಿಯಿಂದ ನರಳುತ್ತಿರುವ ಮಕ್ಕಳನ್ನು ಆರೈಸುವ ವಿಧಾನದ ಬಗ್ಗೆ ಮಕ್ಕಳ ತಾಯಂದಿರಿಗೆ ಅರಿವು ಮೂಡಿಸಬೇಕು ಎಂದರು. ಔಷಧಿ ವಿತರಕಿ ಸನೀಬಾ ತಬಸೂನ್‌, ಸಿಬ್ಬಂದಿ ಶಾರದಮ್ಮ, ಟಿ.ವಿ.ರವಿ, ಆರ್‌. ರೋಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next