Advertisement

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

03:56 PM Sep 07, 2024 | Team Udayavani |

ಹೊಸದಿಲ್ಲಿ: ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಅವರು ಡೈಮಂಡ್‌ ಲೀಗ್‌ ಋತುವಿನ ಫೈನಲ್‌ ಹೋರಾಟದಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ.

Advertisement

ಬ್ರುಸೆಲ್ಸ್‌ನಲ್ಲಿ ನಡೆಯಲಿರುವ ಈ ಹೋರಾಟಕ್ಕೆ ಅವರು ನಾಲ್ಕನೇ ಸ್ಥಾನಿಯಾಗಿ ಅರ್ಹತೆ ಪಡೆದುಕೊಂಡರು. ವಿಶ್ವದಾದ್ಯಂತ ನಡೆದ ಡೈಮಂಡ್‌ ಲೀಗ್‌ನ 14 ಸ್ಪರ್ಧೆಗಳ ಬಳಿಕ ಸಮಗ್ರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಋತುವಿನ ಫೈನಲ್‌ ಹೋರಾಟವು ಸೆ. 13 ಮತ್ತು 14ರಂದು ನಡೆಯಲಿದೆ.

ದೋಹಾ ಮತ್ತು ಲಾಸನ್ನೆಯಲ್ಲಿ ನಡೆದ ಕೂಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದ ಚೋಪ್ರಾ ಒಟ್ಟಾರೆ 14 ಅಂಕ ಪಡೆದಿದ್ದರು. ಅವರು ಗುರುವಾರ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್‌ ಲೀಗ್‌ನ ಅಂತಿಮ ಕೂಟದಲ್ಲಿ ಭಾಗವಹಿಸಿರಲಿಲ್ಲ.

ಇದನ್ನೂ ಓದಿ: ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ ಪ್ರಕರಣ ಬೆಳಕಿಗೆ: ಪಾಟೀಲ ಆಸ್ಪತ್ರೆ ಸೀಜ್

Advertisement

Udayavani is now on Telegram. Click here to join our channel and stay updated with the latest news.

Next