Advertisement

ಗುಜರಾತ್‌ನ ವಜ್ರ ಕಂಪೆನಿಯಿಂದ 518 ಕೋಟಿ ರೂ. ವಂಚನೆ!

02:31 AM Sep 26, 2021 | Team Udayavani |

ಹೊಸದಿಲ್ಲಿ: ಗುಜರಾತ್‌ನ ಪ್ರಮುಖ ವಜ್ರ ತಯಾರಿಕೆ ಮತ್ತು ರಫ್ತು ಕಂಪೆನಿಯೊಂದರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದು, 518 ಕೋಟಿ ರೂ. ಮೊತ್ತದ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ.

Advertisement

ಸಣ್ಣ ಸಣ್ಣ ಪಾಲಿಶ್‌ ಮಾಡಲ್ಪಟ್ಟ ವಜ್ರದ ಹರಳುಗಳ ಮಾರಾಟ ನಡೆದಿರುವುದು ಇಲ್ಲಿ ಗಮನಕ್ಕೆ ಬಂದಿದೆ. ಈ ಕಂಪೆನಿ 95 ಕೋಟಿ ರೂ. ಮೊತ್ತದ ಸಣ್ಣ ವಜ್ರದ ಹರಳುಗಳನ್ನು ನಗದು ಪಡೆದು ಮಾರಿದೆ. ಅದಕ್ಕೆ ಲೆಕ್ಕವೇ ಇಲ್ಲ. ಕಳೆದ ಕೆಲವು ವರ್ಷಗಳಿಂದ 2,742 ಕೋಟಿ ರೂ. ಮೊತ್ತದ ವಜ್ರದ ಹರಳುಗಳನ್ನು ಮಾರಲಾಗಿದೆ.

ಇಲ್ಲಿನ ವಹಿವಾಟೆಲ್ಲ ಬಹುತೇಕ ನಗದು ರೂಪದಲ್ಲೇ ನಡೆದಿವೆ. ಹಾಗೆಯೇ ಹಾಂಕಾಂಗ್‌ನಲ್ಲಿ ನೋಂದಣಿ ಮಾಡಲ್ಪಟ್ಟಿರುವ ಕಂಪೆನಿಯೊಂದರ ಮೂಲಕ ಒರಟು ವಜ್ರದ ವಹಿವಾಟು ನಡೆಸಲಾಗುತ್ತಿದೆ. ಆದರೆ ಈ ಕಂಪೆನಿಯ ನಿಯಂತ್ರಣ, ಕಾರ್ಯಾಚರಣೆ ಇರುವುದೆಲ್ಲ ಭಾರತದಲ್ಲಿ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next