Advertisement
ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರವನ್ನು ತೆರೆಯುವುದರಿಂದ ಮೂತ್ರ ಪಿಂಡದ ವೈಫಲ್ಯದಿಂದ ಬಳಲುತ್ತಿರುವ ಅನೇಕ ರೋಗಿಗಳಿಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ತಾಲೂಕು ಪಂಚಾಯ್ತಿ 2017-18ನೇ ಸಾಲಿನಲ್ಲಿ ತಾಪಂ ಅನುದಾನದಲ್ಲಿ 1.80 ಲಕ್ಷ ರೂ., 2018-19ರಲ್ಲಿ 4.90 ಲಕ್ಷ ರೂ., ಸೇರಿ ಒಟ್ಟು 6.70 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ.
Related Articles
Advertisement
ಅವೈಜ್ಞಾನಿಕ ಕಾಮಗಾರಿ: ಸಾರ್ವಜನಿಕರ ಆಸ್ಪತ್ರೆಯು ಮುಂಭಾಗದಲ್ಲಿ ಆಸ್ಪತ್ರೆಯ ಲೆಕ್ಕ ಶೀರ್ಷಿಕೆಯ ಯೋಜನೆಯ ಅನುದಾನದಲ್ಲಿ ಈ ಹಿಂದೆ ಗೇಟ್‌ನ ಮುಂಭಾಗ ನಿರ್ಮಾಣವಾಗಿದ್ದ ಕಬ್ಬಿಣದ ಪಟ್ಟಿ (ಕೌ ಕ್ಯಾಚರ್) ಕಳಪೆ ಗುಣಮಟ್ಟದಿಂದ ಕೂಡಿತ್ತು. ಇಲ್ಲಿನ ಪೈಪ್‌ಗ್ಳು ಕಳಪೆ ದರ್ಜೆಯದಾಗಿದ್ದು, ಇದು ಬಾಗಿ ಕೊಂಡಿತ್ತು. ಇದನ್ನು ತೆಗೆದು ಈಗ ಕಬ್ಬಿಣದ ಚಾನೆಲ್‌ಗಳನ್ನು ಹಾಕಲಾಗಿದೆ. ಆದರೆ, ಇದರ ಅಂತರ ಹೆಚ್ಚಾಗಿದ್ದು, ಚಿಕ್ಕ ಮಕ್ಕಳ ಪಾದಗಳು ಸಿಲುಕಿಕೊಳ್ಳುವ ಅಪಾಯವಿದೆ. ಅಲ್ಲದೆ, ಇದಕ್ಕೆ ಪೈಪ್‌ಗ್ಳನ್ನು ಮಾತ್ರ ಬಳಸಲಾಗುತ್ತದೆ. ಆದರೆ, ಚಾನೆಲ್‌ಗಳ ಬಳಕೆಯಿಂದ ಕಾಲು ಸಿಲುಕಿದರೆ ಗಾಯವಾಗುವ ಸಾಧ್ಯತೆಯೂ ಅಧಿಕವಾಗಿದೆ.
ಮಕ್ಕಳು, ವೃದ್ಧರಿಗೆ ಅಪಾಯ: ಆಸ್ಪತ್ರೆ ಆವರಣಕ್ಕೆ ದನ ಕರುಗಳು ಹಾಗೂ ಇತರೆ ಪ್ರಾಣಿಗಳು ಬಾರದಿರಲಿ ಎಂಬ ಉದ್ದೇಶದಿಂದ ಇದನ್ನು ಹಾಕಿದ್ದಾರೆ. ಆದರೆ, ಸಾರ್ವಜನಿಕರಿಗೆ ಅದರಲ್ಲೂ ಮಕ್ಕಳು, ವಯೋವೃದ್ಧರಿಗೆ ಇದರಿಂದ ಅಧಿಕ ಅಪಾಯವಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ತಾಲೂಕು ಆಸ್ಪತ್ರೆ ಆಡಳಿತ ಮಂಡಳಿಯು ಕೂಡಲೇ ಕ್ರಮ ವಹಿಸಬೇಕು ಎಂಬುದು ಪ್ರಕಾಶ್, ನಾಗರಾಜು ಅವರ ಆಗ್ರಹವಾಗಿದೆ.
ಪ್ರಸುತ್ತ ಸಾಲಿನಲ್ಲಿ ತಾಪಂನಿಂದ ಮತ್ತೆ 2.45 ಲಕ್ಷ ರೂ. ಅನುದಾನವನ್ನು ಕಟ್ಟಡ ಕಾಮಗಾರಿಗೆ ಬಿಡುಗಡೆ ಮಾಡಿದೆ. ಬಾಕಿ ಇರುವ ಕೆಲಸವು ಪೂರ್ಣಗೊಂಡ ಬಳಿಕ ಡಯಾಲಿಸಿಸ್ ಕೇಂದ್ರವನ್ನು ತೆರೆಯುವ ನಿಟ್ಟಿನಲ್ಲಿ ಗಮನಹರಿಸಲಾಗುವುದು. –ಡಾ.ಶ್ರೀಧರ್, ಆಡಳಿತಾಧಿಕಾರಿ, ಯಳಂದೂರು ತಾಲೂಕು ಆಸ್ಪತ್ರೆ
-ಪೈರೋಜ್ ಖಾನ್