Advertisement

ಡೈಲಾಗ್‌ ಹೇಳಿದರೆ ಕಥೆ ಗೊತ್ತಾಗುತ್ತೆ ಸಾರ್‌…

02:39 PM May 26, 2017 | |

ನಿರ್ಮಾಪಕ ಮಹಾದೇವ್‌ ಈ ಹಿಂದೆ ಗಾರೆ ಕೆಲಸ ಮಾಡಿಕೊಂಡಿದ್ದರಂತೆ. ಈಗ ಸಿನಿಮಾ ಮಾಡಿದ್ದು, ಸಖತ್‌ ವಿಭಿನ್ನವಾಗಿದೆ ಎಂದರು. ಚಿತ್ರತಂಡದವರಲ್ಲಿ ಕಥೆಯ ಬಗ್ಗೆ ಹೇಳಿಬಿಟ್ಟರೆ ಸಿನಿಮಾದ ಇಡೀ ಕತೆ ಗೊತ್ತಾಗುತ್ತದೆ ಎಂಬ ಭಯ ಕಾಡುತ್ತಿತ್ತು.

Advertisement

“ಇದು ತುಂಬಾ ಡಿಫ‌ರೆಂಟ್‌ ಸಿನಿಮಾ. ಈ ಚಿತ್ರದಲ್ಲಿನ ಒಂದು ಸನ್ನಿವೇಶವಾಗಲಿ, ಒಂದು ಡೈಲಾಗ್‌ ಆಗಲಿ ಈ ಹಿಂದೆ ಯಾವ ಸಿನಿಮಾದಲ್ಲೂ ಬಂದಿಲ್ಲ. ಎಲ್ಲೂ ಕೇಳಿರಕ್ಕೂ ಇಲ್ಲ. ಅಷ್ಟೊಂದು ಡಿಫ‌ರೆಂಟ್‌ ಆಗಿದೆ. ಹೊಸಬರು ಏನು ಮಾಡಿರ್ತಾರೆಂಬ ತಾತ್ಸಾರ ಬೇಡ. ನಿಮಗೆ ಇಷ್ಟವಾಗದಿದ್ದರೆ ನೇರವಾಗಿ ಬಂದು ಬೈಯಿರಿ. ಥಿಯೇಟರ್‌ ಹತ್ರನೇ ಇರಿ¤àನಿ …’

ಹೀಗೆ ಸಿಕ್ಕಾಪಟ್ಟೆ ವಿಶ್ವಾಸದೊಂದಿಗೆ ಹೇಳಿಕೊಂಡರು ನಿರ್ದೇಶಕ ಸಂದೀಪ್‌ ದಕ್ಷ. ಅವರು ಅಷ್ಟೆಲ್ಲಾ ಹೇಳಿಕೊಂಡಿದ್ದು “ಈ ಕಲರವ’ ಚಿತ್ರದ ಬಗ್ಗೆ. ಈ ಚಿತ್ರ ಜೂನ್‌ 2ಕ್ಕೆ ತೆರೆಕಾಣುತ್ತಿದೆ. ನವೀನ್‌ ಕೃಷ್ಣ ಈ ಚಿತ್ರದ ನಾಯಕ. ನಿರ್ದೇಶಕ ಸಂದೀಪ್‌ ಅವರ ಅತೀವ ವಿಶ್ವಾಸದ ಮಾತು ಕಂಡು ಪತ್ರಕರ್ತರಿಗೆ ಕುತೂಹಲ ಹೆಚ್ಚಿತು.

“ಈ ಹಿಂದಿನ ಸಿನಿಮಾಗಳಲ್ಲಿ ಬಾರದಿರುವಂತಹ ಕತೆ, ಡೈಲಾಗ್‌ ಏನಿರಬಹುದು’ ಎಂಬ ಕುತೂಹಲದೊಂದಿಗೆ ನಿರ್ದೇಶಕರಲ್ಲಿ ಒಂದೆರಡು ಡೈಲಾಗ್‌ ಸ್ಯಾಂಪಲ್‌ ಅಥವಾ ಒನ್‌ಲೈನ್‌ ಹೇಳಿ ಎಂದರೆ, ಸಂದೀಪ್‌ ಮಾತ್ರ ಅದಕ್ಕೆ ರೆಡಿಯಿಲ್ಲ.

“ನಾನು ಈಗ ಹೇಳಿದರೆ ಇಡೀ ಸಿನಿಮಾದ ಸ್ವಾರಸ್ಯ ಹೊರಟು ಹೋಗುತ್ತದೆ. ಅವೆಲ್ಲವನ್ನು ನೀವು ಥಿಯೇಟರ್‌ನಲ್ಲಿ ನೋಡಿ’ ಎನ್ನುವ ಉತ್ತರ ಸಂದೀಪ್‌ರಿಂದ ಬಂತು. ಒಂದು ಡೈಲಾಗ್‌ ಹೇಳಿದರೆ ಇಡೀ ಸಿನಿಮಾ ಸ್ವಾರಸ್ಯ ಹೋಗುವುದಾದರೆ ಅದೆಂಥ ಸಿನಿಮಾ, ಇಡೀ ಸಿನಿಮಾ ಒಂದು ಡೈಲಾಗ್‌ ಮೇಲೆ ನಿಂತಿರುತ್ತಾ ಎಂಬ ಪ್ರಶ್ನೆಯೂ ಬಂತು. ಆದರೆ, ಸಂದೀಪ್‌ ಮಾತ್ರ “ನಮ್ಮ ಸಿನಿಮಾ ಡಿಫ‌ರೆಂಟ್‌’ ಎಂದಷ್ಟೇ ಹೇಳಿದರೆ ಹೊರತು ಸಿನಿಮಾ ಬಗ್ಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ. ಇಡೀ ಸಿನಿಮಾ 30-40 ವರ್ಷಗಳ ಹಿಂದಿನ ಹಳ್ಳಿಯಲ್ಲಿ ನಡೆಯುತ್ತದೆಯಂತೆ. ಜೊತೆಗೆ ಒಂದು ಮಾμಯಾ ಸುತ್ತ ಸಿನಿಮಾ ಸುತ್ತಲಿದೆಯಂತೆ. ಈ ಸಿನಿಮಾ ಬಗ್ಗೆ ನಿಮಗೇನಾದರೂ ಕುತೂಹಲವಿದ್ದರೆ ನೀವು ಥಿಯೇಟರ್‌ಗೆ ಹೋಗಿ ನೋಡಿ.

Advertisement

ನಿರ್ಮಾಪಕ ಮಹಾದೇವ್‌ ಈ ಹಿಂದೆ ಗಾರೆ ಕೆಲಸ ಮಾಡಿಕೊಂಡಿದ್ದರಂತೆ. ಈಗ ಸಿನಿಮಾ ಮಾಡಿದ್ದು, ಸಖತ್‌ ವಿಭಿನ್ನವಾಗಿದೆ ಎಂದರು. 

ಎಲ್ಲರಲ್ಲೂ ಕಥೆಯ ಒನ್‌ಲೈನ್‌ ಹೇಳಿಬಿಟ್ಟರೆ ನಮ್ಮ ಸಿನಿಮಾದ ಇಡೀ ಕತೆ ಗೊತ್ತಾಗುತ್ತದೆ ಎಂಬಂತಹ ಭಯ ಕಾಡುತ್ತಿತ್ತು. ಅಂದಹಾಗೆ, ನವೀನ್‌ ಕೃಷ್ಣ ಬಂದಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next